GST: ಪರೋಕ್ಷ ತೆರಿಗೆ ಪದ್ಧತಿ ಬಿಗಿ ಮಾಡುವ ಸಲುವಾಗಿ ಜನವರಿಯಿಂದ ಜಿಎಸ್​ಟಿಯಲ್ಲಿ ಹತ್ತಕ್ಕೂ ಹೆಚ್ಚು ಬದಲಾವಣೆ

GST: ಪರೋಕ್ಷ ತೆರಿಗೆ ಪದ್ಧತಿ ಬಿಗಿ ಮಾಡುವ ಸಲುವಾಗಿ ಜನವರಿಯಿಂದ ಜಿಎಸ್​ಟಿಯಲ್ಲಿ ಹತ್ತಕ್ಕೂ ಹೆಚ್ಚು ಬದಲಾವಣೆ
ಸಾಂದರ್ಭಿಕ ಚಿತ್ರ

2022ರ ಜನವರಿಯಿಂದ ಪರೋಕ್ಷ ತೆರಿಗೆಗಳಲ್ಲಿ ಬದಲಾವಣೆ ತರುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಯಾವುವು ಆ ಬದಲಾವಣೆಗಳು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Dec 23, 2021 | 1:55 PM

ಪರೋಕ್ಷ ತೆರಿಗೆ ಪದ್ಧತಿಯನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶದೊಂದಿಗೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ಸಿಜಿಎಸ್​ಟಿ) ಕಾಯ್ದೆಗೆ ಜನವರಿ 1, 2022ರಿಂದ ಹತ್ತಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಲು ತೀರ್ಮಾನ ಕೈಗೊಂಡಿದೆ. ಈ ವರ್ಷದ ಆರಂಭದಲ್ಲಿ ಸಂಸತ್​ನಲ್ಲಿ ಅನುಮೋದನೆಗೊಂಡ ಹಣಕಾಸು ಕಾಯ್ದೆ 2021ರ ಭಾಗವಾಗಿ ಈಗ ಆ ಬದಲಾವಣೆ ಮಾಡಲಾಗುತ್ತಿದೆ. ಪೂರೈಕೆಯಲ್ಲಿನ ತೆರಿಗೆ, ತೆರಿಗೆ ಕ್ರೆಡಿಟ್​ನ ಅರ್ಹತೆ ಮತ್ತು ಕೆಲವು ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸುವುದಕ್ಕೆ ಇರುವ ನಿಯಮಾವಳಿಗಳು ಈ ಬದಲಾವಣೆಗಳಲ್ಲಿ ಒಳಗೊಂಡಿವೆ. ತಿದ್ದುಪಡಿಗಳ ಪೈಕಿ ಒಂದರಲ್ಲಿ ಹೇಳಿರುವಂತೆ, ವೈಯಕ್ತಿಕವಾಗಿ ಅಲ್ಲದೆ ವ್ಯಕ್ತಿಯಿಂದ ಸದಸ್ಯರಿಗೆ ಅಥವಾ ನಗದು, ಮುಂದೂಡಿದ ಪಾವತಿ ಅಥವಾ ಇತರ ಮೌಲ್ಯಯುತವಾದದ್ದನ್ನು ನೀಡಿದಲ್ಲಿ ತೆರಿಗೆ ಒಳಗೊಂಡ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಸದಸ್ಯರಿಂದ ಸಂಸ್ಥೆ ಜತೆಗೆ ವಹಿವಾಟು ನಡೆದರೂ ಹಾಗೇ ಪರಿಗಣಿಸಲಾಗುತ್ತದೆ. ಇದರ ಅರ್ಥ ಏನೆಂದರೆ, ಕ್ಲಬ್​ಗಳು, ಅಸೋಸಿಯೇಷನ್​ಗಳು ತಮ್ಮ ಸದಸ್ಯರ ಜತೆಗೆ ನಡೆಸುವ ವಹಿವಾಟುಗಳು ಸಹ ಜಿಎಸ್​ಟಿಗೆ ಒಳಪಡುತ್ತದೆ.

ಮತ್ತೊಂದು ನಿಯಮಾವಳಿಯಂತೆ, ಉದ್ಯಮಗಳು ಖರೀದಿಸುವ ಕಚ್ಚಾ ವಸ್ತುಗಳು ಮತ್ತು ಪಡೆಯುವ ಸೇವೆಗಳಿಗೆ ಪಾವತಿಸುವ ತೆರಿಗೆಯ ಕ್ರೆಡಿಟ್​ಗೆ ಸಂಬಂಧಿಸಿದ್ದಾಗಿದೆ. ತಿಂಗಳ ಮಾರಾಟ ರಿಟರ್ನ್​ನಲ್ಲಿ (ಫಾರ್ಮ್​ ಜಿಎಸ್​ಟಿಆರ್​-1ರಲ್ಲಿ) ಒಂದು ವೇಳೆ ಮಾರಾಟಗಾರರು ಇನ್​ವಾಯ್ಸ್​ನಲ್ಲಿ ವಸ್ತುಗಳ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಆ ವಸ್ತುಗಳ ಮೇಲೆ ಪಾವತಿಸಿದ ತೆರಿಗೆಗೆ ಕ್ರೆಡಿಟ್ ಪಡೆಯುವುದಕ್ಕೆ ಸಾಧ್ಯವಿಲ್ಲ. ತೆರಿಗೆ ಕಳುವನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳು ತೆರಿಗೆ ಕ್ರೆಡಿಟ್​ಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಬಿಗಿಗೊಳಿಸಿದ್ದಾರೆ. ನಕಲಿ ಇನ್​ವಾಯ್ಸ್​ ಬಳಸಿ, ಪರೋಕ್ಷ ತೆರಿಗೆ ಕಳುವಿನಿಂದ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಬಿಗಿಯಾದ ತೆರಿಗೆ ಕ್ರೆಡಿಟ್ ನಿಯಮಗಳಿಂದಾಗಿ ತಿಂಗಳ ಮಾರಾಟ ರಿಟರ್ನ್ಸ್​ನಲ್ಲಿ ಪೂರೈಕೆದಾರರು ವಹಿವಾಟುಗಳ ಬಗ್ಗೆ ಮಾಹಿತಿ ಪ್ರಾಮಾಣಿಕವಾಗಿ ತೋರಿಸುತ್ತಾರೆ.

ತೆರಿಗೆ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ರಿಪೋರ್ಟ್​ ಅಗತ್ಯಗಳನ್ನು ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಸರ್ಕಾರದ ಉದ್ದೇಶವಾಗಿದೆ. ಇದರೊಂದಿಗೆ ಉದ್ಯಮಗಳಿಗೂ ಸಹ ತಾವು ವಿಶ್ವಾಸಾರ್ಹ ಮತ್ತು ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುವ ಪೂರೈಕೆದಾರರಿಂದಷ್ಟೇ ಕಚ್ಚಾ ವಸ್ತುಗಳನ್ನು ಖರೀದಿಸಬೇಕು ಎಂದು ಉತ್ತೇಜಿಸಿದಂತಾಗುತ್ತದೆ. ಈ ನಿಯಮಾವಳಿಳನ್ನು ಉಲ್ಲಂಘನೆ ಮಾಡಿ ಸರಕುಗಳನ್ನು ಸಂಗ್ರಹ ಹಾಗೂ ಸಾಗಣೆ ಮಾಡಿದ ಆರೋಪದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದರೆ ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಉದ್ಯಮಗಳು ಶೇ 25ರಷ್ಟು ದಂಡ ಪಾವತಿಸಬೇಕಾಗುತ್ತದೆ.

“ಈ ಬದಲಾವಣೆಯ ಮೂಲಕವಾಗಿ ಇತರ ವಿಷಯಗಳಾಗಿ ತೆರಿಗೆ ವಸೂಲಿ, ತಾತ್ಕಾಲಿಕ ಆಸ್ತಿ ಜಪ್ತಿ ಬಲಗೊಳ್ಳುತ್ತದೆ, ತೆರಿಗೆ ಕ್ರೆಡಿಟ್ ಅರ್ಹತೆ ಬಿಗಿಗೊಳ್ಳುತ್ತದೆ, ಸಂಬಂಧಪಟ್ಟ ನ್ಯಾಯಾಂಗ ವ್ಯಾಪ್ತಿಯ ಆಯುಕ್ತರು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ವ್ಯಕ್ತಿಯಿಂದ ಮಾಹಿತಿ ಪಡೆಯುವುದಕ್ಕೆ ಸಬಲಗೊಳಿಸುತ್ತದೆ. ಕ್ಲಬ್/ಅಸೋಸಿಯೇಷನ್​ಗಳ ಮೇಲಿನ ತೆರಿಗೆ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ,” ಎಂದು ವಿಶ್ಲೇಷಕರು ಹೇಳುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್​ಟಿ ನಿಯಮಾವಳಿಗಳಲ್ಲಿ ಸುಧಾರಣೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಆಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಸಮಿತಿಯು ಜಿಎಸ್​ಟಿ ವ್ಯವಸ್ಥೆ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: GST Collection: ನವೆಂಬರ್​ನಲ್ಲಿ ಜಿಎಸ್​ಟಿ 1,31,526 ಕೋಟಿ ರೂ. ಸಂಗ್ರಹ; ಹೊಸ ತೆರಿಗೆ ಬಂದ ಮೇಲೆ ಎರಡನೇ ಅತ್ಯಧಿಕ ಮೊತ್ತ

Follow us on

Related Stories

Most Read Stories

Click on your DTH Provider to Add TV9 Kannada