- Kannada News Photo gallery Ranjani Raghavan Ask question About Kannadathi Serial Fans gave correct answer
ಅಭಿಮಾನಿಗಳ ಎದುರು ಒಂದು ಪ್ರಶ್ನೆ ಇಟ್ಟ ರಂಜನಿ ರಾಘವನ್; ಉತ್ತರ ಕೊಟ್ಟ ಫ್ಯಾನ್ಸ್
‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿಯ ಮದುವೆ ನೆರವೇರಿದೆ. ಈ ಬಗ್ಗೆ ಫ್ಯಾನ್ಸ್ಗೆ ಖುಷಿ ಇದೆ. ಮದುವೆಯ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಂಜನಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Updated on: Jun 29, 2022 | 7:10 PM

ನಟಿ ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬರೋಬ್ಬರಿ 89 ಲಕ್ಷ ಜನರು ಅವರನ್ನು ಹಿಂಬಾಲಿಸುತ್ತಿದ್ದಾರೆ.

ರಂಜನಿ ಕಿರುತೆರೆ ಮಾತ್ರವಲ್ಲದೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಅವರ ನಟನೆಯ ಸಿನಿಮಾ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಇತ್ತೀಚೆಗೆ ರಿಲೀಸ್ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಂಜನಿ ಅವರು ಅಭಿಮಾನಿಗಳ ಎದುರು ಪ್ರಶ್ನೆ ಒಂದನ್ನು ಇಟ್ಟಿದ್ದಾರೆ.

‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿಯ ಮದುವೆ ನೆರವೇರಿದೆ. ಈ ಬಗ್ಗೆ ಫ್ಯಾನ್ಸ್ಗೆ ಖುಷಿ ಇದೆ. ಮದುವೆಯ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಂಜನಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೋಟೋಗಳನ್ನು ಶೇರ್ ಮಾಡಿಕೊಂಡು ‘ನಮ್ಮೂರ ಯುವರಾಣಿ ಕಲ್ಯಾಣವಂತೆ.. ವರನ್ಯಾರು ಗೊತ್ತೇನೆ ಓ ಕೋಗಿಲೆ’ ಎಂಬ ಹಾಡಿನ ಸಾಲುಗಳನ್ನು ರಂಜನಿ ಹಾಕಿದ್ದಾರೆ. ಇದನ್ನು ಪ್ರಶ್ನೆಯ ರೀತಿಯಲ್ಲಿ ಸ್ವೀಕರಿಸಿರುವ ಫ್ಯಾನ್ಸ್ ‘ವರ ಯಾರು ಅಂತ ನಿನ್ನೆಯೇ ಎಲ್ಲರಿಗೂ ಗೊತ್ತಾಗಿದೆ’ ಎಂದು ಉತ್ತರಿಸಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಹಾಗೂ ಹರ್ಷನ ಮದುವೆ ನಡೆದಿದೆ. ಮುಂದೇನಾಗುತ್ತದೆ ಎಂಬುದು ಸದ್ಯದ ಕುತೂಹಲ.




