AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ADB support: ನಗರ ಮೂಲಸೌಕರ್ಯ ಬಲಪಡಿಸಲು ಭಾರತಕ್ಕೆ 10 ಬಿಲಿಯನ್ ಡಾಲರ್ ನೆರವಿಗೆ ಎಡಿಬಿ ಸಿದ್ಧ

ADB to provide 10 billion USD for help developing India's urban infrastructure: ಭಾರತಕ್ಕೆ ಸಾಲದ ನೆರವು ಕೊಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬದ್ಧವಾಗಿದೆ. ನಗರ ಪ್ರದೇಶಗಲ್ಲಿ ಇನ್​​​ಫ್ರಾಸ್ಟ್ರಕ್ಚರ್ ಬಲಪಡಿಸಲು ವಿವಿಧ ಮೂಲಗಳಿಂದ ಐದು ವರ್ಷದ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಬಂಡವಾಳ ಕ್ರೋಢೀಕರಿಸುವ ಪ್ಲಾನ್ ಅನ್ನು ಎಬಿಡಿ ಘೋಷಿಸಿದೆ. ನಗರಗಳು ಆರ್ಥಿಕತೆಯ ಪ್ರಗತಿಯ ಎಂಜಿನ್ ಎಂದು ಪರಿಗಣಿಸಲಾಗಿರುವುದರಿಂದ ಅವುಗಳನ್ನು ಬಲಪಡಿಸುವುದು ಎಡಿಬಿ ಇರಾದೆಯಾಗಿದೆ.

ADB support: ನಗರ ಮೂಲಸೌಕರ್ಯ ಬಲಪಡಿಸಲು ಭಾರತಕ್ಕೆ 10 ಬಿಲಿಯನ್ ಡಾಲರ್ ನೆರವಿಗೆ ಎಡಿಬಿ ಸಿದ್ಧ
ಎಡಿಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2025 | 12:58 PM

Share

ನವದೆಹಲಿ, ಜೂನ್ 1: ಭಾರತದ ನಗರ ಭಾಗದಲ್ಲಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಬಲಪಡಿಸಲು 10 ಬಿಲಿಯನ್ ಡಾಲರ್​ವರೆಗೆ (85,500 ಕೋಟಿ ರೂ) ಸಾಲದ ವ್ಯವಸ್ಥೆ ಮಾಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB- Asian Development Bank) ಸಿದ್ಧವಾಗಿದೆ. ಐದು ವರ್ಷಗಳ ಅವಧಿಯಲ್ಲಿ ಇಷ್ಟು ಮೊತ್ತದ ಸಾಲವನ್ನು ಎಡಿಬಿ ಖುದ್ದಾಗಿ ನೀಡುವುದಲ್ಲದೇ, ಬೇರೆ ಮೂಲಗಳಿಂದಲೂ ಸಾಲ ಕೊಡಿಸುವುದಾಗಿ ಹೇಳಿದೆ. ಭಾರತಕ್ಕಾಗಿ ಐದು ವರ್ಷದ ಈ ಪ್ಲಾನ್ ಅನ್ನು ಎಡಿಬಿ ಅಧ್ಯಕ್ಷ ಮಸಾಟೋ ಕಾಂಡಾ ಅವರು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಎಡಿಬಿ ಅಧ್ಯಕ್ಷರು ಈ ಯೋಜನೆಯನ್ನು ಬಹಿರಂಗಗೊಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಮೆಟ್ರೋ ನೆಟ್ವರ್ಕ್ ವಿಸ್ತರಣೆ, ಹೊಸ ಪ್ರಾದೇಶಿಕ ಆರ್​​ಟಿಎಸ್ ಕಾರಿಡಾರ್​​ಗಳು ಇತ್ಯಾದಿ ಸೌಕರ್ಯಗಳತ್ತ ಗಮನ ಕೊಡಲಾಗುತ್ತದೆ. ಸುಸ್ಥಿರ ನಗರಾಭಿವೃದ್ದಿಗಾಗಿ ಹೂಡಿಕೆಗಳನ್ನು ಮಾಡುವುದೂ ಕೂಡ ಈ ಪ್ಲಾನ್​​ನ ಉದ್ದೇಶವಾಗಿದೆ.

ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ

ಇದನ್ನೂ ಓದಿ
Image
ವಿತ್ತೀಯ ಕೊರತೆ ಶೇ. 4.8ಕ್ಕೆ ಸೀಮಿತ; ಗುರಿ ಮುಟ್ಟಿದ ಸರ್ಕಾರ
Image
ಪಿಪಿಪಿ ಲೆಕ್ಕದ ಜಿಡಿಪಿಯಲ್ಲಿ ಅಮೆರಿಕದ ಅರ್ಧದಷ್ಟಿರುವ ಭಾರತ
Image
ಭಾರತದ ಜಿಡಿಪಿ: 2024-25ರಲ್ಲಿ ಶೇ. 6.5 ವೃದ್ಧಿ
Image
ಹೊಸ ದಾಖಲೆ ಬರೆದ ಭಾರತದ ಡಿಫೆನ್ಸ್ ಉತ್ಪಾದನೆ

‘ನಗರಗಳು ಪ್ರಗತಿಯ ಎಂಜಿನ್​​ಗಳಾಗಿವೆ. ಭಾರತದ ನಗರ ಆರ್ಥಿಕತೆ ಚುರುಕುಗೊಂಡು 2047ರ ವಿಕಸಿತ ಭಾರತದ ಪಥದಲ್ಲಿ ಹೆಜ್ಜೆಗಳನ್ನಿಡಲು ಸಾಧ್ಯವಾಗುವ ನಿಟ್ಟಿನಲ್ಲಿ ಎಡಿಬಿ ಅಗತ್ಯವಾದ ಬಂಡವಾಳವನ್ನು ಕ್ರೋಢೀಕರಿಸುತ್ತದೆ’ ಎಂದು ಮಸಾಟೋ ಕಾಂಡಾ ಹೇಳಿದ್ದಾರೆ.

ಸರ್ಕಾರೀ ಮಟ್ಟದ ಸಾಲ, ಖಾಸಗಿ ವಲಯದಿಂದ ಸಾಲ ಇತ್ಯಾದಿಯಿಂದ ಎಡಿಬಿ ಹಣ ಕ್ರೋಢೀಕರಿಸುತ್ತದೆ. ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಭಾರತದ ಅರ್ಬನ್ ಚಾಲೆಂಜ್ ಫಂಡ್​ಗೂ ಎಡಿಬಿ ಶಕ್ತಿ ಒದಗಿಸಲಿದೆ ಎನ್ನಲಾಗಿದೆ.

ದೇಶಾದ್ಯಂತ ಇರುವ ಜನಸಂಖ್ಯೆಯಲ್ಲಿ ನಗರ ಭಾಗದ ಪಾಲು 2030ರಷ್ಟರಲ್ಲಿ ಶೇ. 40 ಅನ್ನು ಮೀರಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬೆಂಗಳೂರು ಮೆಟ್ರೋ ಸೇರಿದಂತೆ ಎಂಟು ನಗರಗಳಲ್ಲಿನ ಮೆಟ್ರೋ ಮತ್ತು ಆರ್​​ಆರ್​ಟಿಎಸ್ ಯೋಜನೆಗಳ ಜಾಲ ವಿಸ್ತರಣೆಗೆ ಸಹಾಯವಾಗಲು ಎಡಿಬಿ ಬದ್ಧವಾಗಿದೆ.

ಇದನ್ನೂ ಓದಿ: 2024-25ರಲ್ಲಿ ಶೇ. 4.8 ವಿತ್ತೀಯ ಕೊರತೆ; ಸರ್ಕಾರದ ಗುರಿ ಈಡೇರಿಕೆ

ಗ್ರಾಮೀಣಾಭಿವೃದ್ಧಿಗೂ ಎಡಿಬಿ ಬದ್ಧ

ಎಡಿಬಿ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯನ್ನು ಮಾತ್ರವಲ್ಲ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಿದ್ದರು. ಗ್ರಾಮೀಣ ಭಾಗದಲ್ಲಿ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆ, ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಇತ್ಯಾದಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬಲಪಡಿಸುವ ಉದ್ದೇಶವನ್ನು ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​