America: ಎಚ್-1ಬಿ ವೀಸಾ, 2ನೇ ಸುತ್ತಿನ ಲಾಟರಿ; ಅಮೆರಿಕದಿಂದ ಬಹಿಷ್ಕಾರಗೊಂಡ ಕಂಪನಿಗಳು ಮತ್ತು ವ್ಯಕ್ತಿಗಳ ಹೊಸ ಪಟ್ಟಿ

H-1B Visa, Disqualification List: ಅಮೆರಿಕದಲ್ಲಿ 2024ರ ಹಣಕಾಸು ವರ್ಷಕ್ಕೆ 85,000 ಮಂದಿಗೆ ಎಚ್-1ಬಿ ವೀಸಾ ಕೊಡಲು ನಿಗದಿಯಾಗಿದೆ. 7 ಲಕ್ಷಕ್ಕೂ ಹೆಚ್ಚು ನೊಂದಣಿಗಳ ಪೈಕಿ ಎರಡು ಸುತ್ತಿನ ಲಾಟರಿಯಲ್ಲಿ 1,88,400 ನೊಂದಣಿಗಳನ್ನು ಆರಿಸಲಾಗಿದೆ. ಈಗ 3ನೇ ಸುತ್ತಿನ ಲಾಟರಿ ನಡೆಸಲಾಗುತ್ತದೆ.

America: ಎಚ್-1ಬಿ ವೀಸಾ, 2ನೇ ಸುತ್ತಿನ ಲಾಟರಿ; ಅಮೆರಿಕದಿಂದ ಬಹಿಷ್ಕಾರಗೊಂಡ ಕಂಪನಿಗಳು ಮತ್ತು ವ್ಯಕ್ತಿಗಳ ಹೊಸ ಪಟ್ಟಿ
ಎಚ್1ಬಿ ವೀಸಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 12:08 PM

ನವದೆಹಲಿ, ಆಗಸ್ಟ್ 3: ಅಮೆರಿಕದ ಯುಎಸ್ ಪೌರತ್ವ ಮತ್ತು ವಲಸೆ ಸೇವೆ (USCIS) ಸಂಸ್ಥೆ ಈ ಹಣಕಾಸು ವರ್ಷಕ್ಕೆ ಎಚ್-1ಬಿ ವೀಸಾ ನೀಡಲು ಎರಡನೇ ಸುತ್ತಿನ ಲಾಟರಿ ನಡೆಸಿದೆ. ಈ ಸುತ್ತಿನಲ್ಲಿ 77,600 ಎಚ್-1ಬಿ ನೊಂದಣಿಗಳು ಆಯ್ಕೆಯಾಗಿವೆ. ಮೊದಲ ಸುತ್ತಿನಲ್ಲಿ 1,10,791 ನೊಂದಣಿಗಳು ಆಯ್ಕೆಯಾಗಿದ್ದವು. ಎರಡು ಸುತ್ತಿನ ಲಾಟರಿಯಲ್ಲಿ ಒಟ್ಟು 1,88,400 ಎಚ್-1ಬಿ ರಿಜಿಸ್ಟ್ರೇಶನ್​ಗಳನ್ನು ಆರಿಸಲಾಗಿದೆ. 2024ರ ಹಣಕಾಸು ವರ್ಷಕ್ಕೆ ಒಟ್ಟು 7,80,884 ನೊಂದಣಿಗಳು ದಾಖಲಾಗಿದ್ದವು. ಈ ಪೈಕಿ ಅರ್ಹ ನೊಂದಣಿಗಳ ಸಂಖ್ಯೆ 7,58,994 ಇದೆ. ಇದರಲ್ಲಿ 1,88,400 ನೊಂದಣಿಗಳನ್ನು ಎರಡು ಸುತ್ತಿನ ಲಾಟರಿ ಮೂಲಕ ಆರಿಸಲಾಗಿದೆ.

2024ರ ಹಣಕಾಸು ವರ್ಷಕ್ಕೆ ಅಮೆರಿಕ ನಿಗದಿ ಮಾಡಿರುವ ಎಚ್-1ಬಿ ವೀಸಾ ಮಿತಿ 85,000 ಇದೆ. ಅಂದರೆ ಈ ವರ್ಷಕ್ಕೆ ಕೇವಲ 85,000 ಮಂದಿಗೆ ಮಾತ್ರ ಎಚ್1ಬಿ ವೀಸಾ ಸಿಗುತ್ತದೆ. 1,88,400 ನೊಂದಣಿಗಳ ಪೈಕಿ 85,000 ಮಂದಿಯನ್ನು ಆರಿಸಲು ಮೂರನೇ ಸುತ್ತಿನ ಲಾಟರಿ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

ಅಮೆರಿಕದಲ್ಲಿ ವ್ಯವಹಾರದಿಂದ ಬಹಿಷ್ಕೃತಗೊಂಡ ಸಂಸ್ಥೆಗಳು ಮತ್ತು ವ್ಯಕ್ತಿಗಳು

ಅಮೆರಿಕದಲ್ಲಿ ವ್ಯವಹಾರ ನಡೆಸದಂತೆ ಕೆಲವೊಮ್ಮೆ ವಿವಿಧ ಸಂಸ್ಥೆಗಳನ್ನು ಮತ್ತು ವ್ಯಕ್ತಿಗಳನ್ನು ನಿರ್ಬಂಧಿಸಲಾಗುತ್ತದೆ. ಕಾರ್ಮಿಕ ಇಲಾಖೆ ಆಗಾಗ್ಗೆ ಬಹಿಷ್ಕೃತರ ಪಟ್ಟಿ ಬಿಡುಗಡೆ ಮಾಡುತ್ತದೆ. ಜುಲೈ 31ರಂದು ಪಟ್ಟಿ ಪರಿಷ್ಕರಿಸಲಾಗಿದೆ. ಅಮೆರಿಕದಲ್ಲಿ ನಿಷೇಧವಾಗಿರುವ ಕೆಲ ಸಂಘ ಸಂಸ್ಥೆಗಳ ಪಟ್ಟಿ ಇಲ್ಲಿದೆ:

  1. ಬ್ರಾಡ್​ಗೇಟ್ ಐಎನ್​ಸಿ: 2022ರ ಜೂನ್​ನಲ್ಲಿ ಈ ಕಂಪನಿಯನ್ನು ಅನರ್ಹಗೊಳಿಸಲಾಗಿತ್ತು. ಇದರ ಮೇಲಿನ ನಿಷೇಧ 2024ರ ಜೂನ್​ವರೆಗೂ ಇರುತ್ತದೆ.
  2. ಮ್ಯಾಕ್ಸ್ ಯುಎಸ್​ಎ: ಅನರ್ಹಗೊಂಡಿದ್ದು 2023 ಮೇ ತಿಂಗಳಲ್ಲಿ. ಇದು 2025ರ ಮೇ ತಿಂಗಳವರೆಗೂ ಇರುತ್ತದೆ.
  3. ಪ್ಯಾಕೆಟ್ ಒನ್ ಎಲ್​ಎಲ್​ಸಿ: 2023ರ ಮೇ ತಿಂಗಳಲ್ಲಿ ಮಾಡಿದ್ದ ನಿಷೇಧ 2025ರವರೆಗೂ ಇದೆ.
  4. ಸ್ಪೇಟ್ ಬ್ಯುಸಿನೆಸ್ ಸಲ್ಯೂಷನ್ಸ್ ಎಲ್​ಎಲ್​ಸಿ: 2025ರ ಮೇ ತಿಂಗಳವರೆಗೂ ನಿಷೇಧ
  5. ಕ್ಲೌಡ್​ಪಾಯಿಂಟ್ ಸಿಸ್ಟಮ್ಸ್ ಐಎನ್​ಸಿ: 2023ರ ಆಗಸ್ಟ್ ತಿಂಗಳವರೆಗೂ ನಿಷೇಧ.
  6. ವರ್ಚುಲಿಟಿಕ್ಸ್ ಐಎನ್​ಸಿ: 2025ರ ಮೇ ತಿಂಗಳವರೆಗೂ ನಿಷೇಧ.
  7. ಮುಜೀವ್ ರಹಮಾನ್: 2025ರ ಮೇ ತಿಂಗಳವರೆಗೂ ನಿಷೇಧ
  8. ಕಾಂಪ್ರಹೆನ್ಸಿವ್ ಕಿಡ್ಸ್ ಡೆವಲಪ್ಮೆಂಟಲ್ ಸ್ಕೂಲ್: ನಿಷೇಧ ಅವಧಿ ಬಗ್ಗೆ ಮಾಹಿತಿ ಇಲ್ಲ
  9. ಹೌ ವೀ ಫಂಡ್ ಇಟ್: ನಿಷೇಧ ಅವಧಿ ಬಗ್ಗೆ ಮಾಹಿತಿ ಇಲ್ಲ
  10. ಕಿಂಬರ್ಲೀ ಫಿಶರ್: ನಿಷೇಧ ಅವಧಿ ಬಗ್ಗೆ ಮಾಹಿತಿ ಇಲ್ಲ

ಇದನ್ನೂ ಓದಿ: Foxconn: ಕರ್ನಾಟಕದಲ್ಲಿ ಫಾಕ್ಸ್​ಕಾನ್​ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು

ಈ ಮೇಲಿನ ಸಂಸ್ಥೆ ಮತ್ತು ವ್ಯಕ್ತಿಗಳು ಎಚ್-1ಬಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಿಷೇಧವಾಗಿರುವುದು ತಿಳಿದುಬಂದಿದೆ. ಇನ್ನು, ಎಚ್-1ಬಿ ವೀಸಾ ಎಂಬುದು ಅಮೆರಿಕವು ವಿಶೇಷ ಮತ್ತು ವೃತ್ತಿಪರ ಕೌಶಲ್ಯಗಳ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ