ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಈಚೆಗೆ ಘೋಷಣೆ ಮಾಡಿರುವಂತೆ, ಏಪ್ರಿಲ್ 1ರಿಂದ ಸ್ಟ್ಯಾಂಡರ್ಡ್ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಆರಂಭಿಸಲಾಗಿದೆ. ಈ ಪ್ರಾಡಕ್ಟ್ನ ಹೆಸರು ಸರಳ್ ಸುರಕ್ಷಾ ಬಿಮಾ. ಯಾವ ಕಂಪೆನಿಯು ಈ ಪಾಲಿಸಿಯನ್ನು ಒದಗಿಸುತ್ತದೋ ಅದರ ಹೆಸರು ಇದರ ಜತೆಯಾಗುತ್ತದೆ. ಐಆರ್ಡಿಎಐ ತಿಳಿಸಿರುವಂತೆ, ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ಬೇಕಾದಷ್ಟು ರೀತಿಯಲ್ಲಿ ಇನ್ಷೂರೆನ್ಸ್ ಪ್ರಾಡಕ್ಟ್ಗಳಿವೆ. ಆ ಪೈಕಿ ತಮಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳುವುದು ಗ್ರಾಹಕರಿಗೆ ಸವಾಲಿನ ಸಂಗತಿಯಾಗಿರುತ್ತದೆ. ಆದ್ದರಿಂದ ಈ ಸ್ಟ್ಯಾಂಡರ್ಡ್ ಪಾಲಿಸಿಯ ಮೂಲಕ ಗೊಂದಲವನ್ನು ಕಡಿಮೆ ಮಾಡುತ್ತದೆ ಹಾಗೂ ನಾಗರಿಕರಿಗೆ ಇನ್ಷೂರೆನ್ಸ್ ಕವರ್ ಆಗುತ್ತದೆ.
ಗ್ರಾಹಕರಿಗೆ ಗೊತ್ತಿರಬೇಕಾದ ಪಾಲಿಸಿ ಕುರಿತಾದ ಕೆಲವು ಮುಖ್ಯ ವೈಶಿಷ್ಟ್ಯಗಳು
ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 70 ವರ್ಷ. ಅವಲಂಬಿತ ಮಕ್ಕಳು 3 ತಿಂಗಳಿಂದ 25 ವರ್ಷದ ತನಕ ಕವರ್ ಆಗುತ್ತದೆ. ಈ ಪಾಲಿಸಿಯು ಕುಟುಂಬದವರಿಗೆ ವಯಕ್ತಿಕ ಆಧಾರದಲ್ಲಿ ಲಭ್ಯ ಇರುತ್ತದೆ. ಇದರರ್ಥ ಏನೆಂದರೆ, ಆಯ್ಕೆ ಮಾಡಿಕೊಂಡ ಸಮ್ ಅಶ್ಯೂರ್ಡ್ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತ್ಯೇಕವಾಗಿ ಅನ್ವಯ ಆಗುತ್ತದೆ.
ಸಮ್ ಅಶ್ಯೂರ್ಡ್: ಕನಿಷ್ಠ ಸಮ್ ಅಶ್ಯೂರ್ಡ್ 2.5 ರೂಪಾಯಿ ಹಾಗೂ ಗರಿಷ್ಠ 1 ಕೋಟಿ ರೂಪಾಯಿ. ಈ ಮಧ್ಯದ ಮೊತ್ತದಲ್ಲಿ ಯಾವುದೇ ಸಮ್ ಅಶ್ಯೂರ್ಡ್ ಅನ್ನು 50,000 ರೂಪಾಯಿ ಗುಣಕದಲ್ಲಿ ಹೆಚ್ಚಿಸಿಕೊಳ್ಳುತ್ತಾ ಆರಿಸಿಕೊಳ್ಳಬಹುದು.
ಬೇಸ್ ಕವರ್ಸ್: ಈ ಪಾಲಿಸಿಗೆ ಮೂರು ಕಡ್ಡಾಯ ಬೇಸ್ ಕವರ್ಗಳಿವೆ. ಸಾವು ಸಂಭವಿಸಿದರೆ, ಶಾಶ್ವತವಾಗಿ ಸಂಪೂರ್ಣ ವೈಕಲ್ಯ ಮತ್ತು ಶಾಶ್ವತವಾಗಿ ಭಾಗಶಃ ವೈಕಲ್ಯ ಈ ಮೂರು ಕವರ್ಗಳು. ಪಾಲಿಸಿಯಲ್ಲಿ ಮೂರು ಐಚ್ಛಿಕ (ಆಪ್ಷನಲ್) ಕವರ್ಗಳಿದ್ದು, ತಮ್ಮ ಆಯ್ಕೆಗೆ ತಕ್ಕಂತೆ ಆರಿಸಿಕೊಳ್ಳಬಹುದು. ಅದು ತಾತ್ಕಾಲಿಕ ಸಂಪೂರ್ಣ ವೈಕಲ್ಯ, ಅಪಘಾತದಿಂದ ಆಸ್ಪತ್ರೆ ದಾಖಲಾತಿ ವೆಚ್ಚ ಮತ್ತು ಶಿಕ್ಷಣ ಅನುದಾನ.
ಅನುಕೂಲಗಳು: ಪಾಲಿಸಿ ಅವಧಿಯಲ್ಲಿ ಒಂದು ವೇಳೆ ಅಪಘಾತ ಸಂಭವಿಸಿ, ಆಗ ಉಳಿದುಕೊಂಡು, ಆ ನಂತರದ ಒಂದು ವರ್ಷದಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟಲ್ಲಿ ಶೇ 100ರಷ್ಟು ಸಮ್ ಅಶ್ಯೂರ್ಡ್ ಪಾವತಿಸಲಾಗುತ್ತದೆ.
ಶಾಶ್ವತವಾಗಿ ಭಾಗಶಃ ವೈಕಲ್ಯ ಸಂಭವಿಸಿದಲ್ಲಿ ಶೇ 1ರಿಂದ 50ರಷ್ಟು ಸಮ್ ಅಶ್ಯೂರ್ಡ್ ಅನ್ನು ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಪಾವತಿಸಲಾಗುತ್ತದೆ. ಒಂದು ಕೈ, ಒಂದು ಕಾಲು, ಒಂದು ಕಣ್ಣಿನ ದೃಷ್ಟಿ ಅಥವಾ ಎರಡೂ ಕಿವಿ ಕಳೆದುಕೊಂಡಲ್ಲಿ ಸಮ್ ಅಶ್ಯೂರ್ಡ್ನ ಶೇ 50ರಷ್ಟು ಪಾವತಿಸಲಾಗುತ್ತದೆ. ಒಂದು ಕೈನ ನಾಲ್ಕು ಬೆರಳು ಮತ್ತು ಹೆಬ್ಬೆರಳು ಕಳೆದುಕೊಂಡಲ್ಲಿ ಶೇ 40 ಹಾಗೂ ನಾಲ್ಕು ಬೆರಳು ಕಳೆದುಕೊಂಡಲ್ಲಿ ಶೇ 35ರಷ್ಟು ಸಮ್ ಅಶ್ಯೂರ್ಡ್ ಅನ್ನು ಪಾವತಿಸಲಾಗುತ್ತದೆ.
ಐಚ್ಛಿಕ ಕವರ್ಗಳ ಆಯ್ಕೆ ಪ್ರಕರಣಗಳು: ಶಿಕ್ಷಣ ಅನುದಾನ, ಒಂದು ವೇಳೆ ಇನ್ಷೂರ್ಡ್ ಆದ ವ್ಯಕ್ತಿಯ ಸಾವು ಸಂಭವಿಸಿದಲ್ಲಿ ಅಥವಾ ಅಪಘಾತದಿಂದ ಶಾಶ್ವತವಾಗಿ ಸಂಪೂರ್ಣ ವೈಕಲ್ಯ ಆದಲ್ಲಿ, ಒಂದು ಸಲದ ಶಿಕ್ಷಣದ ಅನುದಾನ ಬೇಸ್ ಸಮ್ ಅಶ್ಯೂರ್ಡ್ನ ಶೇ 10ರಷ್ಟು ತಲಾ ಒಂದು ಮಗುವಿಗೆ, ಅಂದರೆ ಎಲ್ಲ ಅವಲಂಬಿತ ಮಕ್ಕಳಿಗೆ ಶೈಕ್ಷಣಿಕ ಕೋರ್ಸ್ಗಾಗಿ ಪೂರ್ಣಾವಧಿ ಶಿಕ್ಷಣ ಸಂಸ್ಥೆಗಳಿಗೆ ಅಥವಾ 25 ವರ್ಷ ಪೂರ್ಣಗೊಳ್ಳದ ಎಲ್ಲರಿಗೂ ದೊರೆಯುತ್ತದೆ.
ಪ್ರೀಮಿಯಂ: ಪ್ರೀಮಿಯಂ ಅನ್ನು ವರ್ಷಕ್ಕೊಮ್ಮೆ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ತಿಂಗಳಿಗೊಮ್ಮೆ ಎಂಬಂತೆ ಪಾವತಿಸಬಹುದು. ವರ್ಷಕ್ಕೊಮ್ಮೆ ಪಾವತಿ ಮಾಡುವುದು ಅಂತಾದಲ್ಲಿ ನಿಶ್ಚಿತವಾದ 30 ದಿನಗಳ ಗ್ರೇಸ್ ಪೀರಿಯೆಡ್ ಹಾಗೂ ಇತರ ಎಲ್ಲ ಪಾವತಿ ವಿಧಾನಕ್ಕೆ ನಿರ್ದಿಷ್ಟ ಗ್ರೇಸ್ ಅವಧಿ 15 ದಿನ ಸಿಗುತ್ತದೆ.
ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್
(Here Is The Must Know Details About Saral Suraksha Bima Policy)