1. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು: ಡಾ.ರಾಜಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ ಈ ಹಾಡಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿದವರು ಹಂಸಲೇಖ. ಕನ್ನಡ ನಾಡಿನ ಪ್ರೀತಿಯನ್ನು ಸಾರುವ ಈ ಗೀತೆಯನ್ನು ಹಾಡಿದವರು ಡಾ.ರಾಜ್.
2. ಜೇನಿನ ಹೊಳೆಯೋ: ‘ಚಲಿಸುವ ಮೋಡಗಳು’ ಚಿತ್ರದ ಈ ಹಾಡಿಗೆ ಸಂಗೀತ ನೀಡಿದವರು ರಾಜನ್ ನಾಗೇಂದ್ರ. ಸಾಹಿತ್ಯ ರಚಿಸಿದವರು ಚಿ.ಉದಯಶಂಕರ್. ಮೂಲ ಗಾಯಕರು ಡಾ.ರಾಜಕುಮಾರ್ ಹಾಗೂ ಎಸ್.ಜಾನಕಿ.
3. ಕಲ್ಲಾದರೆ ನಾನು: ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’ ಚಿತ್ರದ ಈ ಹಾಡು ಕನ್ನಡದ ಸಾರ್ವಕಾಲಿಕ ಗೀತೆಗಳಲ್ಲೊಂದು. ಎಸ್.ನಾರಾಯಣ್ ಬರೆದ ಸಾಹಿತ್ಯಕ್ಕೆ ದೇವ ಸಂಗೀತ ನೀಡಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ದನಿಯಾಗಿದ್ದಾರೆ.
4. ಕರುನಾಡ ತಾಯಿ: ಹಂಸಲೇಖ ಬರೆದ ಸಾಹಿತ್ಯಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ದನಿಯಾಗಿರುವ ಈ ಹಾಡು ರವಿಚಂದ್ರನ್ ನಟನೆಯ ‘ನಾನು ನನ್ನ ಹೆಂಡ್ತಿ’ ಚಿತ್ರದ್ದು. ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನೀಡಿದ್ದಾರೆ.
5. ಕನ್ನಡ ಮಣ್ಣನು ಮರೀಬೇಡ ಓ ಅಭಿಮಾನಿ: ಅಂಬರೀಶ್ ನಟನೆಯ ‘ಸೋಲಿಲ್ಲದ ಸರದಾರ’ ಚಿತ್ರದ ಈ ಹಾಡಿಗೆ ಸಂಗೀತ ಹಾಗೂ ಸಾಹಿಯತ್ಯ ನೀಡಿದವರು ಹಂಸಲೇಖ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಈ ಹಾಡು ಕನ್ನಡ ನಾಡಿನ ಪರಂಪರೆಯನ್ನು ನೆನಪಿಸುತ್ತಾ, ಅದನ್ನು ಗೌರವಿಸುವುದರ ಕುರಿತಾಗಿದೆ.
6. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು: ‘ವಿಜಯನಗರ ವೀರಪುತ್ರ’ ಚಿತ್ರದ ಈ ಹಾಡಿಗೆ ಸಾಹಿತ್ಯ ನೀಡಿರುವವರು ಆರ್.ಎನ್ ಜಯಗೋಪಾಲ್ ಹಾಗೂ ಹಾಡಿದವರು ಪಿ.ಬಿ. ಶ್ರೀನಿವಾಸ್.
7. ಅವ್ವ ಕಣೋ ಕನ್ನಡ: ಪ್ರೇಮ್ ನಟನೆಯ ‘ಪಲ್ಲಕ್ಕಿ’ ಚಿತ್ರದ ಈ ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.
8. ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ: ಅಂಬರೀಶ್ ನಟನೆಯ ‘ತಿರುಗು ಬಾಣ’ ಚಿತ್ರದ ಈ ಹಾಡಿಗೆ ದನಿ ನೀಡಿದವರು ಎಸ್.ಪಿ.ಬಾಲಸುಬ್ರಮಣ್ಯಂ. ಆರ್.ಎನ್ ಜಯಗೋಪಾಲ್ ರಚಿಸಿದ ಸಾಹಿತ್ಯಕ್ಕೆ ಸಂಗೀತ ನೀಡಿದವರು ಸತ್ಯಂರವರು.
9. ನನ್ನ ಮಣ್ಣಿದು: ಎಸ್.ನಾರಾಯಣ್ ಸಾಹಿತ್ಯ ರಚಿಸಿರುವ ‘ವೀರ ಪರಂಪರೆ’ ಚಿತ್ರದ ಈ ಹಾಡು ಕನ್ನಡಿಗರ ನೆಚ್ಚಿನ ಗೀತೆಗಳಲ್ಲೊಂದು. ಶಂಕರ್ ಮಹದೇವನ್ ಈ ಹಾಡಿಗೆ ದನಿಯಾಗಿದ್ದಾರೆ. ಸುದೀಪ್ ಹಾಗೂ ಅಂಬರೀಷ್ ಜೋಡಿ ಈ ಚಿತ್ರದಲ್ಲಿ ಮೋಡಿ ಮಾಡಿತ್ತು.
10. ಜೀವ ಕನ್ನಡ: ‘ವೀರ ಕನ್ನಡಿಗ’ ಚಿತ್ರದ ಈ ಹಾಡಿಗೆ ಸಾಹಿತ್ಯ ರಚಿಸಿದವರು ಹಂಸಲೇಖ. ಚಕ್ರಿಯವರು ಸಂಗೀತ ನೀಡಿ ಹಾಡಿದ್ದಾರೆ. ಅವರಿಗೆ ಕೌಸಲ್ಯ ಜೊತೆಯಾಗಿದ್ದಾರೆ. ಪುನೀತ್ ರಾಜಕುಮಾರ್ ಹಾಗೂ ಅನಿತಾ ನಟಿಸಿದ್ದಾರೆ.
ಈ ಗೀತೆಗಳಲ್ಲದೇ ಇನ್ನೂ ಅನೇಕ ಗೀತೆಗಳು ಕನ್ನಡದ ಪರಂಪರೆಯನ್ನು, ಈ ಮಣ್ಣಿನ ಶ್ರೇಷ್ಠತೆಯನ್ನು ಬಹಳ ಸುಂದರವಾಗಿ ಬಿಂಬಿಸುತ್ತವೆ. ಇತ್ತೀಚಿನ ಚಿತ್ರಗಳಲ್ಲೂ ಹೊಸ ಬಗೆಯಲ್ಲಿ ಕನ್ನಡದ ಕಂಪನ್ನು ಸಾರುವ ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳನ್ನು ಕನ್ನಡಿಗರು ತುಂಬು ಹೃದಯದಿಂದ ಸ್ವಾಗತಿಸುತ್ತಲೇ ಇದ್ದಾರೆ.
ಇದನ್ನೂ ಓದಿ:
ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ‘ಕನ್ನಡತಿ’, ಇಲ್ಲಿದೆ ರಂಜನಿ ರಾಘವನ್ ಅವರ ಮನದಾಳದ ಮಾತು
Kannada Rajyotsava: 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ