Updated on:Jun 28, 2022 | 5:17 PM
10 PLACES IN SOUTH INDIA TO VIST IN THIS MONSOON
ಲಂಬಸಿಂಗಿ, ಆಂಧ್ರಪ್ರದೇಶ ಈ ಸ್ಥಳ ಕಡಿಮೆ ಜನಸಂದಣಿಯಿಂದ ಕೂಡಿದೆ. ದಕ್ಷಿಣ ಭಾರತದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಈ ತಾಣವು ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಆಂಧ್ರಪ್ರದೇಶದ ಕಾಶ್ಮೀರ ಎಂದು ಪ್ರೀತಿಯಿಂದ ಕರೆಯಲ್ಪಡುವ ಈ ತಾಣವು ಇಡೀ ರಾಜ್ಯದಲ್ಲಿ ಹಿಮಪಾತವಾಗುವ ಏಕೈಕ ಸ್ಥಳವಾಗಿದೆ.
. ಮೇಘಮಲೈ, ತಮಿಳುನಾಡು ಎತ್ತರದ ಅಲೆಅಲೆಯಾದ ಪರ್ವತಗಳು ಎಂದು ಪ್ರೀತಿಯಿಂದ ಕರೆಯಲ್ಪಡುವ ಈ ತಾಣವು ಪಶ್ಚಿಮ ಘಟ್ಟಗಳಲ್ಲಿ ಸುಮಾರು 1500 ಮೀ ಎತ್ತರದಲ್ಲಿದೆ. ಮಾನ್ಸೂನ್ ಸಮಯದಲ್ಲಿ ವಾರಾಂತ್ಯದಲ್ಲಿ ಶಾಂತ ಮತ್ತು ವಿಶ್ರಾಂತಿ ಪಡೆಯಲು ಬಯಸುವವರಿಗೆ ಈ ಸ್ಥಳವು ಸೂಕ್ತವಾಗಿರುತ್ತದೆ. ಚಹಾ ಮತ್ತು ಏಲಕ್ಕಿ ಚಹಾ ತೋಟಗಳಿಂದ ಸುತ್ತುವರಿದಿರುವ ಮೇಗಮಲೈ ಈ ಋತುವಿನಲ್ಲಿ ನೋಡಲು ಬಹಳ ಸುಂದರವಾಗಿರುತ್ತದೆ.
ಅಲೆಪ್ಪಿ, ಕೇರಳ ಈ ಸ್ಥಳವು ತಮ್ಮನ್ನು ತಾವು ಪ್ರಕೃತಿ ಪ್ರಿಯರು ಎಂದು ಕರೆದುಕೊಳ್ಳುವವರಿಗೆ ಅತ್ಯುತ್ತಮವಾಗಿದೆ. ಸುತ್ತಲೂ ಹಚ್ಚ ಹಸಿರು, ಸುಂದರವಾದ ಹಿನ್ನೀರು, ಹೌಸ್‌ಬೋಟ್‌ನಲ್ಲಿ ಹಿನ್ನೀರಿನ ವಿಹಾರ ಮಾಡುವಾಗ ನೀವು ಕಳೆದು ಹೋಗುತ್ತಿರಿ.
ಊಟಿ, ತಮಿಳುನಾಡು ಉದಗಮಂಡಲಂ ಎಂದೂ ಕರೆಯಲ್ಪಡುವ ಊಟಿಯು ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಮಾನ್ಸೂನ್ ಸಮಯದಲ್ಲಿ, ಈ ಸ್ಥಳಕ್ಕೆ ವಿಹಾರಕ್ಕೆ ಬರುವವರಿಗೆ ಯೋಗ್ಯವಾದ ಸ್ಥಳವಾಗಿದೆ. ದಕ್ಷಿಣ ಭಾರತದಲ್ಲಿ ಭೇಟಿ ನೀಡಲು ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ.
ಅತಿರಪಲ್ಲಿ, ಕೇರಳ ಜಲಪಾತಗಳು ಪ್ರಕೃತಿಗೆ ಜೀವ ತುಂಬುತ್ತದೆ ಎಂಬುದು ತಿಳಿದಿರುವ ಸತ್ಯ. ಅಂತೆಯೇ, ಅತಿರಪಲ್ಲಿ ಜಲಪಾತವು ಕೇರಳದ ಅಂತಹ ಸ್ಥಳಗಳಲ್ಲಿ ಒಂದಾಗಿದೆ. ಸುಮಾರು 80 ಅಡಿ ಎತ್ತರದಿಂದ ದುಮುಖುವ ನೀರು ನೋಡಲು ರಮಣೀಯವಾಗಿದೆ.
ವಯನಾಡ್, ಕೇರಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಸ್ಥಳವು ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿದೆ. ಹೇರಳವಾದ ಮಳೆಯಿಂದ ಈ ಸ್ಥಳವು ಇನ್ನಷ್ಟು ಉಸಿರುಗಟ್ಟುವಂತೆ ಮಾಡುತ್ತದೆ. ಇಲ್ಲಿಗೆ ಬಂದಾಗ ಎಡಕ್ಕಲ್ ಗುಹೆಗಳಿಗೆ ಭೇಟಿ ನೀಡಿ.
ಕನ್ಯಾಕುಮಾರಿ ಭಾರತದ ದಕ್ಷಿಣದ ತುದಿಯಲ್ಲಿರುವ ಈ ತಾಣವು ಹಿಂದೂ ಮಹಾಸಾಗರದ ಸುಂದರ ತಾಣವಾಗಿದೆ. ಮಾನ್ಸೂನ್ ಸಮಯದಲ್ಲಿ, ಬಂಡೆಗಳು, ಪರ್ವತಗಳು, ಕಣಿವೆಗಳು ಮತ್ತು ಸಮುದ್ರದ ರಮಣೀಯ ನೋಟಗಳು ದೃಶ್ಯಾವಳಿಗಳು ಅವಿಸ್ಮರಣೀಯ.
ಲಕ್ಷದ್ವೀಪ ಮಳೆಗಾಲದಲ್ಲಿ ನೀವು ಖಂಡಿತವಾಗಿಯೂ ಈ ಉಷ್ಣವಲಯದ ಸ್ವರ್ಗಕ್ಕೆ ಭೇಟಿ ನೀಡಲು ಪ್ರಯತ್ನಿಸಬೇಕು ಮತ್ತು ಈ ಸ್ಥಳದ ಸುತ್ತಲಿನ ಸೌಂದರ್ಯ ಕಂಡು ಆಶ್ಚರ್ಯಚಕಿತರಾಗುವಿರಿ. ಕೇರಳದ ಕರಾವಳಿಯಲ್ಲಿ ನೆಲೆಗೊಂಡಿರುವ ಈ ಪ್ರಸಿದ್ಧ ದ್ವೀಪಸಮೂಹವು 36 ಶ್ರೀಮಂತ ಹವಳದ ಬಂಡೆಗಳು ಮತ್ತು ಅಟಾಲ್‌ಗಳನ್ನು ಹೊಂದಿದೆ.
Published On - 5:17 pm, Tue, 28 June 22