UIDAI Face Authentication App: ಯುಐಡಿಎಐನಿಂದ ಮುಖದ ದೃಢೀಕರಣ ಆ್ಯಪ್ ಆರಂಭ; ಇದನ್ನು ಬಳಸುವುದು ಹೇಗೆ?

ಯುಐಡಿಎಐನಿಂದ ಮುಖ ದೃಢೀಕರಣ ಆ್ಯಪ್ ಆರಂಭಿಸಲಾಗಿದೆ. ಅದನ್ನು ಬಳಸುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರಣೆ ಇಲ್ಲಿದೆ.

UIDAI Face Authentication App: ಯುಐಡಿಎಐನಿಂದ ಮುಖದ ದೃಢೀಕರಣ ಆ್ಯಪ್ ಆರಂಭ; ಇದನ್ನು ಬಳಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 14, 2022 | 3:16 PM

ಆಧಾರ್ (Aadhaar) ಹೊಂದಿರುವವರ ಗುರುತನ್ನು ದೃಢೀಕರಿಸುವ UIDAIನಿಂದ ಮುಖದ ದೃಢೀಕರಣವನ್ನು (Face Authentication) ವಿಧಾನವಾಗಿ ಬಳಸಲು ಪ್ರಾರಂಭಿಸಿದೆ. ಒಮ್ಮೆ ನಿಮ್ಮ ಮುಖದ ದೃಢೀಕರಣ ಯಶಸ್ವಿಯಾದರೆ ಅದು ನಿಮ್ಮ ಗುರುತನ್ನು ಪರಿಶೀಲಿಸುತ್ತದೆ. UIDAI ಇತ್ತೀಚೆಗೆ ಆಧಾರ್ ಮುಖದ ದೃಢೀಕರಣ ಆರ್​ಡಿ ಸೇವಾ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿದ್ದು, ಇದು ದೃಢೀಕರಣ ಪ್ರಕ್ರಿಯೆಗಾಗಿ ಲೈವ್ ವ್ಯಕ್ತಿಯ ಮುಖವನ್ನು ಸೆರೆ ಹಿಡಿಯಲು ಆಧಾರ್ ದೃಢೀಕರಣ ಬಳಕೆದಾರರ ಏಜೆನ್ಸಿಗಳಿಗೆ (AUA) ಅನುಮತಿಸುತ್ತದೆ. ಈ ಹೊಸ ಪರಿಶೀಲನೆ ಪ್ರಕ್ರಿಯೆಯ ಮೂಲಕ ಆಧಾರ್ ದಾಖಲಾತಿ ಸಮಯದಲ್ಲಿ ಸೆರೆಹಿಡಿಯಲಾದ UIDAI ಡೇಟಾಬೇಸ್‌ಗಳಲ್ಲಿ ಆಧಾರ್ ಹೊಂದಿರುವವರ ನಿಜವಾದ ಗುರುತನ್ನು ವ್ಯಾಲಿಡೇಟ್ ಮಾಡಲಾಗುತ್ತದೆ ಮತ್ತು ದಾಖಲಿಸಲಾಗುತ್ತದೆ.

ಈ ಆಧಾರ್ ಮುಖದ ದೃಢೀಕರಣ ಆರ್​ಡಿ ಸೇವಾ ಅಪ್ಲಿಕೇಷನ್ ಅನ್ನು ಜೀವನಪ್ರಮಾಣ್​, ಸಾರ್ವಜನಿಕ ವಿತರಣೆ ವ್ಯವಸ್ಥೆ, ಸ್ಕಾಲರ್‌ಶಿಪ್ ಯೋಜನೆಗಳು, ಕೋವಿನ್ (COWIN), ರೈತ ಕಲ್ಯಾಣ ಯೋಜನೆಗಳಂತಹ ಹಲವಾರು ಇತರ ಅಪ್ಲಿಕೇಷನ್‌ಗಳಿಗೆ ಆಧಾರ್ ಮುಖದ ದೃಢೀಕರಣಕ್ಕಾಗಿ ಬಳಸಬಹುದು. ಅಧಿಕೃತ UIDAI ಟ್ವೀಟ್ ಪ್ರಕಾರ, “ನಿವಾಸಿಗಳು ಈಗ UIDAI RDApp ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಮುಖ ದೃಢೀಕರಣ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ. ಇದನ್ನು ಜೀವನ್‌ಪ್ರಮಾಣ್, ಸಾರ್ವಜನಿಕ ವಿತರಣೆ ವ್ಯವಸ್ಥೆ, ಸ್ಕಾಲರ್‌ಶಿಪ್ ಯೋಜನೆಗಳು, COWIN, ರೈತ ಕಲ್ಯಾಣ ಯೋಜನೆಗಳಂತಹ ವಿವಿಧ ಆಧಾರ್ ದೃಢೀಕರಣ ಅಪ್ಲಿಕೇಷನ್‌ಗಳಿಗೆ ಬಳಸಬಹುದು.”

“Aadhaar FaceRD ಅಪ್ಲಿಕೇಷನ್ ಮುಖ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು, ಆಧಾರ್ ದೃಢೀಕರಣಕ್ಕಾಗಿ ಲೈವ್ ವ್ಯಕ್ತಿಯ ಮುಖವನ್ನು ಸೆರೆ ಹಿಡಿಯುತ್ತದೆ,” ಎಂದು UIDAI ವಿಡಿಯೋ ಟ್ವೀಟ್ ಮೂಲಕ ತಿಳಿಸಿದೆ. “ಆಧಾರ್ ಮುಖ ದೃಢೀಕರಣ ತಂತ್ರಜ್ಞಾನವನ್ನು UIDAIನಿಂದ ಇನ್‌ಹೌಸ್ ಅಭಿವೃದ್ಧಿಪಡಿಸಲಾಗಿದೆ,” ಎಂದು ಸರ್ಕಾರಿ ಸಂಸ್ಥೆ ಮುಂದುವರಿದು ಹೇಳಿದೆ.

ಆಧಾರ್ ಫೇಸ್‌ಆರ್‌ಡಿ ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡುವುದು ಹೇಗೆ?

– ನಿಮ್ಮ ಮೊಬೈಲ್ ಫೋನ್‌ನ Google Play Store ಅಪ್ಲಿಕೇಷನ್‌ಗೆ ಭೇಟಿ ನೀಡಿ ಮತ್ತು Aadhaar FaceRDಗಾಗಿ ಹುಡುಕಿ

– ‘Install’ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಷನ್ ತೆರೆಯಿರಿ.

– ಮುಖದ ದೃಢೀಕರಣವನ್ನು ನಿರ್ವಹಿಸಲು ಆನ್-ಸ್ಕ್ರೀನ್ ಮುಖದ ದೃಢೀಕರಣ ಮಾರ್ಗದರ್ಶಿಯನ್ನು ಅನುಸರಿಸಿ ಮತ್ತು ‘ಮುಂದುವರಿಸಿ’ ಎಂಬುದನ್ನು ಒತ್ತಿ.

– ಯಶಸ್ವಿಯಾಗಿ ಮುಖದ ದೃಢೀಕರಣ ಮಾಡಲು ಬೆಳಕಿನ ಮೂಲದ ಕಡೆಗೆ ಮುಖ ಮಾಡಬೇಕು, ಕ್ಯಾಮೆರಾ ಹತ್ತಿರ ಚಲಿಸಬೇಕು, ವಿಭಿನ್ನ ಅಥವಾ ಸ್ಪಷ್ಟ ಹಿನ್ನೆಲೆಗೆ ಸರಿಸಿ ಮತ್ತು ಬಳಸುವ ಮೊದಲು ಕ್ಯಾಮೆರಾ ಲೆನ್ಸ್ ಅನ್ನು ಸ್ವಚ್ಛಗೊಳಿಸಬೇಕು.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ