ಪುನೀತ್ ಬಂದಾಗ ಮಂತ್ರಾಲಯದ ರಾಯರ ವೀಣೆ ಬಿದ್ದಿದ್ಯಾಕೆ? ಶ್ರೀಗಳು ಹೇಳಿದ್ದಿಷ್ಟು

ಪುನೀತ್ ಬಂದಾಗ ಮಂತ್ರಾಲಯದ ರಾಯರ ವೀಣೆ ಬಿದ್ದಿದ್ಯಾಕೆ? ಶ್ರೀಗಳು ಹೇಳಿದ್ದಿಷ್ಟು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 31, 2021 | 10:11 PM

ಪುನೀತ್ ರಾಜ್​​ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಹೀಗಾಗಿ ಅನೇಕ ಬಾರಿ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಒಮ್ಮೆ ಪುನೀತ್ ಆಗಮಿಸಿದಾಗ ತೊಟ್ಟಿಲು, ವೀಣೆ ಅಲುಗಾಡಿತ್ತು.

ಮಂತ್ರಾಲಯಕ್ಕೆ ಪುನೀತ್ ರಾಜ್​ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಾವಿಗೂ ಇದಕ್ಕೂ ಸಂಬಂಧ ಇರುವಂತೆ ಊಹಾಪೋಹ ಹಬ್ಬಿಸಿದ್ದಾರೆ. ಈ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಮಾತನಾಡಿದ್ದು, ಅವರ ಸಾವಿಗೂ ಇದಕ್ಕೂ ಸಂಬಂಧವಿಲ್ಲ. ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಹೇಳಿದ್ದಾರೆ.

ಪುನೀತ್ ರಾಜ್​​ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಹೀಗಾಗಿ ಅನೇಕ ಬಾರಿ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಒಮ್ಮೆ ಪುನೀತ್ ಆಗಮಿಸಿದಾಗ ತೊಟ್ಟಿಲು, ವೀಣೆ ಅಲುಗಾಡಿತ್ತು. ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲೋಹಿತಾಶ್ವ ಎಂದರೆ ಅಲ್ಪಾಯುಶಿ; ಪುನೀತ್​ ಹೆಸರು ಬದಲಾವಣೆಗೆ ಕಾರಣವಾಗಿತ್ತು ಈ ವಿಚಾರ