AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

51st GST Council Meeting: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಗಸ್ಟ್ 2ರಂದು ನಡೆದ 51ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮದ ಆತಂಕ ನಿವಾರಿಸುವ ಪ್ರಯತ್ನ ನಡೆಯಿತು.

Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು
ಗೇಮಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 10:21 AM

Share

ನವದೆಹಲಿ, ಆಗಸ್ಟ್ 3: ಸರಕು ಮತ್ತು ಸೇವಾ ತೆರಿಗೆ ಮಂಡಳಿ (GST Council) ಆನ್​ಲೈನ್ ಗೇಮ್​ಗಳು, ಜೂಜು ಮತ್ತು ಕುದುರೆ ರೇಸ್ ಇತ್ಯಾದಿ ಅದೃಷ್ಟದಾಟಗಳಿಗೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವುದನ್ನು ಹಿಂಪಡೆಯದಿರಲು ನಿರ್ಧರಿಸಿವೆ. ಅಕ್ಟೋಬರ್ 1ರಂದು ಆನ್​ಲೈನ್ ಗೇಮಿಂಗ್​ಗೆ ನೂತನ ಜಿಎಸ್​ಟಿ ದರವನ್ನು ಜಾರಿಗೊಳಿಸಲು ಆಗಸ್ಟ್ 2ರಂದು ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆನ್​ಲೈನ್ ಗೇಮಿಂಗ್​ಗೆ ಅಕ್ಟೋಬರ್ 1ರಿಂದ ಶೇ. 28ರಷ್ಟು ಜಿಎಸ್​ಟಿ ವಿಧಿಸಲಾಗುವುದು. ಅದಾಗಿ 6 ತಿಂಗಳ ಬಳಿಕ ಪರಾಮರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರುಗಳು ಭಾಗವಹಿಸಿದ್ದರು. ಈ ವೇಳೆ ಶೇ. 28ರಷ್ಟು ಜಿಎಸ್​ಟಿಯನ್ನು ಗೇಮಿಂಗ್ ಉದ್ಯಮಕ್ಕೆ ವಿಧಿಸುವ ತೀರ್ಮಾನಕ್ಕೆ ಬದ್ಧವಾಗಿ ನಿರ್ಣಯ ಹೊರಡಿಸಲಾಯಿತು. ಈ ವೇಳೆ ದೆಹಲಿ, ಗೋವಾ ಮತ್ತು ಸಿಕ್ಕಿ ರಾಜ್ಯಗಳು ಮಂಡಳಿ ನಿರ್ಧಾರವನ್ನು ವಿರೋಧಿಸಿದವಾದರೂ ನಿರ್ಣಯ ವಿರುದ್ಧ ಮತಚಲಾಯಿಸುವ ಮಟ್ಟಕ್ಕೆ ಹೋಗಲಿಲ್ಲ.

ಇದನ್ನೂ ಓದಿ: Foxconn: ಕರ್ನಾಟಕದಲ್ಲಿ ಫಾಕ್ಸ್​ಕಾನ್​ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು

ಬಹುಮಾನ ಹಣಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಉದ್ಯಮ ನಿರಾಳ

ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನವು ಆನ್​ಲೈನ್ ಗೇಮಿಂಗ್ ಉದ್ಯಮ ನಿಟ್ಟುಸಿರು ಬಿಡುವಂತೆ ಮಾಡಿದೆ. ಆನ್​ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆಟಗಾರ ಗೆದ್ದ ಹಣಕ್ಕೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾಪವನ್ನು ಮಂಡಳಿ ಕೈಬಿಟ್ಟಿದೆ. ಹಾಗೆಯೇ, ಹಿಂದಿನ ಜಿಎಸ್​ಟಿ ಸಭೆಯಲ್ಲಿ ತೀರ್ಮಾನಿಸಲಾದಂತೆ ಆಟಗಾರನ ಬೆಟ್ಟಿಂಗ್​ನ ಪೂರ್ಣ ಮೌಲ್ಯಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪವನ್ನೂ ಕೈಬಿಡಲಾಗಿದೆ. ಅದರ ಬದಲು, ಆನ್​ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆರಂಭಿಕ ಬೆಟ್ಟಿಂಗ್ ಹಣಕ್ಕೆ ಮಾತ್ರ ಜಿಎಸ್​ಟಿ ವಿಧಿಸಲು ನಿರ್ಧರಿಸಲಾಗಿದೆ. ಅಂದರೆ, ಮೊದಲ ಬೆಟ್ಟಿಂಗ್ ಮೊತ್ತಕ್ಕೆ ಮಾತ್ರ ತೆರಿಗೆ ಇರುತ್ತದೆ. ಆಟ ಮುಂದುವರಿಸಿ ಇನ್ನಷ್ಟು ಬೆಟ್ಟಿಂಗ್​ಗಳನ್ನು ಕಟ್ಟಿದರೆ ಅದಕ್ಕೆ ತೆರಿಗೆ ಇರುವುದಿಲ್ಲ.

ನಿನ್ನೆ ನಡೆದ 51ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳೂ ಪಾಲ್ಗೊಂಡಿದ್ದವು. ಆನ್ಲೈನ್ ಗೇಮಿಂಗ್​ಗೆ ಶೇ. 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾಪವನ್ನು ಮರುಪರಿಶೀಲಿಸಬೇಕೆಂದು ದೆಹಲಿ, ಗೋವಾ ಮತ್ತು ಸಿಕ್ಕಿಂ ಒತ್ತಾಯಿಸಿವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿನೀಡಿದ್ದಾರೆ.

ಇದನ್ನೂ ಓದಿ: DA Hike: ಸರ್ಕಾರಿ ನೌಕರರಿಗೆ ಮತ್ತೆ ಗುಡ್ ನ್ಯೂಸ್; ಈ ಬಾರಿಯೂ ಶೇ. 4 ಡಿಎ ಹೆಚ್ಚಳ ಸಾಧ್ಯತೆ

ಮಹಾರಾಷ್ಟ್ರ, ಗುಜರಾತ್, ಛತ್ತೀಸ್​ಗಡ, ಪಶ್ಚಿಮ ಬಂಗಾಳ ಮತ್ತು ಬಿಹಾರ ಮೊದಲಾದ ರಾಜ್ಯಗಳು ಆದಷ್ಟೂ ಬೇಗ ನೂತನ ಜಿಎಸ್​ಟಿ ಜಾರಿಯಾಗಲಿ ಎಂದು ಒತ್ತಾಯಿಸಿರುವುದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಜೂಜುಗಳಿಗೆ ನಿಷೇಧ ಹಾಕಲಾಗಿದೆ. ಕರ್ನಾಟಕ ಸರ್ಕಾರ ಕೂಡ ಜೂಜು ಇತ್ಯಾದಿ ಗೇಮ್​ಗಳನ್ನು ನಿಷೇಧಿಸುವ ಇರಾದೆಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?