ನವದೆಹಲಿ, ಆಗಸ್ಟ್ 30: ಅತಿಹೆಚ್ಚು ಬೇಡಿಕೆ ಇದ್ದ ಸಂದರ್ಭದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಲು ಹೋದರೆ ಬೆಲೆ ತೀರಾ ಹೆಚ್ಚಿರುತ್ತದೆ ಎಂಬುದು ಗೊತ್ತಿರಬಹುದು. ಕೆಲವೊಮ್ಮೆ ಮಾಮೂಲಿಗಿಂತ ಎರಡು ಅಥವಾ ಮೂರು ಪಟ್ಟು ಬೆಲೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ಗೂಗಲ್ ಫ್ಲೈಟ್ಸ್ (Google Flights) ಹೊಸ ಫೀಚರ್ ಪರಿಚಯಿಸಿದೆ. ಯಾವ ಸಮಯದಲ್ಲಿ ಫ್ಲೈಟ್ ಟಿಕೆಟ್ ಬೆಲೆ ಕಡಿಮೆ ಇರುತ್ತದೆ ಎಂಬುದನ್ನು ತಿಳಿಯಲು ಈ ಹೊಸ ಫೀಚರ್ ಸಹಾಯ ಮಾಡುತ್ತದೆ. ಗೂಗಲ್ ಸಂಸ್ಥೆ ತನ್ನ ಬ್ಲಾಗ್ನಲ್ಲಿ ಈ ಬಗ್ಗೆ ವಿವರ ನೀಡಿದೆ.
ಗೂಗಲ್ ಫ್ಲೈಟ್ಸ್ನಲ್ಲಿ ಇಂಥದ್ದೇ ಎರಡು ಬೇರೆ ಫೀಚರ್ಗಳಿವೆ. ಫ್ಲೈಟ್ ಬೆಲೆ ಏರಿಳಿತದ ಬಗ್ಗೆ ಅಲರ್ಟ್ ಮಾಡುತ್ತದೆ ಒಂದು ಫೀಚರ್. ಹಾಗೆಯೇ, ಬೆಲೆ ಖಾತ್ರಿ ಆಯ್ಕೆ ಇನ್ನೊಂದು ಫೀಚರ್. ಅದರ ಜೊತೆಗೆ ಈಗ ಅತ್ಯಂತ ಕಡಿಮೆ ಫ್ಲೈಟ್ ಟಿಕೆಟ್ ಬೆಲೆ ಇರುವ ಸಮಯ ಯಾವುದು ಎಂಬುದನ್ನು ತಿಳಿಸುವ ಹೆಚ್ಚುವರಿ ಫೀಚರ್ ಅನ್ನು ಗೂಗಲ್ ಪರಿಚಯಿಸಿದೆ.
ನೀವು ಪ್ರಯಾಣಿಸಬೇಕೆಂದಿರುವ ಸಮಯ ಮತ್ತು ಸ್ಥಳದ ವಿವರ ಕೊಟ್ಟರೆ ಗೂಗಲ್ ಫ್ಲೈಟ್ಸ್ ನೀವು ಎಷ್ಟು ದಿನ ಮುನ್ನ ಟಿಕೆಟ್ ಬುಕ್ ಮಾಡಿದರೆ ಬೆಲೆ ಕಡಿಮೆ ಇರುತ್ತದೆ ಎಂಬುದನ್ನು ಸಜೆಸ್ಟ್ ಮಾಡಬಹುದು. ಹಿಂದಿನ ಬೆಲೆ ಇತಿಹಾಸವನ್ನು ಗ್ರಹಿಸಿ ಗೂಗಲ್ ಫ್ಲೈಟ್ಸ್ನ ಈ ಹೊಸ ಫೀಚರ್, ಸೂಕ್ತ ಬುಕಿಂಗ್ ದಿನ ಯಾವುದು ಎಂದು ಸಲಹೆ ನೀಡುತ್ತದೆ.
ಇದನ್ನೂ ಓದಿ: Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?
ಪ್ರೈಸ್ ಗ್ಯಾರಂಟಿ ಆಪ್ಷನ್ ಎಂಬುದು ಗೂಗಲ್ ಫ್ಲೈಟ್ಸ್ನಲ್ಲಿ ಕುತೂಹಲಕಾರಿ ಎನಿಸುವ ಫೀಚರ್. ಇದು ನೀಡುವ ಸಲಹೆ ಪ್ರಕಾರ ನೀವು ಫ್ಲೈಟ್ ಬುಕ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆ ಬಳಿಕ ಟಿಕೆಟ್ ಬೆಲೆ ಇಳಿದರೆ ಹೆಚ್ಚುವರಿ ಹಣವನ್ನು ಗೂಗಲ್ ಪೇ ಮೂಲಕ ನಿಮಗೆ ರೀಫಂಡ್ ಮಾಡಲಾಗುತ್ತದೆ.
ಇದು ಬಹಳ ಉಪಯೋಗ ಎನಿಸುವ ಫೀಚರ್. ನಿಮ್ಮ ಯೋಜಿತ ಮಾರ್ಗದಲ್ಲಿ ಫ್ಲೈಟ್ ಟಿಕೆಟ್ ಬೆಲೆಯ ಏರಿಳಿತವಾಗುತ್ತಿದ್ದಲ್ಲಿ ಇದು ಅಲರ್ಟ್ ಮಾಡುತ್ತದೆ.
ಇದನ್ನೂ ಓದಿ: ಉಗಾಂಡ ದೇಶದಲ್ಲಿ ಐಪಿಒ ದಾಖಲೆ ಬರೆಯಹೊರಟಿರುವ ಏರ್ಟೆಲ್; ಅತಿದೊಡ್ಡ ಷೇರುಮಾರಾಟಕ್ಕೆ ಮುಂದು
ಈ ಮೂರು ಫೀಚರ್ಗಳನ್ನು ಗೂಗಲ್ ಪ್ರಾಯೋಗಿಕವಾಗಿ ಪರಿಚಯಿಸಿದೆ. ನಿಮಗೆ ಈ ಫೀಚರ್ನಿಂದ ಅಲರ್ಟ್ ಸಿಗಬೇಕಾದರೆ ಗೂಗಲ್ ಲಾಗಿನ್ ಆಗಿದ್ದಿರಬೇಕು ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ