ನವದೆಹಲಿ, ಜನವರಿ 31: ಮೊಬೈಲ್ ಫೋನ್ ತಯಾರಿಕೆಗೆ ಬಳಸಲಾಗುವ ಬಿಡಿಭಾಗಗಳ ಆಮದು ಸುಂಕವನ್ನು (Import Duty) ಶೇ. 15ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕಾ ಉದ್ಯಮ (smartphone manufacturing industry) ಪ್ರಬಲಗೊಳ್ಳಲಿದೆ. ಉತ್ಪಾದನಾ ವೆಚ್ಚ ಕಡಿಮೆಗೊಳ್ಳುವುದರಿಂದ ಚೀನಾ, ವಿಯೆಟ್ನಾಂ ಮೊದಲಾದ ದೇಶಗಳಿಗೆ ಸ್ಪರ್ಧೆಯೊಡ್ಡಲು ಭಾರತೀಯ ತಯಾರಕರಿಗೆ ಸಾಧ್ಯವಾಗಲಿದೆ.
ಮೊಬೈಲ್ ಬಿಡಿಭಾಗಗಳ ಆಮದಿಗೆ ವಿಧಿಸಲಾಗುವ ಸುಂಕವನ್ನು ಕಡಿಮೆಗೊಳಿಸಬೇಕೆಂಬ ಕೂಗು ಸಾಕಷ್ಟು ಕಾಲದಿಂದ ಈ ಉದ್ಯಮದವರಿಂದ ಕೇಳುತ್ತಾ ಬಂದಿತ್ತು. ಇದೀಗ ಸರ್ಕಾರ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಂಡಿದೆ.
Government of India slashes import duty on key components used in the production of mobile phones. The import duty has been reduced from 15 per cent to 10 per cent. pic.twitter.com/22CIz9Qoch
— ANI (@ANI) January 31, 2024
ಇದನ್ನೂ ಓದಿ: Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?
ಭಾರತದಲ್ಲಿ ಈಗೀಗ ಮೊಬೈಲ್ ಫೋನ್ ತಯಾರಿಕೆ ಪ್ರಮಾಣ ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 11 ಬಿಲಿಯನ್ ಡಾಲರ್ನಷ್ಟಿತ್ತು. ಆಮದು ಸುಂಕ ಕಡಿಮೆಗೊಳಿಸಿದರೆ ಮತ್ತು ಕೆಲ ವಿಭಾಗಗಳಲ್ಲಿ ಸುಂಕವನ್ನೇ ಹಿಂಪಡೆದರೆ ಮುಂದಿನ ಎರಡು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 39 ಬಿಲಿಯನ್ ಡಾಲರ್ ಆಗಬಹುದು ಎಂದು ಇಂಡಿಯನ್ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಸಂಸ್ಥೆ ಹೇಳಿದೆ. ಅಂದರೆ ಎರಡು ವರ್ಷದಲ್ಲಿ ರಫ್ತು ಮೂರು ಪಟ್ಟು ಹೆಚ್ಚಾಗುವ ಸಂಭವನೀಯತೆ ಇದೆ.
ಆ್ಯಪಲ್, ಸ್ಯಾಮ್ಸುಂಗ್ ಮತ್ತಿತರ ಪ್ರಮುಖ ಕಂಪನಿಗಳು ಭಾರತದಲ್ಲಿ ಮೊಬೈಲ್ ತಯಾರಿಕೆ ಮಾಡುತ್ತಿವೆ. ಸ್ಯಾಮ್ಸುಂಗ್ ಬಹಳ ವರ್ಷಗಳಿಂದ ಭಾರತದಲ್ಲಿ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಮಾಡುತ್ತಿದೆ. ಚೀನಾದಲ್ಲಿ ಹೆಚ್ಚು ಅಸ್ತಿತ್ವದಲ್ಲಿದ್ದ ಆ್ಯಪಲ್ನ ಐಫೋನ್ ಪ್ರೊಡಕ್ಷನ್ ಈಗ ಭಾರತಕ್ಕೆ ಹಂತ ಹಂತವಾಗಿ ವರ್ಗವಾಗುತ್ತಿದೆ.
ಇದನ್ನೂ ಓದಿ: IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?
2023-24ರಲ್ಲಿ ಭಾರತದಲ್ಲಿ 50 ಬಿಲಿಯನ್ ಡಾಲರ್ ಮೌಲ್ಯದಷ್ಟು ಮೊಬೈಲ್ ಫೋನ್ ಉತ್ಪಾದನೆ ಆಗುವ ಸಾಧ್ಯತೆ ಇದೆ. ಮುಂದಿನ ಹಣಕಾಸು ವರ್ಷದಲ್ಲಿ (2024-25) ಇದು 55ರಿಂದ 60 ಬಿಲಿಯನ್ ಡಾಲರ್ಗೆ ಏರುವ ನಿರೀಕ್ಷೆ ಇದೆ. ಇನ್ನು, 2023-24ರಲ್ಲಿ ಭಾರತದಿಂದ ಮೊಬೈಲ್ ರಫ್ತು ಮೊತ್ತ 15 ಬಿಲಿಯನ್ ಡಾಲರ್, 2024-25ರಲ್ಲಿ 27 ಬಿಲಿಯನ್ ಡಾಲರ್ ತಲುಪಬಹುದು ಎಂಬ ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ನೊಳಗಿನ ಬಿಡಿಭಾಗಗಳ ಆಮದಿಗೆ ಸುಂಕವನ್ನು ಕಡಿಮೆ ಮಾಡಿರುವುದು ಬಹಳ ಮುಖ್ಯ ಪಾತ್ರ ವಹಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Wed, 31 January 24