ನವದೆಹಲಿ, ಆಗಸ್ಟ್ 3: ಅಮೆರಿಕದ ಯುಎಸ್ ಪೌರತ್ವ ಮತ್ತು ವಲಸೆ ಸೇವೆ (USCIS) ಸಂಸ್ಥೆ ಈ ಹಣಕಾಸು ವರ್ಷಕ್ಕೆ ಎಚ್-1ಬಿ ವೀಸಾ ನೀಡಲು ಎರಡನೇ ಸುತ್ತಿನ ಲಾಟರಿ ನಡೆಸಿದೆ. ಈ ಸುತ್ತಿನಲ್ಲಿ 77,600 ಎಚ್-1ಬಿ ನೊಂದಣಿಗಳು ಆಯ್ಕೆಯಾಗಿವೆ. ಮೊದಲ ಸುತ್ತಿನಲ್ಲಿ 1,10,791 ನೊಂದಣಿಗಳು ಆಯ್ಕೆಯಾಗಿದ್ದವು. ಎರಡು ಸುತ್ತಿನ ಲಾಟರಿಯಲ್ಲಿ ಒಟ್ಟು 1,88,400 ಎಚ್-1ಬಿ ರಿಜಿಸ್ಟ್ರೇಶನ್ಗಳನ್ನು ಆರಿಸಲಾಗಿದೆ. 2024ರ ಹಣಕಾಸು ವರ್ಷಕ್ಕೆ ಒಟ್ಟು 7,80,884 ನೊಂದಣಿಗಳು ದಾಖಲಾಗಿದ್ದವು. ಈ ಪೈಕಿ ಅರ್ಹ ನೊಂದಣಿಗಳ ಸಂಖ್ಯೆ 7,58,994 ಇದೆ. ಇದರಲ್ಲಿ 1,88,400 ನೊಂದಣಿಗಳನ್ನು ಎರಡು ಸುತ್ತಿನ ಲಾಟರಿ ಮೂಲಕ ಆರಿಸಲಾಗಿದೆ.
2024ರ ಹಣಕಾಸು ವರ್ಷಕ್ಕೆ ಅಮೆರಿಕ ನಿಗದಿ ಮಾಡಿರುವ ಎಚ್-1ಬಿ ವೀಸಾ ಮಿತಿ 85,000 ಇದೆ. ಅಂದರೆ ಈ ವರ್ಷಕ್ಕೆ ಕೇವಲ 85,000 ಮಂದಿಗೆ ಮಾತ್ರ ಎಚ್1ಬಿ ವೀಸಾ ಸಿಗುತ್ತದೆ. 1,88,400 ನೊಂದಣಿಗಳ ಪೈಕಿ 85,000 ಮಂದಿಯನ್ನು ಆರಿಸಲು ಮೂರನೇ ಸುತ್ತಿನ ಲಾಟರಿ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು
ಅಮೆರಿಕದಲ್ಲಿ ವ್ಯವಹಾರ ನಡೆಸದಂತೆ ಕೆಲವೊಮ್ಮೆ ವಿವಿಧ ಸಂಸ್ಥೆಗಳನ್ನು ಮತ್ತು ವ್ಯಕ್ತಿಗಳನ್ನು ನಿರ್ಬಂಧಿಸಲಾಗುತ್ತದೆ. ಕಾರ್ಮಿಕ ಇಲಾಖೆ ಆಗಾಗ್ಗೆ ಬಹಿಷ್ಕೃತರ ಪಟ್ಟಿ ಬಿಡುಗಡೆ ಮಾಡುತ್ತದೆ. ಜುಲೈ 31ರಂದು ಪಟ್ಟಿ ಪರಿಷ್ಕರಿಸಲಾಗಿದೆ. ಅಮೆರಿಕದಲ್ಲಿ ನಿಷೇಧವಾಗಿರುವ ಕೆಲ ಸಂಘ ಸಂಸ್ಥೆಗಳ ಪಟ್ಟಿ ಇಲ್ಲಿದೆ:
ಇದನ್ನೂ ಓದಿ: Foxconn: ಕರ್ನಾಟಕದಲ್ಲಿ ಫಾಕ್ಸ್ಕಾನ್ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು
ಈ ಮೇಲಿನ ಸಂಸ್ಥೆ ಮತ್ತು ವ್ಯಕ್ತಿಗಳು ಎಚ್-1ಬಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಿಷೇಧವಾಗಿರುವುದು ತಿಳಿದುಬಂದಿದೆ. ಇನ್ನು, ಎಚ್-1ಬಿ ವೀಸಾ ಎಂಬುದು ಅಮೆರಿಕವು ವಿಶೇಷ ಮತ್ತು ವೃತ್ತಿಪರ ಕೌಶಲ್ಯಗಳ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಕೊಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ