LPG Cylinder Price: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 265 ರೂ.ಏರಿಕೆ; ದೆಹಲಿಯಲ್ಲಿ 2 ಸಾವಿರದ ಗಡಿ ದಾಟಿದ ದರ
Commercial Cylinder Price: ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.2 ಕೆಜಿ ತೂಕದ ಮನೆ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ (ಸಬ್ಸಿಡಿ ರಹಿತ) 899.50 ರೂ. ಇದೆ.
LPG Gas Cylinder Price | ದೀಪಾವಳಿ ಸಂಭ್ರಮದ ಮೂಡ್ನಲ್ಲಿರುವ ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಜತೆ ಇದೀಗ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಹೆಚ್ಚಾಗಿದೆ. ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.5 ಕೆಜಿಯ ಮನೆ ಬಳಕೆ ಸಿಲಿಂಡರ್ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಬದಲಾಗಿ 19 ಕೆಜಿಯ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಬರೋಬ್ಬರಿ 265 ರೂಪಾಯಿ ಹೆಚ್ಚಾಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 265 ರೂ.ಹೆಚ್ಚಾದ ಬಳಿಕ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 2000 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 1733 ರೂಪಾಯಿ ಇತ್ತು. ಹಾಗೇ ಮುಂಬೈನಲ್ಲಿ 1,683 ರೂಪಾಯಿ ಇದ್ದ 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 1950ರೂಪಾಯಿಗೆ ಏರಿದೆ. ಕೋಲ್ಕತ್ತದಲ್ಲಿ 2073ರೂ.ಗೆ ಏರಿಕೆಯಾಗಿದ್ದು, ಚೆನ್ನೈನಲ್ಲಿ 2133 ರೂಪಾಯಿ ಆಗಿದೆ.
ಮನೆಬಳಕೆ ಸಿಲಿಂಡರ್ ದರದಲ್ಲಿ ಇಲ್ಲ ಬದಲಾವಣೆ ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.2 ಕೆಜಿ ತೂಕದ ಮನೆ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ (ಸಬ್ಸಿಡಿ ರಹಿತ) 899.50 ರೂ. ಇದೆ. ಕೋಲ್ಕತ್ತದಲ್ಲಿ 926 ರೂ.ಇದ್ದರೆ, ಚೆನ್ನೈನಲ್ಲಿ 915.50 ರೂಪಾಯಿ ಇದೆ. ಹಾಗೇ, ಕೊನೇ ಬಾರಿಕೆ ಮನೆ ಬಳಕೆ ಸಿಲಿಂಡರ್ ಬೆಲೆಯನ್ನು ಅಕ್ಟೋಬರ್ 6ರಂದು ಏರಿಸಲಾಗಿತ್ತು. ಹಾಗೇ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ಅಕ್ಟೋಬರ್ 1ರಂದು ಹೆಚ್ಚಿಸಲಾಗಿತ್ತು. ಇದೀಗ ಆದ ಹೆಚ್ಚಳದಿಂದ ಹಲವು ನಗರಗಳಲ್ಲಿ ಬೆಲೆ 2000 ರೂಪಾಯಿ ಗಡಿ ದಾಟಿದ್ದು ಹೊರೆಯೇ ಆಗಿದೆ.
ಇದನ್ನೂ ಓದಿ: Viral Video: ವ್ಯಕ್ತಿಯ ಬಾಯಿಯಿಂದ ಹೊರಬಿದ್ದ ದೈತ್ಯ ಟಾರಂಟುಲಾ ಜೇಡ; ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಾ!
ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು
Published On - 9:15 am, Mon, 1 November 21