2021ರ ಮಾರ್ಚ್ಗೆ ಕೊನೆಗೊಂಡ 2020-21ರ ಆರ್ಥಿಕ ವರ್ಷದಲ್ಲಿ ಜಿಎಸ್ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಉದ್ಯಮಗಳಿಗೆ ಫೆಬ್ರವರಿ 28ರವರೆಗೆ ಸರ್ಕಾರ ಬುಧವಾರ ಗಡುವನ್ನು ವಿಸ್ತರಿಸಿದೆ. “2020-21 ಹಣಕಾಸು ವರ್ಷಕ್ಕೆ ಫಾರ್ಮ್ GSTR-9 ಮತ್ತು ಸ್ವಯಂ-ಪ್ರಮಾಣೀಕೃತ ಸಮನ್ವಯ ಹೇಳಿಕೆಯಲ್ಲಿ ಫಾರ್ಮ್ GSTR-9Cನಲ್ಲಿ ವಾರ್ಷಿಕ ರಿಟರ್ನ್ ಒದಗಿಸುವ ಅಂತಿಮ ದಿನಾಂಕವನ್ನು 31.12.2021ರಿಂದ 28.02.2022ಕ್ಕೆ ವಿಸ್ತರಿಸಲಾಗಿದೆ,” ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ (CBIC) ಟ್ವೀಟ್ ಮಾಡಿದೆ.
GSTR9 ಎಂಬುದು ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರು ವಾರ್ಷಿಕವಾಗಿ ಸಲ್ಲಿಸುವ ವಾರ್ಷಿಕ ರಿಟರ್ನ್ ಆಗಿದೆ. ಇದು ವಿವಿಧ ತೆರಿಗೆ ಮುಖ್ಯಸ್ಥರ ಅಡಿಯಲ್ಲಿ ಮಾಡಿದ ಅಥವಾ ಸ್ವೀಕರಿಸಿದ ಬಾಹ್ಯ ಹಾಗೂ ಒಳಗಿನ ಪೂರೈಕೆಗಳ ವಿವರಗಳನ್ನು ಒಳಗೊಂಡಿದೆ. GSTR-9C ಎನ್ನುವುದು GSTR-9 ಮತ್ತು ಆಡಿಟ್ ಮಾಡಿದ ವಾರ್ಷಿಕ ಹಣಕಾಸು ಹೇಳಿಕೆ ಮಧ್ಯೆ ಸಮನ್ವಯದ ಹೇಳಿಕೆಯಾಗಿದೆ.
ವಾರ್ಷಿಕ ಆದಾಯ 2 ಕೋಟಿ ರೂಪಾಯಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರಿಗೆ ಮಾತ್ರ ರಿಟರ್ನ್ ಒದಗಿಸುವುದು ಕಡ್ಡಾಯವಾಗಿದೆ. ಆದರೆ ರೂ. 5 ಕೋಟಿಗಿಂತ ಹೆಚ್ಚಿನ ಒಟ್ಟು ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳು ಮಾತ್ರ ಸಮನ್ವಯ ಹೇಳಿಕೆಯನ್ನು ಒದಗಿಸಬೇಕು.
ಇದನ್ನೂ ಓದಿ: GST: ಪರೋಕ್ಷ ತೆರಿಗೆ ಪದ್ಧತಿ ಬಿಗಿ ಮಾಡುವ ಸಲುವಾಗಿ ಜನವರಿಯಿಂದ ಜಿಎಸ್ಟಿಯಲ್ಲಿ ಹತ್ತಕ್ಕೂ ಹೆಚ್ಚು ಬದಲಾವಣೆ