ಎಲೆಕ್ಟ್ರಿಕ್ ದ್ವಿಚಕ್ರ ವಾಹಗಳಿಗೆ 10,000 ರೂ ಸಬ್ಸಿಡಿ; 2025ರ ಮಾರ್ಚ್​ವರೆಗೂ ಮಾತ್ರ ಈ ಕೊಡುಗೆ

Electric vehicles subsidy: ಈ ಹಣಕಾಸು ವರ್ಷಾಂತ್ಯದವರೆಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ ಸಬ್ಸಿಡಿ, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ 50,000 ರೂ ಸಬ್ಸಿಡಿ ಸಿಗಲಿದೆ. ಪಿಎಂ ಇ-ಡ್ರೈವ್ ಯೋಜನೆಯಲ್ಲಿ 2025ರ ಮಾರ್ಚ್​ವರೆಗೂ ಈ ಸಬ್ಸಿಡಿ ಕೊಡಲಾಗುತ್ತದೆ. ಅದಾದ ಬಳಿಕ ಸಬ್ಸಿಡಿ ಪ್ರಮಾಣ ಅರ್ಧದಷ್ಟು ಕಡಿಮೆ ಆಗುತ್ತದೆ. ದ್ವಿಚಕ್ರ ವಾಹನಗಳಿಗೆ 5,000 ರೂ ಮತ್ತು ತ್ರಿಚಕ್ರ ವಾಹನಗಳಿಗೆ 25,000 ರೂ ಮಾತ್ರ ಸಬ್ಸಿಡಿ ಇರುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹಗಳಿಗೆ 10,000 ರೂ ಸಬ್ಸಿಡಿ; 2025ರ ಮಾರ್ಚ್​ವರೆಗೂ ಮಾತ್ರ ಈ ಕೊಡುಗೆ
ಒಲಾ ಎಲೆಕ್ಟ್ರಿಕ್
Follow us
|

Updated on: Sep 13, 2024 | 1:00 PM

ನವದೆಹಲಿ, ಸೆಪ್ಟೆಂಬರ್ 13: ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ಕೊಡುವ ಸಲುವಾಗಿ ಸರ್ಕಾರ ಪಿಎಂ ಇ-ಡ್ರೈವ್ ಸಬ್ಸಿಡಿ ಸ್ಕೀಮ್ ಅನ್ನು ಆರಂಭಿಸಿದೆ. ಅದರಂತೆ ಎಲೆಕ್ಟ್ರಿಕ್ ವಾಹನಗಳಿಗೆ 50,000 ರುವರೆಗೆ ಸಬ್ಸಿಡಿ ಸಿಗಲಿದೆ. ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್​.ಡಿ. ಕುಮಾರಸ್ವಾಮಿ ನೀಡಿದ ಮಾಹಿತಿ ಪ್ರಕಾರ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ ಸಬ್ಸಿಡಿ ಸಿಗಲಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ 50,000 ರೂ ಸಬ್ಸಿಡಿ ಸಿಗಲಿದೆ. ಆದರೆ, ಕಾರು ಸೇರಿದಂತೆ ನಾಲ್ಕು ಚಕ್ರದ ಇವಿಗಳಿಗೆ ಸಬ್ಸಿಡಿ ಇರುವುದಿಲ್ಲ.

2025-26ರ ಹಣಕಾಸು ವರ್ಷದ ಅಂತ್ಯಕ್ಕೆ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮಾಣ ಶೇ. 10ರಷ್ಟು ಇರಬೇಕು. ತ್ರಿಚಕ್ರ ವಾಹನ ಕ್ಷೇತ್ರದಲ್ಲಿ ಇವಿಗಳ ಸಂಖ್ಯೆ ಶೇ. 15ರಷ್ಟು ಇರಬೇಕು ಎಂಬುದು ಸರ್ಕಾರ ಗುರಿ. ಆ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿದೆ. ಇದರ ಭಾಗವಾಗಿ ಇ-ಡ್ರೈವ್ ಯೋಜನೆ ಹಾಕಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ಈ ಹಣಕಾಸು ವರ್ಷಾಂತ್ಯದವರೆಗೂ ತಲಾ 10,000 ರೂ ಮತ್ತು 50,000 ರೂ ಸಬ್ಸಿಡಿ ಸಿಗಲಿದೆ. ಅದಾದ ಬಳಿಕ, ಅಂದರೆ ಏಪ್ರಿಲ್​ನಿಂದ ಸಬ್ಸಿಡಿ ಅರ್ಧದಷ್ಟು ಕಡಿಮೆ ಆಗುತ್ತದೆ. ಅಂದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಸಿಗುವ ಸಬ್ಸಿಡಿ 5,000 ರೂಗೆ ಇಳಿಯಲಿದೆ. ತ್ರಿಚಕ್ರ ವಾಹನಕ್ಕೆ ಸಬ್ಸಿಡಿ 25,000 ರೂ ಆಗಲಿದೆ.

ಇದನ್ನೂ ಓದಿ: ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್; ಏನಿದು ಹೊಸ ಫೀಚರ್?

ಪಿಎಂ ಇ-ಡ್ರೈವ್ ಯೋಜನೆಯಲ್ಲಿ ಸಬ್ಸಿಡಿ ಸೌಲಭ್ಯ ಮಾತ್ರವಲ್ಲ, ಇವಿ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ ಕೊಡಲಾಗುತ್ತದೆ. ಹಿಂದಿನ ಫೇಮ್ ಸ್ಕೀಮ್​ಗಳಲ್ಲಿದ್ದ ನ್ಯೂನತೆಗಳನ್ನು ಈ ಯೋಜನೆ ಮೂಲಕ ಸರಿಪಡಿಸಲಾಗಿದೆ. ದೇಶೀಯವಾಗಿ ತಯಾರಾದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಕೊಡಲಾಗುತ್ತದೆ. ಆದರೆ ಈ ಸೌಲಭ್ಯವನ್ನು ಕೆಲ ಕಾರ್ ಕಂಪನಿಗಳು ದುರ್ಬಳಕೆ ಮಾಡಿಕೊಂಡಿದ್ದಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಇವಿಗಳಿಗೂ ಸಬ್ಸಿಡಿ ಕ್ಲೇಮ್ ಮಾಡಲಾಗುತ್ತಿತ್ತು. ಈ ರೀತಿ ಪೋಲಾದ ಹಣವನ್ನು ಮರಳಿ ಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ