1st November Rules Change 2021: ನವೆಂಬರ್ 1ರಿಂದ ಆಗಲಿರುವ 5 ಪ್ರಮುಖ ಬದಲಾವಣೆಗಳಿವು

ನವೆಂಬರ್ 1, 2021ರಿಂದ ಆಗುವಂಥ 5 ಪ್ರಮುಖ ಬದಲಾವಣೆಗಳು- ಅದು ದೈನಂದಿನ ಬದುಕಿನ ಮೇಲೆ ಬೀರುವ ಪ್ರಭಾವ ಬಗ್ಗೆ ವಿವರಗಳು ಇಲ್ಲಿವೆ.

1st November Rules Change 2021: ನವೆಂಬರ್ 1ರಿಂದ ಆಗಲಿರುವ 5 ಪ್ರಮುಖ ಬದಲಾವಣೆಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 01, 2021 | 1:04 PM

ನವೆಂಬರ್ 1, 2021ರಿಂದ (ಸೋಮವಾರ) ಹಲವು ವಲಯಗಳಲ್ಲಿ ಬದಲಾವಣೆ ಆಗಲಿದೆ. ದೈನಂದಿನ ವ್ಯವಹಾರಗಳಲ್ಲಿ ಇವುಗಳ ಪರಿಣಾಮ ಇರಲಿದೆ. ಈ ಬೆಳವಣಿಗೆಯಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದ್ದು, ಮತ್ತೆ ಕೆಲವರಿಗೆ ಹಣ ಗಳಿಸುವ ಅವಕಾಶ ಆಗಲಿದೆ. ಇಡೀ ದೇಶದಲ್ಲಿ ದೀಪಾವಳಿ ಆಚರಿಸುವ ಕೆಲವೇ ದಿನಗಳ ಮುಂಚೆ ಬದಲಾವಣೆಗಳು ಲಾಗೂ ಆಗುತ್ತವೆ. ನಿಮಗೆ ಗೊತ್ತಿರಲಿ, ತಾಂತ್ರಿಕ ವಿಚಾರದಲ್ಲೂ ಬದಲಾವಣೆ ಆಗುತ್ತಿದೆ. ಅದು ಇನ್​ಸ್ಟಂಟ್ ಮೆಸೇಜಿಂಗ್ ಸರ್ವೀಸ್ ವಾಟ್ಸಾಪ್​ನಿಂದ ಪ್ರಮುಖ ಬದಲಾವಣೆ ಆಗಲಿದೆ. ಇದರಿಂದಾಗಿ ದೇಶದಾದ್ಯಂತ ಹಲವಾರು ಬಳಕೆದಾರರ ಮೇಲೆ ಪರಿಣಾಮ ಆಗಲಿದೆ. ಆ ಬದಲಾವಣೆಗಳ ಬಗ್ಗೆ ವಿವರಗಳು ಇಲ್ಲವೆ.

ಎಲ್​ಪಿಜಿ ದರಗಳ ಏರಿಕೆ ನವೆಂಬರ್ ಒಂದರಿಂದ ಅನ್ವಯ ಆಗುವಂತೆ ವಾಣಿಜ್ಯ ಸಿಲಿಂಡರ್​ಗಳ ಬೆಲೆಯು ದೆಹಲಿಯಲ್ಲಿ ಅನ್ವಯ ಆಗುವಂತೆ ರೂ. 265 ಏರಿಕೆ ಆಗಿದೆ. ಮನೆ ಬಳಕೆಗಾಗಿ ಬಳಸುವ ಅಡುಗೆ ಅನಿಲ ಸಿಲಿಂಡರ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ಹೆಚ್ಚಳವು ಸರ್ಕಾರ ನೀಡುವ ಅನುಮತಿ ಮೇಲೆ ಅವಲಂಬಿತ ಆಗಿರುತ್ತದೆ ಎಂದು ಪಿಟಿಐ ವರದಿ ತಿಳಿಸಿದೆ. ಒಂದು ವೇಳೆ ಅವಕಾಶ ನೀಡಿದರೆ ಇದು ಐದನೇ ಏರಿಕೆ ಆಗುತ್ತದೆ. ಸದ್ಯಕ್ಕೆ ದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ರೂ. 899.50 ಇದೆ.

ಪೆನ್ಷನ್​ದಾರರಿಗೆ ನಿರಾಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನವೆಂಬರ್ 1ರಿಂದ ಹೊಸ ಸೇವೆ ಆರಂಭಿಸಲಿದೆ. ಅದರ ಅಡಿಯಲ್ಲಿ ಪೆನ್ಷನ್​ದಾರರು ಬ್ಯಾಂಕ್​ ಶಾಖೆಗೆ ತೆರಳಿ ತಮ್ಮ ಜೀವಿತ ಪ್ರಮಾಣಪತ್ರ ನೀಡಬೇಕು ಅಂತಿಲ್ಲ. ಪೆನ್ಷನ್​ದಾರರು ವಿಡಿಯೋ ಕರೆ ಮೂಲಕವೇ ಸಲ್ಲಿಕೆ ಮಾಡಬಹುದು.

ಹೂಡಿಕೆದಾರರಿಗೆ ಶುಭ ಸುದ್ದಿ ಪಾಲಿಸಿಬಜಾರ್ ಐಪಿಒ ನವೆಂಬರ್ 1ರಿಂದ ಶುರು ಆಗುತ್ತದೆ. ನವೆಂಬರ್ 8ಕ್ಕೆ ಪೇಟಿಎಂ ಐಪಿಒ ಆರಂಭವಾಗುತ್ತದೆ. ಪಾಲಿಸಿಬಜಾರ್ ಹೊರತುಪಡಿಸಿ ಎಸ್​ಜೆಎಸ್​ ಎಂಟರ್​ಪ್ರೈಸ್, ರಾಸಾಯನಿಕ ತಯಾರಕ ಸಿಗಚಿ ಇಂಡಸ್ಟ್ರೀಸ್ ಐಪಿಒ ಬರಲಿದೆ. Nykaaದ ಐಪಿಒ ನವೆಂಬರ್ 1ಕ್ಕೆ ಕೊನೆಯಾಗುತ್ತದೆ.

ಹಬ್ಬದ ಋತುವಿಗೆ ವಿಶೇಷ ರೈಲುಗಳು ದೀಪಾವಳಿ, ಛಾತ್ ಸಂದರ್ಭಕ್ಕೆ ವಿಶೇಷ ರೈಲುಗಳನ್ನು ನವೆಂಬರ್ ತಿಂಗಳಲ್ಲಿ ಭಾರತೀಯ ರೈಲ್ವೆಯಿಂದ ಓಡಿಸಲಾಗುತ್ತಿದೆ. ಈ ರೈಲುಗಳ ಸಂಚಾರ ನವೆಂಬರ್ 1ರಿಂದ ಶುರುವಾಗುತ್ತದೆ. ಇತರವು ಇಡೀ ತಿಂಗಳು ಬೇರೆ ಬೇರೆ ದಿನಗಳಲ್ಲಿ ಸಂಚರಿಸುತ್ತವೆ. ಇದರ ಹೊರತಾಗಿ ಅಕ್ಟೋಬರ್ 25ರಂದು ದಕ್ಷಿಣ ರೈಲ್ವೆಯಿಂದ ಘೋಷಣೆ ಮಾಡಿದಂತೆ, ನವೆಂಬರ್ 1ರಿಂದ ಸಂಚರಿಸುವುದಾಗಿ ತಿಳಿಸಿತ್ತು.

ವಾಟ್ಸಾಪ್​ನಿಂದ ಕೆಲವು ಆಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ಸೇವೆ ಸಿಗಲ್ಲ ವಾಟ್ಸಾಪ್ ನೀಡಿರುವ ಮಾಹಿತಿ ಪ್ರಕಾರ, ಆಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ನವೆಂಬರ್ 1ನೇ ತಾರೀಕಿನಿಂದ ಲಭ್ಯ ಇರುವುದಿಲ್ಲ. ಯಾವ ಬಳಕೆದಾರರು ಆಪರೇಟಿಂಗ್ ಸಿಸ್ಟಮ್ಸ್ ಅಪ್​ಡೇಟ್ ಆಗಿರುವುದಿಲ್ಲವೋ ಅವುಗಳು ನವೆಂಬರ್ 1ರೊಳಗೆ ಆಗಬೇಕು.

ಇದನ್ನೂ ಓದಿ: Diwali Festival: ದೀಪಾವಳಿ ಹಬ್ಬಕ್ಕೆ ಜ್ಯುವೆಲ್ಲರಿಗಳಿಂದ ಆಕರ್ಷಕ ಆಫರ್​ಗಳು

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ