ನವದೆಹಲಿ, ಡಿಸೆಂಬರ್ 8: ಇದೇ ಡಿಸೆಂಬರ್ 12ರಿಂದ 14ರವರೆಗೂ ರಾಷ್ಟ್ರರಾಜಧಾನಿ ನಗರಿಯಲ್ಲಿರುವ ಭಾರತ ಮಂಡಪಂನಲ್ಲಿ ಜಾಗತಿಕ ಕೃತಕ ಬುದ್ಧಿಮತ್ತೆ ಸಹಭಾಗಿತ್ವ ಶೃಂಗಸಭೆ (ಗ್ಲೋಬಲ್ ಪಾರ್ಟ್ನರ್ಶಿಪ್ ಆನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಮಿಟ್ 2023) ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ವರೂ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಲಿಂಕ್ಡ್ ಇನ್ ಸೋಷಿಯಲ್ ಮೀಡಿಯಾ ತಾಣದಲ್ಲಿ ಜಿಪಿಎಐ ಸಮಿಟ್ ಬಗ್ಗೆ ಪ್ರಧಾನಿಗಳು ವಿವರವಾಗಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಿಂದಲೂ ಅವರು ಟ್ವೀಟ್ ಮಾಡಿದ್ದಾರೆ.
‘ಯಂತ್ರ ಬುದ್ಧಿಮತ್ತೆ ಮತ್ತು ನಾವೀನ್ಯತೆಯಲ್ಲಿ ಸಾಧಿಸಿರುವ ಬೆಳವಣಿಗೆಯನ್ನು ಆಚರಿಸುವಂತಹ ಜಿಪಿಎಐ ಶೃಂಗಸಭೆಗೆ ನಿಮ್ಮನ್ನೆಲ್ಲಾ ಆಹ್ವಾನಿಸುತ್ತಿದ್ದೇನೆ. ಡಿಸೆಂಬರ್ 12ಕ್ಕೆ ಈ ಸಭೆ ಆರಂಭವಾಗುತ್ತದೆ. ಈ ರೋಮಾಂಚಕ ವೇದಿಕೆಯ ಭಾಗವಾಗುವುದು ನಿಮಗೆ ಇಷ್ಟವಾಗಬಹುದು ಎಂಬ ವಿಶ್ವಾಸ ನನಗಿದೆ,’ ಎಂದು ನರೇಂದ್ರ ಮೋದಿ ತಮ್ಮ ಲಿಂಕ್ಡ್ ಇನ್ ಪೋಸ್ಟ್ನಲ್ಲಿ ಮೊದಲ ಸಾಲುಗಳಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸಮೀಪ ದೇಶದ ಅತಿದೊಡ್ಡ ಐಫೋನ್ ಘಟಕ; ಹೊಸೂರಿನಲ್ಲಿ ಟಾಟಾ ಯೋಜನೆ; 50,000 ಮಂದಿಗೆ ಉದ್ಯೋಗ
‘… ಕಳೆದ 9-10 ವರ್ಷದಲ್ಲಿ ಭಾರತ ಹಾಗೂ ಅದರ ನಾಗರಿಕರು ತಂತ್ರಜ್ಞಾನ ನೆರವಿನಿಂದ ಜಿಗಿದು ಮುನ್ನುಗ್ಗಿದ್ದಾರೆ. ಬೇರೆ ದೇಶಗಳಿಗೆ ಒಂದು ತಲೆಮಾರಿನಲ್ಲಿ ಸಾಧ್ಯವಾಗಿದ್ದನ್ನು ಭಾರತ ಕೆಲವೇ ವರ್ಷಗಳಲ್ಲಿ ಸಾಧಿಸಿದೆ ಎಂದರೆ ಅತಿಶಯೋಕ್ತಿ ಎನಿಸದು. ಮೊಬೈಲ್ ಹೆಚ್ಚು ವೇಗದಲ್ಲಿ ವಿಸ್ತಾರಗೊಂಡಿದ್ದು, ಇಂಟರ್ನೆಟ್ ಕನೆಕ್ಟಿವಿಟಿ ವ್ಯಾಪ್ತಿ ಹೆಚ್ಚಿದ್ದು ಮತ್ತು ಡಿಜಿಟಲ್ ಒಳಗೊಳ್ಳುವಿಕೆಯ ಮಾದರಿಗಳನ್ನು ಸೃಷ್ಟಿಸಿದ್ದು ಈ ಕಾರ್ಯವನ್ನು ಸುಲಭವಾಗಿಸಿದೆ…. ಅದೇ ರೀತಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲೂ ಭಾರತ ದೈತ್ಯ ಜಿಗಿತಕ್ಕೆ ಸಿದ್ಧವಾಗಿದೆ…’ ಎಂದು ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ಹೇಳಿದ್ದಾರೆ.
We live in interesting times and making it even more interesting is AI, which has a positive impact on
tech 🖥️,
innovation 🧪,
healthcare 🩺,
education 📖,
agriculture 🌾
and more.https://t.co/qnF9UrqlCjWrote a @LinkedIn Post on the very exciting GPAI Summit that begins on…
— Narendra Modi (@narendramodi) December 8, 2023
ನರೇಂದ್ರ ಮೋದಿ ಅವರ ಲಿಂಕ್ಡ್ ಇನ್ ಬ್ಲಾಗ್ ಪೋಸ್ಟ್ನ ಲಿಂಕ್
ಗ್ಲೋಬಲ್ ಪಾರ್ಟ್ನರ್ಶಿಪ್ ಆನ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಫೋರಂ ಅನ್ನು 2020ರ ಜೂನ್ನಲ್ಲಿ ಆರಂಭಿಸಲಾಯಿತು. ಭಾರತವು ಈ ಫೋರಂನ ಸಂಸ್ಥಾಪಕ ದೇಶಗಳಲ್ಲಿ ಒಂದು. ಇದರಲ್ಲಿ 28 ದೇಶಗಳು ಹಾಗೂ ಯೂರೋಪಿಯನ್ ಯೂನಿಯನ್ ಸದಸ್ಯತ್ವ ಹೊಂದಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಬಳಕೆ ವಿಚಾರದಲ್ಲಿ ಇದು ಸದಸ್ಯ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 8 December 23