ಇವತ್ತಿನ ಪೀಳಿಗೆಯವರಿಗೆ ಕನಸಿನ ಉದ್ಯೋಗ ಯಾವುದು ಎಂದು ಕೇಳಿದರೆ ಹೆಚ್ಚಿನವರು ಗೂಗಲ್, ಆ್ಯಪಲ್, ಫೇಸ್ಬುಕ್ ಇತ್ಯಾದಿ ಟೆಕ್ ದೈತ್ಯ ಸಂಸ್ಥೆಗಳ ಹೆಸರು ಹೇಳಬಹುದು. ಈ ಟೆಕ್ ಕಂಪನಿಗಳ ಮುಖ್ಯಸ್ಥರಿಗೆ ಹಿಂದೆಲ್ಲಾ ಯಾವ ಕನಸುಗಳಿದ್ದಿರಬಹುದು? ಬಾಲ್ಯದಲ್ಲಿ ನಾವು ಆಸೆ ಪಡುವುದು ಒಂದು, ಆಗುವುದು ಇನ್ನೊಂದು. ಇದು ಸಾಮಾನ್ಯ. ಅಂತೆಯೇ, ಗೂಗಲ್ನ ಸಿಇಒ ಸುಂದರ್ ಪಿಚೈ (Google CEO Sundar Pichai) ಅವರಿಗೆ ಬಾಲ್ಯದ ಕನಸೇ ಬೇರೆ ಇತ್ತಂತೆ. ತಾನು ಗೂಗಲ್ನ ಚುಕ್ಕಾಣಿ ಹಿಡಿಯುತ್ತೇನೆ ಎಂದು ಅವರು ಕನಸಿನಲ್ಲೂ ಎಣಿಸಿರಲಿಲ್ಲ.
ಚೆನ್ನೈ ಸಂಜಾತರಾದ ಸುಂದರ್ ಪಿಚೈ ಎಂಜಿನಿಯರ್ ಆಗಿದ್ದು ಕಾಕತಾಳೀಯವಾಗಿ. ಕ್ರಿಕೆಟ್ ಆಟಗಾರನಾಗಬೇಕು ಎಂಬುದು ಅವರ ಬಾಲ್ಯದ ಮಹೋನ್ನತ ಕನಸಾಗಿತ್ತು. ಆ ಕಾಲಕ್ಕೆ ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹೆಸರುವಾಸಿಯಾಗಿದ್ದವರು. ಸುಂದರ್ ಕೂಡ ಅವರಿಬ್ಬರ ದೊಡ್ಡ ಅಭಿಮಾನಿ. ಅವರು ಕ್ರಿಕೆಟ್ ಪ್ರೇಮಿ ಮಾತ್ರವೇ ಅಲ್ಲ ತಮ್ಮ ಶಾಲಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಅನೇಕ ಟೂರ್ನಮೆಂಟ್ಗಳನ್ನು ಗೆಲ್ಲಿಸಿದ್ದಾರೆ. ಚೆನ್ನೈನ ಜವಾಹರ್ ವಿದ್ಯಾಲಯದಲ್ಲಿ ಅವರು ಓದಿದ್ದು.
ಇದನ್ನೂ ಓದಿ: Lakshadweep Resorts: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್ಗಳು; ತಾಜ್ ಗ್ರೂಪ್ನ ಯೋಜನೆ
ಎಂಜಿನಿಯರಿಂಗ್ ಆಗಲು ಇಷ್ಟ ಇಲ್ಲದಿದ್ದರೂ ಐಐಟಿ ಖರಗ್ಪುರ್ನಲ್ಲಿ ಮೆಟಲರ್ಜಿಕಲ್ ಎಂಜನಿಯರಿಂಗ್ ಓದಿದ್ದಾರೆ. ಬಳಿಕ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಮತ್ತು ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
2004ರಲ್ಲಿ ಗೂಗಲ್ಗೆ ಸೇರಿದ ಅವರು ಹಂತ ಹಂತವಾಗಿ ಬಡ್ತಿ ಪಡೆದು 2015ರಲ್ಲಿ ಸಿಇಒ ಸ್ಥಾನಕ್ಕೆ ಏರಿದ್ದಾರೆ. ಅವರ ಒಂದು ವರ್ಷದ ಒಟ್ಟು ಸಂಬಳ ಬರೋಬ್ಬರಿ 1,663 ಕೋಟಿ ರೂ. ಅಂದರೆ ತಿಂಗಳಿಗೆ 13ರಿಂದ 14 ಕೋಟಿ ರೂ ಸಂಬಳ ಪಡೆಯುತ್ತಾರೆ. ವಿಶ್ವದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಸಿಇಒಗಳ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ