AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್; ಏನಿದು ಹೊಸ ಫೀಚರ್?

UPI Lite Auto top-up:ಯುಪಿಐ ಲೈಟ್ ಫೀಚರ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಆಟೊ ಟಾಪಪ್ ಸೌಲಭ್ಯವನ್ನು ಸೇರಿಸಲಾಗುತ್ತಿದೆ. ಅಕ್ಟೋಬರ್ 31ರಿಂದ ಯುಪಿಐ ಲೈಟ್ ಅಕೌಂಟ್​ಗೆ ಆಟೊ ಟಾಪ್ ಅಪ್ ಅವಕಾಶ ಸಿಗಲಿದೆ. 500 ರೂ ಒಳಗಿನ ಹಣ ಪಾವತಿಗೆ ಯುಪಿಐ ಲೈಟ್ ಬಳಸಬಹುದು. 2,000 ರೂ ಒಳಗಿನ ಹಣವನ್ನು ಆಟೊ ಟಾಪ್ ಅಪ್ ಆಗಿ ಮ್ಯಾಂಡೇಟ್ ಕೊಡಬಹುದು.

ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್; ಏನಿದು ಹೊಸ ಫೀಚರ್?
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2024 | 11:22 AM

Share

ಬೆಂಗಳೂರು, ಸೆಪ್ಟೆಂಬರ್ 13: ಯುಪಿಐ ಬಳಸುತ್ತಿರುವವರು ಯುಪಿಐ ಲೈಟ್ ಫೀಚರ್ ಬಳಸುತ್ತಿರಬಹುದು. ಸಣ್ಣ ಮೊತ್ತದ ಹಣ ವಹಿವಾಟಿಗೆ ಇದು ಬಹಳ ಅನುಕೂಲ ಆಗುತ್ತದೆ. ಪೇಟಿಎಂ, ಫೋನ್​ಪೇ ಮೊದಲಾದ ಕೆಲ ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ಈ ಫೀಚರ್ ಅನ್ನು ಅಳವಡಿಸಲಾಗಿದೆ. ಎನ್​ಪಿಸಿಐ ಈಗ ಯುಪಿಐ ಲೈಟ್ ಫೀಚರ್​ನಲ್ಲಿ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಅಕ್ಟೋಬರ್ 31ರಿಂದ ಯುಪಿಐ ಲೈಟ್​ ಅಕೌಂಟ್​ಗೆ ಆಟೊ ಟಾಪ್ ಅಪ್ ಮಾಡುವ ಅವಕಾಶ ಇರಲಿದೆ.

ಆಟೊ ಟಾಪ್ ಅಪ್ ಎಂದರೆ ಆಟೊಮ್ಯಾಟಿಕ್ ಆಗಿ ಹಣ ವರ್ಗಾವಣೆ ಆಗುವುದು. ಯುಪಿಐ ಲೈಟ್ ಅಕೌಂಟ್​ನಲ್ಲಿ 2,000 ರೂವರೆಗೆ ಹಣ ತುಂಬಿಸಬಹುದು. ಆ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ಅದಕ್ಕೆ ಮ್ಯಾನುವಲ್ ಆಗಿ ಹಣ ತುಂಬಿಸಬೇಕಾಗುತ್ತದೆ. ಆಟೊ ಟಾಪ್ ಅಪ್ ಅವಕಾಶ ಇದ್ದರೆ ಯುಪಿಐ ಲೈಟ್ ಅಕೌಂಟ್​ನಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ನೀವು ನಿರ್ದಿಷ್ಟಪಡಿಸಿದ ಮೊತ್ತದಷ್ಟು ಹಣ ತನ್ನಂತಾನೆ ವರ್ಗಾವಣೆ ಆಗುತ್ತದೆ. ಒಟ್ಟಾರೆ ಯುಪಿಐ ಲೈಟ್ ಅಕೌಂಟ್​ನಲ್ಲಿ ಇರುವ ಹಣ 2,000 ರೂ ಮೀರಿರಬಾರದು ಅಷ್ಟೇ.

ಈ ಯುಪಿಯ ಲೈಟ್​ನ ಆಟೊ ಟಾಪ್ ಅಪ್ ಫೀಚರ್ 2024ರ ಅಕ್ಟೋಬರ್ 31ರಿಂದ ಸಕ್ರಿಯಗೊಳ್ಳುತ್ತದೆ. ಆಗಸ್ಟ್ 27ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಎನ್​ಪಿಸಿಐ ಈ ವಿಚಾರವನ್ನು ತಿಳಿಸಿತ್ತು.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಏನಿದು ಯುಪಿಐ ಲೈಟ್?

ಯುಪಿಐ ಮೂಲಕ ನೀವು ಹಣ ಪಾವತಿ ಮಾಡುವಾಗ ಬ್ಯಾಂಕ್ ಸರ್ವರ್​ನ ಬಾಗಿಲು ತಟ್ಟಬೇಕಾಗುತ್ತದೆ. ಕೋಟ್ಯಂತರ ಜನರು ವಹಿವಾಟು ನಡೆಸುವಾಗ ಬ್ಯಾಂಕ್ ಸರ್ವರ್​ಗಳಿಗೆ ಕಷ್ಟವಾಗಬಹುದು. ಬ್ಯಾಂಕ್ ಅಕೌಂಟ್​ನ ಪಿನ್ ನಂಬರ್ ಅನ್ನು ಗ್ರಾಹಕರು ಒದಗಿಸಬೇಕು. ಗ್ರಾಹಕರಿಗೂ ತುಸು ಹೆಚ್ಚು ಸಮಯ ಹಿಡಿಯುತ್ತದೆ. ಯುಪಿಐ ಲೈಟ್ ಫೀಚರ್​ನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳನ್ನು (500 ರೂಗಿಂತ ಕಡಿಮೆ) ಯಾವುದೇ ಪಿನ್ ನಮೂದಿಸುವ ಅಗತ್ಯ ಇಲ್ಲದೇ ನಡೆಸಬಹುದು. ಬ್ಯಾಂಕ್​ನ ಕೋರ್ ಸಿಸ್ಟಮ್ ಅನ್ನು ಸಂಪರ್ಕಿಸುವ ಅವಶ್ಯಕತೆಯೂ ಇರುವುದಿಲ್ಲ.

ಯುಪಿಐ ಲೈಟ್ ಫೀಚರ್ ಎಂಬುದು ವ್ಯಾಲಟ್ ರೀತಿ ಕೆಲಸ ಮಾಡುತ್ತದೆ. ಆದರೆ ಪ್ರಮುಖ ವ್ಯತ್ಯಾಸ ಎಂದರೆ ಲೈಟ್ ಫೀಚರ್​ನಲ್ಲಿ ನೀವು ಯಾವುದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವ್ಯಾಲಟ್ ಆದರೆ ಅದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ