ನವೆಂಬರ್ 1, 2021ರಿಂದ (ಸೋಮವಾರ) ಹಲವು ವಲಯಗಳಲ್ಲಿ ಬದಲಾವಣೆ ಆಗಲಿದೆ. ದೈನಂದಿನ ವ್ಯವಹಾರಗಳಲ್ಲಿ ಇವುಗಳ ಪರಿಣಾಮ ಇರಲಿದೆ. ಈ ಬೆಳವಣಿಗೆಯಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದ್ದು, ಮತ್ತೆ ಕೆಲವರಿಗೆ ಹಣ ಗಳಿಸುವ ಅವಕಾಶ ಆಗಲಿದೆ. ಇಡೀ ದೇಶದಲ್ಲಿ ದೀಪಾವಳಿ ಆಚರಿಸುವ ಕೆಲವೇ ದಿನಗಳ ಮುಂಚೆ ಬದಲಾವಣೆಗಳು ಲಾಗೂ ಆಗುತ್ತವೆ. ನಿಮಗೆ ಗೊತ್ತಿರಲಿ, ತಾಂತ್ರಿಕ ವಿಚಾರದಲ್ಲೂ ಬದಲಾವಣೆ ಆಗುತ್ತಿದೆ. ಅದು ಇನ್ಸ್ಟಂಟ್ ಮೆಸೇಜಿಂಗ್ ಸರ್ವೀಸ್ ವಾಟ್ಸಾಪ್ನಿಂದ ಪ್ರಮುಖ ಬದಲಾವಣೆ ಆಗಲಿದೆ. ಇದರಿಂದಾಗಿ ದೇಶದಾದ್ಯಂತ ಹಲವಾರು ಬಳಕೆದಾರರ ಮೇಲೆ ಪರಿಣಾಮ ಆಗಲಿದೆ. ಆ ಬದಲಾವಣೆಗಳ ಬಗ್ಗೆ ವಿವರಗಳು ಇಲ್ಲವೆ.
ಎಲ್ಪಿಜಿ ದರಗಳ ಏರಿಕೆ
ನವೆಂಬರ್ ಒಂದರಿಂದ ಅನ್ವಯ ಆಗುವಂತೆ ವಾಣಿಜ್ಯ ಸಿಲಿಂಡರ್ಗಳ ಬೆಲೆಯು ದೆಹಲಿಯಲ್ಲಿ ಅನ್ವಯ ಆಗುವಂತೆ ರೂ. 265 ಏರಿಕೆ ಆಗಿದೆ. ಮನೆ ಬಳಕೆಗಾಗಿ ಬಳಸುವ ಅಡುಗೆ ಅನಿಲ ಸಿಲಿಂಡರ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ಹೆಚ್ಚಳವು ಸರ್ಕಾರ ನೀಡುವ ಅನುಮತಿ ಮೇಲೆ ಅವಲಂಬಿತ ಆಗಿರುತ್ತದೆ ಎಂದು ಪಿಟಿಐ ವರದಿ ತಿಳಿಸಿದೆ. ಒಂದು ವೇಳೆ ಅವಕಾಶ ನೀಡಿದರೆ ಇದು ಐದನೇ ಏರಿಕೆ ಆಗುತ್ತದೆ. ಸದ್ಯಕ್ಕೆ ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 899.50 ಇದೆ.
ಪೆನ್ಷನ್ದಾರರಿಗೆ ನಿರಾಳ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನವೆಂಬರ್ 1ರಿಂದ ಹೊಸ ಸೇವೆ ಆರಂಭಿಸಲಿದೆ. ಅದರ ಅಡಿಯಲ್ಲಿ ಪೆನ್ಷನ್ದಾರರು ಬ್ಯಾಂಕ್ ಶಾಖೆಗೆ ತೆರಳಿ ತಮ್ಮ ಜೀವಿತ ಪ್ರಮಾಣಪತ್ರ ನೀಡಬೇಕು ಅಂತಿಲ್ಲ. ಪೆನ್ಷನ್ದಾರರು ವಿಡಿಯೋ ಕರೆ ಮೂಲಕವೇ ಸಲ್ಲಿಕೆ ಮಾಡಬಹುದು.
ಹೂಡಿಕೆದಾರರಿಗೆ ಶುಭ ಸುದ್ದಿ
ಪಾಲಿಸಿಬಜಾರ್ ಐಪಿಒ ನವೆಂಬರ್ 1ರಿಂದ ಶುರು ಆಗುತ್ತದೆ. ನವೆಂಬರ್ 8ಕ್ಕೆ ಪೇಟಿಎಂ ಐಪಿಒ ಆರಂಭವಾಗುತ್ತದೆ. ಪಾಲಿಸಿಬಜಾರ್ ಹೊರತುಪಡಿಸಿ ಎಸ್ಜೆಎಸ್ ಎಂಟರ್ಪ್ರೈಸ್, ರಾಸಾಯನಿಕ ತಯಾರಕ ಸಿಗಚಿ ಇಂಡಸ್ಟ್ರೀಸ್ ಐಪಿಒ ಬರಲಿದೆ. Nykaaದ ಐಪಿಒ ನವೆಂಬರ್ 1ಕ್ಕೆ ಕೊನೆಯಾಗುತ್ತದೆ.
ಹಬ್ಬದ ಋತುವಿಗೆ ವಿಶೇಷ ರೈಲುಗಳು
ದೀಪಾವಳಿ, ಛಾತ್ ಸಂದರ್ಭಕ್ಕೆ ವಿಶೇಷ ರೈಲುಗಳನ್ನು ನವೆಂಬರ್ ತಿಂಗಳಲ್ಲಿ ಭಾರತೀಯ ರೈಲ್ವೆಯಿಂದ ಓಡಿಸಲಾಗುತ್ತಿದೆ. ಈ ರೈಲುಗಳ ಸಂಚಾರ ನವೆಂಬರ್ 1ರಿಂದ ಶುರುವಾಗುತ್ತದೆ. ಇತರವು ಇಡೀ ತಿಂಗಳು ಬೇರೆ ಬೇರೆ ದಿನಗಳಲ್ಲಿ ಸಂಚರಿಸುತ್ತವೆ. ಇದರ ಹೊರತಾಗಿ ಅಕ್ಟೋಬರ್ 25ರಂದು ದಕ್ಷಿಣ ರೈಲ್ವೆಯಿಂದ ಘೋಷಣೆ ಮಾಡಿದಂತೆ, ನವೆಂಬರ್ 1ರಿಂದ ಸಂಚರಿಸುವುದಾಗಿ ತಿಳಿಸಿತ್ತು.
ವಾಟ್ಸಾಪ್ನಿಂದ ಕೆಲವು ಆಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ಸೇವೆ ಸಿಗಲ್ಲ
ವಾಟ್ಸಾಪ್ ನೀಡಿರುವ ಮಾಹಿತಿ ಪ್ರಕಾರ, ಆಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ನವೆಂಬರ್ 1ನೇ ತಾರೀಕಿನಿಂದ ಲಭ್ಯ ಇರುವುದಿಲ್ಲ. ಯಾವ ಬಳಕೆದಾರರು ಆಪರೇಟಿಂಗ್ ಸಿಸ್ಟಮ್ಸ್ ಅಪ್ಡೇಟ್ ಆಗಿರುವುದಿಲ್ಲವೋ ಅವುಗಳು ನವೆಂಬರ್ 1ರೊಳಗೆ ಆಗಬೇಕು.
ಇದನ್ನೂ ಓದಿ: Diwali Festival: ದೀಪಾವಳಿ ಹಬ್ಬಕ್ಕೆ ಜ್ಯುವೆಲ್ಲರಿಗಳಿಂದ ಆಕರ್ಷಕ ಆಫರ್ಗಳು