Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು. ಕಂಪೆನಿಯ ಆದ್ಯತೆ […]

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 14, 2022 | 6:08 PM

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು.

ಕಂಪೆನಿಯ ಆದ್ಯತೆ ವಿತರಣೆಗೆ ವಿಶೇಷ ಸಮಿತಿಯ ನಿರ್ದೇಶಕರು 71,176,839 ಈಕ್ವಿಟಿ ಷೇರುಗಳನ್ನು ಪೂರ್ತಿಯಾಗಿ ಪಾವತಿಸಿದ 5 ರೂಪಾಯಿಯ ಮುಖಬೆಲೆಯ ಷೇರನ್ನು ಆದ್ಯತೆಯ ಆಧಾರದಲ್ಲಿ ಗೂಗಲ್ ಇಂಟರ್​ನ್ಯಾಷನಲ್ ಎಲ್​ಎಲ್​ಸಿಗೆ ಇಶ್ಯೂ ಬೆಲೆ ಪ್ರತಿ ಷೇರಿಗೆ ರೂ. 734ರಂತೆ (ಪ್ರತಿ ಷೇರಿಗೆ 729 ರೂಪಾಯಿ ಪ್ರೀಮಿಯಂ ಒಳಗೊಂಡಂತೆ) ವಿತರಿಸಲು ಅನುಮತಿಸಿದ್ದಾರೆ ಎಂದು ಬಿಎಸ್​ಇಗೆ ಗುರುವಾರ ತಿಳಿಸಲಾಗಿದೆ.

ಇದರ ಫಲಿತವಾಗಿ ಷೇರು ವಿತರಣೆಯ ನಂತರದಲ್ಲಿ ಕಂಪೆನಿಯ ಶೇ 1.2ರಷ್ಟು- ಪೂರ್ತಿ ಡೈಲ್ಯೂಟ್ ಆದ ಆಧಾರದಲ್ಲಿ ಶೇ 1.17ರಷ್ಟು ಪಾಲನ್ನು ಗೂಗಲ್ ಹೊಂದಿರಲಿದೆ. ಕಳೆದ ವಾರ ಭಾರತದ ಸ್ಪರ್ಧಾ ಆಯೋಗ ಅನುಮತಿ ನೀಡಿದ ಮೇಲೆ ಈ ಘೋಷಣೆ ಬಂದಿದೆ.

ಈ ಹಿಂದೆ 2020ರ ಜುಲೈನಲ್ಲಿ ಗೂಗಲ್​ನಿಂದ ರಿಲಯನ್ಸ್​ ಜಿಯೋದಲ್ಲಿ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.

Published On - 6:08 pm, Thu, 14 July 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು