Updated on:Jun 29, 2022 | 12:54 PM
2022ರ ಜುಲೈನಿಂದ ಬಹಳ ವಿಚಾರಗಳಲ್ಲಿ ನಿಯಮಾವಳಿಗಳು ಬದಲಾಗಲಿವೆ. ಕ್ರಿಪ್ಟೋಕರೆನ್ಸಿಗಳ ಮೇಲೆ ಸರ್ಕಾರ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗಿತ್ತು. ಆ ಬಳಿಕ ಇದೀಗ ಜುಲೈ 1ರಿಂದ ಕ್ರಿಪ್ಟೋ ಹೂಡಿಕೆದಾರರಿಗೆ ಮತ್ತೊಂದು ಹಿನ್ನಡೆ ಆಗಲಿದೆ. ವಾಸ್ತವವಾಗಿ, ಜುಲೈನಿಂದ ಹೂಡಿಕೆದಾರರು ಎಲ್ಲ ರೀತಿಯ ಕ್ರಿಪ್ಟೋ ವಹಿವಾಟುಗಳ ಮೇಲೆ ಶೇಕಡಾ 1ರ ದರದಲ್ಲಿ ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ. ಅದು ಕ್ರಿಪ್ಟೋ ಆಸ್ತಿಯನ್ನು ಮಾರಿದ್ದರಿಂದ ಲಾಭವೋ ಅಥವಾ ನಷ್ಟವೋ ಒಟ್ಟಿನಲ್ಲಿ ಪಾವತಿಸಬೇಕು. ವಾಸ್ತವವಾಗಿ, ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶವೆಂದರೆ, ಹಾಗೆ ಮಾಡುವುದರಿಂದ ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸುವವರ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ.
ಉಡುಗೊರೆಗಳಿಗೆ ಟಿಡಿಎಸ್ ಎರಡನೇ ಪ್ರಮುಖ ಬದಲಾವಣೆ ಅಂದರೆ, ಜುಲೈ 1, 2022ರಿಂದ ವ್ಯವಹಾರಗಳಿಂದ ಸ್ವೀಕರಿಸಿದ ಉಡುಗೊರೆಗಳಿಗೆ ಮೂಲದಲ್ಲಿ (ಟಿಡಿಎಸ್) ಶೇಕಡಾ 10ರ ದರದಲ್ಲಿ ತೆರಿಗೆ ಕಡಿತಗೊಳಿಸಬೇಕಾಗುತ್ತದೆ. ಈ ತೆರಿಗೆಯು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರಿಗೆ ಅನ್ವಯಿಸುತ್ತದೆ. ಕಂಪೆನಿಯಿಂದ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಉಡುಗೊರೆಯನ್ನು ನೀಡಿದಾಗ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದರೆ ಈ ನಿಯಮವು ಉಚಿತ ಔಷಧ ಮಾದರಿಗಳು, ವಿದೇಶಿ ವಿಮಾನ ಟಿಕೆಟ್‌ಗಳು ಅಥವಾ ವೈದ್ಯರು ಸ್ವೀಕರಿಸುವ ಇತರ ದುಬಾರಿ ಉಡುಗೊರೆಗಳಿಗೆ ಅನ್ವಯಿಸುತ್ತದೆ.
ಕಾರ್ಮಿಕ ಸಂಹಿತೆಯ ಹೊಸ ನಿಯಮಗಳು ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಇದರ ಅನುಷ್ಠಾನದೊಂದಿಗೆ ಕೈಗೆ ಬರುವ ಸಂಬಳದ ಮೊತ್ತ, ಉದ್ಯೋಗಿಗಳ ಕಚೇರಿ ಸಮಯ, ಪಿಎಫ್ ಕೊಡುಗೆ ಮತ್ತು ಗ್ರಾಚ್ಯುಟಿಯ ಮೇಲೆ ಪರಿಣಾಮ ಬೀರುತ್ತದೆ. ವರದಿಯ ಪ್ರಕಾರ, ಇದರ ಅಡಿಯಲ್ಲಿ ಗರಿಷ್ಠ ಕೆಲಸದ ಸಮಯವನ್ನು 12 ಗಂಟೆಗೆ ಹೆಚ್ಚಿಸುವ ಪ್ರಸ್ತಾಪವನ್ನು ಮಾಡಲಾಗಿದೆ. ಅಂದರೆ, ನೌಕರರು 4 ದಿನಗಳಲ್ಲಿ 48 ಗಂಟೆಗಳ ಕಾಲ ಅಂದರೆ ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಬಹುದಾಗಿದೆ. ಆದರೆ ಈ ನಿಯಮಾವಳಿಯು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗಬಹುದು.
ಜುಲೈ 1ರಿಂದ ಏರ್ ಕಂಡೀಷನರ್ ಖರೀದಿ ದುಬಾರಿ ಆಗಲಿದೆ. ವಾಸ್ತವವಾಗಿ, ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಹವಾನಿಯಂತ್ರಣಗಳಿಗೆ ಎನರ್ಜಿ ರೇಟಿಂಗ್ ನಿಯಮಗಳನ್ನು ಬದಲಾಯಿಸಿದೆ. ಇದು ಜುಲೈ 1, 2022ರಿಂದ ಜಾರಿಗೆ ಬರಲಿದೆ. ಇದರ ಪ್ರಕಾರ, 5-ಸ್ಟಾರ್ ಏಸಿಗಳ ರೇಟಿಂಗ್ ಜುಲೈ ಮೊದಲಿನಿಂದ ನೇರವಾಗಿ 4-ಸ್ಟಾರ್‌ಗೆ ಹೋಗುತ್ತದೆ. ಹೊಸ ಇಂಧನ ದಕ್ಷತೆಯ ಮಾರ್ಗಸೂಚಿಗಳೊಂದಿಗೆ ಭಾರತದಲ್ಲಿ ಏಸಿ ಬೆಲೆಗಳು ಮುಂಬರುವ ದಿನಗಳಲ್ಲಿ ಶೇಕಡಾ 10ರಷ್ಟು ಹೆಚ್ಚಳವನ್ನು ಕಾಣಬಹುದು.
ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು 500 ರೂಪಾಯಿ ದಂಡದೊಂದಿಗೆ ಜೋಡಣೆ ಮಾಡಲು ವಿಳಂಬ ಮಾಡಬೇಡಿ. ಏಕೆಂದರೆ ಈ ಮಹತ್ವದ ಕೆಲಸವನ್ನು ಮಾಡಲು ಕೊನೆಯ ದಿನಾಂಕ ಜೂನ್ 30. ಅಂದರೆ, ಇದಕ್ಕಾಗಿ ನಿಮಗೆ ಕೇವಲ ಮೂರು ದಿನಗಳು ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ನೀವು 30 ಜೂನ್ 2022ರ ನಂತರ ಅಂದರೆ ಜುಲೈ 1ರಂದು ಅಥವಾ ನಂತರ ಈ ಕೆಲಸವನ್ನು ಮಾಡಿದರೆ, ಎರಡು ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಅಂದರೆ, ಈಗ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಲು ರೂ. 500 ದಂಡದ ಜತೆಗೆ ಅವಕಾಶವಿದ್ದು, ಜುಲೈ 1ರಿಂದ, ಈ ದಾಖಲೆಗಳನ್ನು ಜೋಡಣೆ ಮಾಡಲು ರೂ. 1,000 ದಂಡವನ್ನು ಪಾವತಿಸಬೇಕಾಗುತ್ತದೆ.
ನಿಮ್ಮ ಡಿಮ್ಯಾಟ್ ಟ್ರೇಡಿಂಗ್ ಖಾತೆಯ KYC (Know Your Customer) ಅನ್ನು ನೀವು ಇನ್ನೂ ಪೂರ್ಣಗೊಳಿಸದಿದ್ದರೆ ಹಾಗೆ ಮಾಡಲು ನಿಮಗೆ ಜೂನ್ 30ರ ವರೆಗೆ ಸಮಯವಿದೆ. ಇಲ್ಲಿಯವರೆಗೆ ನೀವು ಡಿಮ್ಯಾಟ್ ಟ್ರೇಡಿಂಗ್ ಖಾತೆಯ KYC ಮಾಡಬಹುದು. ಮಾರುಕಟ್ಟೆ ನಿಯಂತ್ರಕ ಸೆಬಿ ಪ್ರಕಾರ, ಡಿಮ್ಯಾಟ್ ಖಾತೆಯಲ್ಲಿ ಷೇರುಗಳು ಮತ್ತು ಸಾಲಪತ್ರಗಳನ್ನು ಹೊಂದಲು ಸೌಲಭ್ಯವನ್ನು ಒದಗಿಸಲಾಗಿದೆ ಮತ್ತು ಅದರ KYC (ಗ್ರಾಹಕರನ್ನು ತಿಳಿದುಕೊಳ್ಳಿ) ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ತಿಂಗಳ 1ನೇ ತಾರೀಕಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ ಮೊದಲ ದಿನವಾದರೂ ಅದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆಲ ಸಮಯದಿಂದ ದೇಶದ ಜನಸಾಮಾನ್ಯರಿಗೆ ಗ್ಯಾಸ್ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಈ ಬಾರಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
Published On - 12:29 pm, Wed, 29 June 22