GST collections: ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂನಷ್ಟು ಜಿಎಸ್​​ಟಿ ಸಂಗ್ರಹ

GST collections in May month: 2025ರ ಮೇ ತಿಂಗಳಲ್ಲಿ ಭಾರತ ಸರ್ಕಾರ ಸಂಗ್ರಹಿಸಿದ ಜಿಎಸ್​​ಟಿ ಮೊತ್ತ 2.01 ಲಕ್ಷ ಕೋಟಿ ರೂ ಆಗಿದೆ. 2024ರ ಮೇ ತಿಂಗಳಲ್ಲಿ 1.72 ಲಕ್ಷ ಕೋಟಿ ರೂ ಜಿಎಸ್​​ಟಿ ಸಿಕ್ಕಿತ್ತು. ಹಿಂದಿನ ತಿಂಗಳಲ್ಲಿ, ಅಂದರೆ, 2025ರ ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್ಸ್ ಬಂದಿತ್ತು.

GST collections: ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂನಷ್ಟು ಜಿಎಸ್​​ಟಿ ಸಂಗ್ರಹ
ಜಿಎಸ್​​ಟಿ

Updated on: Jun 01, 2025 | 6:33 PM

ನವದೆಹಲಿ, ಜೂನ್ 1: ಕಳೆದ ತಿಂಗಳು (2025ರ ಮೇ) ಭಾರತದಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್​​ಟಿ ಸಂಗ್ರಹ (GST collections) ಆಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ (2024ರ ಮೇ) 1.72 ಲಕ್ಷ ಕೋಟಿ ರೂ ಜಿಎಸ್​​ಟಿ ಹರಿದು ಬಂದಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಶೇ. 16.4ರಷ್ಟು ಹೆಚ್ಚಾಗಿದೆ. ಭಾನುವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.

2025ರ ಮೇ ತಿಂಗಳಲ್ಲಿ ಒಟ್ಟಾರೆ ಜಿಎಸ್​​ಟಿ ಆದಾಯ (GST revenue) 4.37 ಲಕ್ಷ ಕೋಟಿ ರೂನಷ್ಟು ದಾಖಲಾಗಿದೆ. ಹಿಂದಿನ ವರ್ಷದಲ್ಲಿ ಇದು 3.83 ಲಕ್ಷ ಕೋಟಿ ರೂ ನಷ್ಟಿತ್ತು. ಇದರಲ್ಲಿ ಶೇ. 14.3ರಷ್ಟು ಏರಿಕೆ ಆಗಿದೆ.

ಇದನ್ನೂ ಓದಿ: ಇಎಲ್​​ಐ ಸ್ಕೀಮ್​​ಗೆ ಯುಎಎನ್ ಸಕ್ರಿಯಗೊಳಿಸಲು ಡೆಡ್​​ಲೈನ್ ವಿಸ್ತರಣೆ; ಏನಿದು ಯೋಜನೆ, ಸುಲಭದಲ್ಲಿ ಯುಎಎನ್ ಆ್ಯಕ್ಟಿವೇಟ್ ಹೇಗೆ?

ಇನ್ನು, ಮೇ ತಿಂಗಳಲ್ಲಿ ಸರ್ಕಾರವು ಜಿಎಸ್​​ಟಿ ರೀಫಂಡ್ ಮಾಡಿದ ಪ್ರಮಾಣ 27,210 ಕೋಟಿ ರೂ. ಹಿಂದಿನ ವರ್ಷದ ಮೇಗೆ ಹೋಲಿಸಿದರೆ ರೀಫಂಡ್ ಶೇ. 4ರಷ್ಟು ಕಡಿಮೆ ಆಗಿದೆ.

ಈ ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್​ಟಿ ಆದಾಯ 1,73,841 ಕೋಟಿ ರೂ ಆಗುತ್ತದೆ. ಇದರಲ್ಲಿ ಶೇ. 20.4ರಷ್ಟು ಹೆಚ್ಚಳ ಆಗಿದೆ.

ಈ ಬಾರಿಯ ಬಜೆಟ್​​​ನಲ್ಲಿ ಸರ್ಕಾರವು ಜಿಎಸ್​​ಟಿ ಆದಾಯದಲ್ಲಿ ಶೇ. 11ರಷ್ಟು ಏರಿಕೆ ಆಗಬಹುದು ಎಂದು ನಿರೀಕ್ಷಿಸಿದೆ. ಒಟ್ಟಾರೆ 11.78 ಲಕ್ಷ ಕೋಟಿ ರೂನಷ್ಟು ನಿವ್ವಳ ಜಿಎಸ್​​ಟಿ ತೆರಿಗೆಗಳು ಸಿಗಬಹುದು ಎಂಬುದು ಸರ್ಕಾರದ ಎಣಿಕೆ.

ಇದನ್ನೂ ಓದಿ: ADB support: ನಗರ ಮೂಲಸೌಕರ್ಯ ಬಲಪಡಿಸಲು ಭಾರತಕ್ಕೆ 10 ಬಿಲಿಯನ್ ಡಾಲರ್ ನೆರವಿಗೆ ಎಡಿಬಿ ಸಿದ್ಧ

ಈ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ 2 ಲಕ್ಷ ಕೋಟಿ ರೂ ದಾಟಿದೆ. ಏಪ್ರಿಲ್​​​ನಲ್ಲಿ 2.37 ಲಕ್ಷ ಕೋಟಿ ರೂ ತೆರಿಗೆ ಸಿಕ್ಕಿತ್ತು. ಇದು ಇತಿಹಾಸದಲ್ಲೇ ಯಾವುದೇ ತಿಂಗಳಲ್ಲಿ ಬಂದ ಜಿಎಸ್​​ಟಿ ಸಂಗ್ರಹ. ಬಜೆಟ್ ಎಣಿಕೆಯಂತೆ ಈ ವರ್ಷದ ಜಿಎಸ್​​ಟಿ ಸಂಗ್ರಹದ ಗುರಿ ಈಡೇರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ