Sign In

By signing in or creating an account, you agree with Associated Broadcasting Company's Terms & Conditions and Privacy Policy.

Alphabet Lay Off: ಗೂಗಲ್​ನ ನೂರಾರು ಮಂದಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ; ಅಮೆರಿಕದಲ್ಲಿ ಹೆಚ್ಚಾದ ನಿರುದ್ಯೋಗ ಭೂತ

ಗೂಗಲ್ ಮಾತೃ ಕಂಪನಿ ಆಲ್ಫಬೆಟ್ ತನ್ನ ಜಾಗತಿಕ ನೇಮಕಾತಿ ತಂಡದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರವುದು ತಿಳಿದುಬಂದಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಲೇ ಆಫ್ ಕ್ರಮ ಕೈಗೊಂಡ ಮೊದಲ ಟೆಕ್ ಕಂಪನಿ ಆಲ್ಫಬೆಟ್ ಆಗಿದೆ. ಈ ವರ್ಷದ ಆರಂಭದಲ್ಲಿ ಆಲ್ಫಬೆಟ್ ಬರೋಬ್ಬರಿ 12,000 ಮಂದಿಯನ್ನು ಲೇ ಆಫ್ ಮಾಡಿತ್ತು. ಅಮೆರಿಕದಲ್ಲಿ ಈಗ ನಿರುದ್ಯೋಗ ಪ್ರಮಾಣ ಮತ್ತೆ ಏರಿಕೆಯಾಗಲಿದೆ.

Alphabet Lay Off: ಗೂಗಲ್​ನ ನೂರಾರು ಮಂದಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ; ಅಮೆರಿಕದಲ್ಲಿ ಹೆಚ್ಚಾದ ನಿರುದ್ಯೋಗ ಭೂತ
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 11:07 AM

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 14: ಇಂಟರ್ನೆಟ್ ತಂತ್ರಜ್ಞಾನ ಸಂಸ್ಥೆ ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್ ಮತ್ತೆ ಲೇ ಆಫ್ (Layoffs) ಕಾರ್ಯಕ್ಕೆ ಕೈಹಾಕಿದೆ. ವರದಿ ಪ್ರಕಾರ, ಆಲ್ಫಬೆಟ್ ತನ್ನ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಹಿಂದೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ಕಿತ್ತುಹಾಕಿದ್ದ ಈ ಸಂಸ್ಥೆ ಈಗ ಅಷ್ಟು ಮಟ್ಟದಲ್ಲಿ ಲೇ ಆಫ್ ಮಾಡಿಲ್ಲ. ಮಾಧ್ಯಮಗಳಿಗೆ ಬಂದಿರುವ ಮಾಹಿತಿ ಪ್ರಕಾರ ಕೆಲ ನೂರುಗಳ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿರುವುದು ತಿಳಿದುಬಂದಿದೆ. ಗೂಗಲ್ ಇತ್ಯಾದಿ ಸಂಸ್ಥೆಗಳಿಗೆ ನೇಮಕಾತಿ ಮಾಡುವ ಮಂದಿಯೇ ಕೆಲಸ ಕಳೆದುಕೊಂಡಿರುವುದು. ತನ್ನ ಗ್ಲೋಬಲ್ ರೆಕ್ರುಟಿಂಗ್ ತಂಡದ (Global recruiting team) ಉದ್ಯೋಗಿಗಳೇ ಕೆಲಸ ಕಳೆದುಕೊಂಡಿದ್ದಾರೆ.

ಆಲ್ಫಬೆಟ್ ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಲೇ ಆಫ್ ಕ್ರಮಕ್ಕೆ ಕೈಹಾಕಿದ ಮೊದಲ ದೊಡ್ಡ ಟೆಕ್ ಕಂಪನಿ ಎನಿಸಿದೆ. ಆದರೆ, 2023ರ ವರ್ಷದ ಮೊದಲಾರ್ಧದಲ್ಲಿ ವಿಶ್ವದ ದೈತ್ಯ ಟೆಕ್ ಕಂಪನಿಗಳು ಭರಪೂರವಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ.

ಜನವರಿ ತಿಂಗಳಲ್ಲಿ ಆಲ್ಫಬೆಟ್ ಸಂಸ್ಥೆ ಬರೋಬ್ಬರಿ 12,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ, ಮೈಕ್ರೋಸಾಫ್ಟ್, ಅಮೇಜಾನ್ ಮೊದಲಾದ ಟೆಕ್ ದೈತ್ಯರೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದಿದೆ.

ಇದನ್ನೂ ಓದಿ: ಮೂಲ ದಾಖಲೆ ಮರಳಿಸಲು ವಿಳಂಬವಾದರೆ ದಿನಕ್ಕೆ 5,000 ರೂ ದಂಡ: ಬ್ಯಾಂಕುಗಳಿಗೆ ಆರ್​ಬಿಐ ನಿರ್ದೇಶನ

ಈ ದೊಡ್ಡ ಟೆಕ್ ಕಂಪನಿಗಳು ಈ ಕ್ಯಾಲಂಡರ್ ವರ್ಷದ ಮೂರನೇ ಕ್ವಾರ್ಟರ್​ನಲ್ಲಿ ಹೆಚ್ಚು ಉದ್ಯೋಗಕಡಿತಕ್ಕೆ ಕೈಹಾಕಿಲ್ಲ. ಆದರೆ, ಅಮೆರಿಕದ ಬೇರೆ ಹಲವು ಸಂಸ್ಥೆಗಳಿಂದ ಲೇ ಆಫ್ ಕಾರ್ಯ ನಡೆಯುತ್ತಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್​​ನಲ್ಲಿ ಅಮೆರಿಕದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲಿನ ನಿರುದ್ಯೋಗಿ ಭತ್ಯೆ ಪಡೆಯುವವರ ಸಂಖ್ಯೆ ಸೆಪ್ಟೆಂಬರ್ 9ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ಶೇ. 8ರಷ್ಟು ಏರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು