ನವದೆಹಲಿ, ನವೆಂಬರ್ 27: ಇಂದು ಸಿಖ್ ಧರ್ಮ ಸಂಸ್ಥಾಪಕ ಮತ್ತು ಅವರ ಮೊದಲ ಧರ್ಮಗುರು ಗುರುನಾನಕ್ ಅವರ ಜಯಂತಿ (Guru Nanak Jayanti) ಇದೆ. ಕಾರ್ತೀಕ ಮಾಸದ ಪೌರ್ಣಮಿಯಂದು ನಾನಕ್ ಅವರ ಜನ್ಮದಿನ. ಇಂದು ಕಾರ್ತೀಕ ಪೌರ್ಣಿಮೆ. ಇವತ್ತು ಗುರುನಾನಕ್ ದೇವರ 554ನೇ ಜಯಂತಿ. ಈ ದಿನ ಕೆಲ ರಾಜ್ಯಗಳಲ್ಲಿ ಸರ್ಕಾರಿ ರಜೆ ಇದೆ. ಆರ್ಬಿಐನ ರಜಾ ವೇಳಾಪಟ್ಟಿಯಲ್ಲಿ (RBI Holiday Calender) ಗುರುನಾನಕ್ ಜಯಂತಿ ಇದೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ನವೆಂಬರ್ 27ರಂದು ರಜೆ ಇದೆ.
ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲದೇ ಅಗಾರ್ತಲಾ, ಐಜ್ವಾಲ್, ಬೆಲಾಪುರ್, ಭೋಪಾಲ್, ಭುಬನೇಶ್ವರ್, ಚಂದೀಗಡ್, ಡೆಹ್ರಾಡೂನ್, ಹೈದರಾಬಾದ್, ಇಟಾನಗರ್, ಜೈಪುರ್, ಜಮ್ಮು, ಕಾನಪುರ್, ಕೊಹಿಮಾ, ಕೋಲ್ಕತಾ, ಲಕ್ನೋ, ಮುಂಬೈ, ನಾಗಪುರ್, ನವದೆಹಲಿ, ರಾಯಪುರ್, ರಾಂಚಿ, ಶಿಮ್ಲಾ, ಶ್ರೀನಗರ್, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಕೊಚ್ಚಿ, ಪಣಜಿ, ಶಿಲ್ಲಾಂಗ್ ಮತ್ತು ತಿರುವನಂತಪುರಂ ನಗರಗಳಲ್ಲಿ ಗುರುನಾನಕ್ ಜಯಂತಿಯಂದು ಬ್ಯಾಂಕುಗಳು ಬಂದ್ ಆಗಿರುತ್ತವೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ
ಈ ನವೆಂಬರ್ ತಿಂಗಳ ಕೊನೆಯಲ್ಲಿ, ಅಂದರೆ 30ನೇ ತಾರೀಖಿನಂದು ಕರ್ನಾಟಕದಲ್ಲೆಡೆ ಸರ್ಕಾರಿ ರಜೆ ಇದೆ. ಅಂದು ಕನಕದಾಸ ಜಯಂತಿ ಇದ್ದು, ಬ್ಯಾಂಕುಗಳಿಗೂ ರಜೆ ಇರುತ್ತದೆ.
ಡಿಸೆಂಬರ್ ತಿಂಗಳಲ್ಲಿ ಆರ್ಬಿಐ ಕ್ಯಾಲೆಂಡರ್ ಪ್ರಕಾರ 18 ರಜೆಗಳಿವೆ. ಇದರಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 8 ದಿನಗಳು ಬ್ಯಾಂಕಿಗೆ ರಜೆ ಇರುತ್ತದೆ. ಡಿಸೆಂಬರ್ 25ರಂದು ಕ್ರಿಸ್ಮಸ್ಗೆ ರಜೆ ಇದೆ. ಅದು ಬಿಟ್ಟರೆ ಉಳಿದ ರಜೆಗಳು ಭಾನುವಾರ ಮತ್ತು ಶನಿವಾರದ ರಜೆಗಳೇ ಆಗಿವೆ.
ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ
ಹಾಗೆಯೇ, ಡಿಸೆಂಬರ್ ಮೊದಲೆರಡು ವಾರದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಇದೆ. ಡಿಸೆಂಬರ್ 11ರಂದು ಎಲ್ಲಾ ಖಾಸಗಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಡಿಸೆಂಬರ್ 4ರಿಂದ 8ರವರೆಗೆ ವಿವಿಧ ಸರ್ಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ