ಕ್ಯಾಸಿನೋಗಳು, ಆನ್ಲೈನ್ ಗೇಮಿಂಗ್, ಲಾಟರಿಗಳ ಮೇಲೆ ಶೇ 28ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಜಿಎಸ್ಟಿ (GST) ಸಮಿತಿಯಿಂದ ಬುಧವಾರ ಮುಂದೂಡಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಚಿವರನ್ನು ಒಳಗೊಂಡ ಗುಂಪನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮುನ್ನಡೆಸಿದ್ದು, 15 ದಿನಗಳ ಗಡುವಿನಲ್ಲಿ ಈ ವ್ಯವಸ್ಥೆಯ ಮೌಲ್ಯಮಾಪನ ಮಾಡಿ, ವರದಿ ಸಲ್ಲಿಸಲು ಕೇಳಲಾಗಿದೆ. ಎರಡು ದಿನಗಳ 47ನೇ ಜಿಎಸ್ಟಿ ಸಮಿತಿ ಸಭೆಯು ಮಂಗಳವಾರ ಆರಂಭವಾಯಿತು. ಸಮಿತಿಯ ಅಂತಿಮ ತೀರ್ಮಾನವನ್ನು ಬುಧವಾರ ಘೋಷಣೆ ಮಾಡಲಾಗುವುದು.
ಆನ್ಲೈನ್ ಗೇಮಿಂಗ್ಗೆ ಪೂರ್ತಿಯಾಗಿ ತೆರಿಗೆ ಹಾಕಬೇಕು ಎಂಬುದು ಪ್ಯಾನೆಲ್ ಶಿಫಾರಸು ಆಗಿತ್ತು. ಅದರಲ್ಲಿ ಆಟದಲ್ಲಿ ಭಾಗವಹಿಸುವ ಆಟಗಾರರ ಪ್ರವೇಶ ಶುಲ್ಕಕ್ಕೂ ತೆರಿಗೆ ಹಾಕಬೇಕು ಎನ್ನಲಾಗಿತ್ತು. ಅಂಥ ಎಲ್ಲ ಚಟುವಟಿಕೆಗಳಿಗೆ ಜಿಎಸ್ಟಿ ಶೇ 28ರಷ್ಟು ಎಂದು ಕೂಡ ಸೇರಿಸಲಾಗಿತ್ತು. ರೇಸ್ ಕೋರ್ಸ್ಗಳಲ್ಲಿ ಸಚಿವರ ಗುಂಪು ಒಟ್ಟು ಪಂದ್ಯದ ಮೊತ್ತದ ಮೇಲೆ ಜಿಎಸ್ಟಿ ಹಾಕಲು ಶಿಫಾರಸು ಮಾಡಲಾಗಿದೆ. ಇದರ ಜತೆಗೆ ಆಟದ ಕೌಶಲ ಅಥವಾ ಆಟದ ಅವಕಾಶದ ಉದ್ದೇಶದ ನೆಲೆಯ ಮೇಲೆ ವ್ಯತ್ಯಾಸ ಮಾಡದೆ ಇಂಥ ಚಟುವಟಿಕೆಗಳಿಗೆ ಶೇ 28ರಷ್ಟು ಜಿಎಸ್ಟ ವಿಧಿಸುವುದಕ್ಕೆ ಶಿಫಾರಸು ಮಾಡಲಾಗಿದೆ.
ಮೌಲ್ಯಮಾಪನದ ಬಗ್ಗೆ ಸಚಿವರ ಗುಂಪು ಮಾತನಾಡಿ, ಆನ್ಲೈನ್ ಗೇಮಿಂಗ್ ಅಂದರೆ, ಮೌಲ್ಯವನ್ನು ಸಂಪೂರ್ಣ ಗಣನೆಗೆ ತೆಗೆದುಕೊಳ್ಳಬೇಕು. ಸ್ಪರ್ಧಿಯ ಪ್ರವೇಶ ಶುಲ್ಕವನ್ನು ಸಹ ಒಳಗೊಳ್ಳಲಾಗುತ್ತದೆ. ರೇಸ್ಕೋರ್ಸ್ನಲ್ಲಿ ಬುಕ್ಮೇಕರ್ಗಳು ಮತ್ತು ಟೋಟಲೈಸೇಟರ್ ಬಳಿ ಒಟ್ಟುಗೂಡುವ ಹಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕ್ಯಾಸಿನೋಗಳ ಮೌಲ್ಯಮಾಪನಕ್ಕೆ ಚಿಪ್ಸ್/ಕಾಯಿನ್ ಖರೀದಿಯ ಸಂಪೂರ್ಣ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ.
ಒಂದು ಸಲ ಚಿಪ್ಸ್/ಕಾಯಿನ್ಗಳಿಗೆ ಜಿಎಸ್ಟಿ ಹಾಕಿದ ಮೇಲೆ ಪ್ರತಿ ಸುತ್ತಿನ ಜೂಜಿಗೆ ಹಾಕುವ ಹಣಕ್ಕೆ ಮತ್ತೆ ಜಿಎಸ್ಟಿ ಹಾಕಲ್ಲ. ಪ್ರವೇಶ ಶುಲ್ಕ, ಆಹಾರ, ಪಾನೀಯ ಮುಂತಾದವುಗಳಿಗೆ ಶೇ 28ರ ಜಿಎಸ್ಟಿ ಹಾಕುವ ಬಗ್ಗೆ ಹೇಳಲಾಗಿದೆ.
ಜುಲೈ 15ರೊಳಗೆ ಕುದುರೆ ರೇಸ್, ಆನ್ ಲೈನ್ ಗೇಮಿಂಗ್, ಕ್ಯಾಸಿನೋ ಮೇಲಿನ ಜಿಎಸ್ಟಿ ದರ ಮರುಪರಿಶೀಲಿಸಿ ಸಚಿವರ ತಂಡಕ್ಕೆ ಜಿಎಸ್ಟಿ ಮಂಡಳಿಯ ಮನವಿ ಮಾಡಲಾಗಿದೆ. ಕುದುರೆ ರೇಸ್, ಆನ್ ಲೈನ್ ಗೇಮಿಂಗ್, ಕ್ಯಾಸಿನೋ ಮೇಲೆ ಶೇ 28ರ ತೆರಿಗೆಗೆ ಜಿಎಸ್ಟಿಯನ್ನು ಶಿಫಾರಸು ಮಾಡಿತ್ತು ಸಚಿವರ ತಂಡ. ವಿವಿಧ ರಾಜ್ಯಗಳ ಹಣಕಾಸು ಸಚಿವರ ತಂಡದಿಂದ ಶಿಫಾರಸು ಮರುಪರಿಶೀಲನೆಗೆ ಈಗ ಮನವಿ ಮಾಡಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.
ಕ್ಯಾಸಿನೊ, ಕುದುರೆ ರೇಸ್, ಆನ್ ಲೈನ್ ಗೇಮಿಂಗ್ ಮೇಲಿನ ಜಿಎಸ್ಟಿ ಬಗ್ಗೆ ಚರ್ಚಿಸಲು ಆಗಸ್ಟ್ ಮೊದಲ ವಾರ ಮತ್ತೊಮ್ಮೆ ಜಿಎಸ್ಟಿ ಮಂಡಳಿಯ ಸಭೆ ನಡೆಸಲಾಗುವುದು. ರಾಜ್ಯಗಳಿಗೆ ನೀಡುವ ಜಿಎಸ್ಟಿ. ಪರಿಹಾರವನ್ನು ಐದು ವರ್ಷ ಅಲ್ಲದಿದ್ದರೂ ಕೆಲ ವರ್ಷ ಮುಂದುವರಿಕೆಗೆ ರಾಜ್ಯಗಳ ಬೇಡಿಕೆ ಬಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಂದಹಾಗೆ ಚಂಡೀಗಢದಲ್ಲಿ ನಡೆದ ಜಿಎಸ್ಟಿ ಮಂಡಳಿಯ ಸಭೆ ಬಳಿಕ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: GST: 1000 ರೂಪಾಯಿ ಒಳಗಿನ ಹೋಟೆಲ್ ಕೋಣೆಗಳಿಗೆ ವಿನಾಯಿತಿ ವಾಪಸ್, ಪ್ರೀ ಪ್ಯಾಕ್ಡ್ ಆಹಾರಗಳಿಗೆ ಜಿಎಸ್ಟಿ
Published On - 4:52 pm, Wed, 29 June 22