HDFC Bank: ಹೆಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಪ್ರತೀ ಷೇರಿಗೆ 19 ರೂ ಲಾಭಾಂಶ ಘೋಷಣೆ

|

Updated on: Apr 16, 2023 | 12:36 PM

Dividend of Rs 19 Per Equity Share Announced: 2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 12,047 ಕೋಟಿ ರೂ ನಿವ್ವಳ ಲಾಭ ಅಗಿದೆ ಎಂದು ವರದಿಯಲ್ಲಿ ತೋರಿಸಿದೆ. ಅಂದರೆ ನಿವ್ವಳ ಲಾಭದಲ್ಲಿ ಶೇ. 16.53ರಷ್ಟು ಹೆಚ್ಚಳವಾಗಿದೆ.

HDFC Bank: ಹೆಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಪ್ರತೀ ಷೇರಿಗೆ 19 ರೂ ಲಾಭಾಂಶ ಘೋಷಣೆ
ಎಚ್​ಡಿಎಫ್​ಸಿ ಬ್ಯಾಂಕ್
Follow us on

ನವದೆಹಲಿ: ಭಾರತದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎನಿಸಿದ ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಏಪ್ರಿಲ್ 15ರಂದು ಪ್ರಕಟಿಸಿದ ಕೊನೆಯ ತ್ರೈಮಾಸಿಕ ಹಣಕಾಸು ವರದಿಯಲ್ಲಿ ಭರ್ಜರಿ ಆದಾಯದ ಘೋಷಣೆ ಮಾಡಿದೆ. 2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 12,047 ಕೋಟಿ ರೂ ನಿವ್ವಳ ಲಾಭ (Net Profit) ಅಗಿದೆ ಎಂದು ವರದಿಯಲ್ಲಿ ತೋರಿಸಿದೆ. ಅಂದರೆ ನಿವ್ವಳ ಲಾಭದಲ್ಲಿ ಶೇ. 16.53ರಷ್ಟು ಹೆಚ್ಚಳವಾಗಿದೆ. ಬಡ್ಡಿಯಿಂದಲೇ ಬಂದ ಆದಾಯ (Income From Interests) 23,351.8 ಕೋಟಿ ರೂ ಆಗಿದೆ. 2021-22ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಡ್ಡಿ ಆದಾಯ 18,872.7 ಕೋಟಿ ರೂ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ತೋರಿಸಿತ್ತು. 2023ರ ಹಣಕಾಸು ವರ್ಷದಲ್ಲಿ ಈ ಆದಾಯದಲ್ಲಿ ಶೇ. 23.7ರಷ್ಟು ಹೆಚ್ಚಳವಾಗಿದೆ. ಬಿಎಸ್​ಇ ಷೇರು ಮಾರುಕಟ್ಟೆಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಈ ಮಾಹಿತಿ ನೀಡಿದೆ.

ಇನ್ನು, ಈ ತ್ರೈಮಾಸಿಕ ಅವಧಿಯಲ್ಲಿ ಹೆಚ್​ಡಿಎಫ್​ಸಿ ಬ್ಯಾಂಕ್​ನ ನಿವ್ವಳ ಆದಾಯ (Net Income) 32,083 ಕೋಟಿ ರೂನಷ್ಟಿದೆ. ಹಿಂದಿನ ವರ್ಷದ ಈ ಅವಧಿಯಲ್ಲಿ 26,509.8 ಕೋಟಿ ರೂ ನಿವ್ವಳ ಆದಾಯ ಗಳಿಸಿತ್ತು. ಈ ಬಾರಿ ಅದು ಶೇ. 21ರಷ್ಟು ಹೆಚ್ಚಾಗಿದೆ.

ಇನ್ನು ಹೆಚ್​ಡಿಎಫ್​ಸಿ ಬ್ಯಾಂಕ್​ನ ಕಾರ್ಯಾಚರಣೆ ವೆಚ್ಚ (Operating Expense) 13,462.1 ಕೋಟಿ ರೂ ಇದೆ. ಹಿಂದಿನ ವರ್ಷದಕ್ಕೆ ಹೋಲಿಸಿರೆ ಈ ಖರ್ಚಿಯಲ್ಲಿ ಶೇ. 32.6ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿForex: ಭಾರತದ ಫೋರೆಕ್ಸ್ ನಿಧಿ 48 ಲಕ್ಷ ಕೋಟಿಗೆ ಏರಿಕೆ; ಆರ್ಥಿಕತೆ ಶೇ. 7ರಷ್ಟು ವೃದ್ಧಿ ಎಂದು ಹಣಕಾಸು ಸಚಿವೆ ನಿರೀಕ್ಷೆ

ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಪ್ರತೀ ಷೇರಿಗೆ 19 ರೂ ಲಾಭಾಂಶ ಘೋಷಣೆ

ಭರ್ಜರಿ ಆದಾಯ ಮತ್ತು ಲಾಭ ಬಂದ ಹಿನ್ನೆಲೆಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​ನ ಷೇರುದಾರರಿಗೆ ಭರ್ಜರಿ ಕೊಡುಗೆಯೂ ಸಿಕ್ಕಿದೆ. ಬ್ಯಾಂಕ್​ನ ಪ್ರತೀ 1 ರೂನ ಈಕ್ವಿಟಿ ಷೇರಿಗೆ 19 ರೂ ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಲಾಗಿದೆ. ಅಂದರೆ ಶೇ. 1900ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಆದರೆ, ಬ್ಯಾಂಕ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಯ ಬಳಿಕ ಡಿವಿಡೆಂಡ್ ನೀಡಲಾಗುತ್ತದೆ.

ಬ್ಯಾಂಕ್​ನ ಸದಸ್ಯರ ನೊಂದಣಿಯಲ್ಲಿ ಹೆಸರು ಇರುವಂಥ ಶೇರುದಾರರಿಗೆ ಡಿವಿಡೆಂಡ್ ಸಿಗಲಿದೆ ಎಂಬ ಮಾಹಿತಿ ಇದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಷೇರು ಮೌಲ್ಯ ಸದ್ಯ ಪ್ರತೀ ಷೇರಿಗೆ 1,695 ರೂ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 16 April 23