Restriction: ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳ ಆಮದು ಮೇಲೆ ನಿರ್ಬಂಧ; ತತ್​ಕ್ಷಣದಿಂದಲೇ ಆಜ್ಞೆ ಜಾರಿ

Commerce Ministry Notification: ಆಲ್ ಇನ್ ಒನ್ ಪರ್ಸನಲ್ ಕಂಪ್ಯುಟರ್, ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳ ಆಮದು ವಿರುದ್ಧ ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಬಂಧ ಹೇರಿದೆ. ನಿರ್ಬಂಧಿತ ಆಮದಿಗೆ ಪರವಾನಿಗೆ ಹೊಂದಿರುವವರು ಮಾತ್ರ ಇವುಗಳನ್ನು ಆಮದು ಮಾಡಿಕೊಳ್ಳಬಹುದು.

Restriction: ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳ ಆಮದು ಮೇಲೆ ನಿರ್ಬಂಧ; ತತ್​ಕ್ಷಣದಿಂದಲೇ ಆಜ್ಞೆ ಜಾರಿ
ಲ್ಯಾಪ್ ಟಾಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 2:51 PM

ನವದೆಹಲಿ, ಆಗಸ್ಟ್ 3: ಪರ್ಸನಲ್ ಕಂಪ್ಯೂಟರ್, ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್​ಗಳ ಆಮದು (Imports) ಮೇಲೆ ತತ್​ಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ನಿರ್ಬಂಧಿತ ಆಮದುಗಳಿಗೆಂದು ಪರವಾನಿಗೆ (License For Restricted Imports) ಹೊಂದಿದವರು ಹೊರತುಪಡಿಸಿ ಉಳಿದವರು ಯಾರೂ ಕೂಡ ಈ ಮೇಲಿನ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ (ಆಗಸ್ಟ್ 3) ಈ ಅಧಿಸೂಚನೆ ಹೊರಡಿಸಿದ್ದು, ತತ್​ಕ್ಷಣದಿಂದಲೇ ಈ ನಿರ್ಬಂಧ ಜಾರಿಗೆ ಬರುತ್ತದೆ ಎಂದು ಹೇಳಿದೆ.

‘ಎಚ್​ಎಸ್​ಎನ್8741 ಅಡಿಯಲ್ಲಿ ಬರುವ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್ ಮತ್ತು ಅತಿಚಿಕ್ಕ ಕಂಪ್ಯೂಟರ್ (Ultra Small Form Factor Computer) ಮತ್ತು ಸರ್ವರ್​ಗಳ ಆಮದನ್ನು ನಿರ್ಬಂಧಿಸಲಾಗುತ್ತದೆ. ನಿರ್ಬಂಧಿತ ಆಮದಿಗೆ ಸೂಕ್ತ ಪರವಾನಿಗೆ ಹೊಂದಿವರಿಗೆ ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ಇರುತ್ತದೆ’ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇಲ್ಲಿ ಬ್ಯಾಗೇಜ್ ನಿಯಮಗಳ (Baggage Rules) ಅಡಿಯಲ್ಲಿ ಬರುವ ಆಮದುಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಮೇಲೆ ತಿಳಿಸಲಾಗಿರುವ ಎಚ್​ಎಸ್​ಎನ್8741 ಕೋಡ್ ಜಿಎಸ್​ಟಿಗೆ ಮಾಡಲಾದ ವರ್ಗೀಕರಣ. ಆಮದು ಮಾಡಲಾದ ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳು ಈ ಗುಂಪಿಗೆ ಸೇರುತ್ತವೆ. ಇವಕ್ಕೆ ಶೇ. 18ರಷ್ಟು ತೆರಿಗೆ ಇರುತ್ತದೆ. ಇನ್ನು, ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್ ಎಂಬುದು ಅತಿಸಣ್ಣ ಕಂಪ್ಯೂಟರ್. ಇದರ ಸಿಪಿಯು ಅಥವಾ ಕೇಸ್ 20 ಲೀಟರ್ ಗಾತ್ರಕ್ಕಿಂತ ಕಡಿಮೆ ಆಗಿದ್ದಾಗಿರುತ್ತದೆ.

ಇದನ್ನೂ ಓದಿ: Toll Update: ಕೇಂದ್ರದಿಂದ ಸದ್ಯದಲ್ಲೇ ತಡೆರಹಿತ ಟೋಲ್ ಸಿಸ್ಟಂ; ಹೆದ್ದಾರಿ ಪ್ರಯಾಣ ಇನ್ನೂ ಸುಗಮ

ಇವುಗಳಿಗೆ ಆಮದು ನಿರ್ಬಂಧ ಇಲ್ಲ….

ಮೇಲೆ ತಿಳಿಸಲಾದ ಲ್ಯಾಪ್​ಟಾಪ್, ಟ್ಯಾಬ್ಲೆಂಟ್, ಆಲ್ ಇನ್ ಒನ್ ಪಿಸಿ, ಅತಿಚಿಕ್ಕ ಫ್ಯಾಕ್ಟರ್ ಕಂಪ್ಯೂಟರ್ ಮತ್ತು ಸರ್ವರ್​ಗಳನ್ನು ಯಂತ್ರೋಪಕರಣಗಳ ಭಾಗವಾಗಿ ಆಮದು ಮಾಡಿಕೊಳ್ಳಲು ನಿರ್ಬಂಧ ಇರುವುದಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ, ಟೆಸ್ಟಿಂಗ್, ಬೆಂಚ್​ಮಾರ್ಕಿಂಗ್, ಇವ್ಯಾಲುಯೇಶನ್, ದುರಸ್ತಿ ಮತ್ತು ಮರು ರಫ್ತು, ಉತ್ಪನ್ನ ಅಭಿವೃದ್ಧಿ ಈ ಉದ್ದೇಶಗಳಿಗೆ ಆಮದು ಮಾಡಿಕೊಳ್ಳಬಹುದು. ಒಂದು ಕನ್​ಸೈನ್ಮೆಂಟ್​ನಲ್ಲಿ ಇಂಥ 20 ಐಟಂಗಳ ಆಮದಿಗೆ ಪರವಾನಿಗೆ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ