ನೀವು ಇಷ್ಟಪಡುತ್ತೀರೋ ಅಥವಾ ದ್ವೇಷ ಮಾಡುತ್ತೀರೋ ಗೊತ್ತಿಲ್ಲ! ಆದರೆ ಆಪಲ್ ಕಂಪೆನಿಯ ಬ್ರ್ಯಾಂಡ್ಗಳೆಂದರೆ ಗ್ರಾಹಕರ ಪಾಲಿಗೆ ಒಮ್ಮೆಯಾದರೂ ಖರೀದಿಸಬೇಕು ಅನ್ನಿಸುತ್ತೆ. ಹಾಗಿದ್ದರೆ ಆಪಲ್ ಕಂಪೆನಿಯ ಹೊಸ ಐಫೋನ್ 13 ಖರೀದಿ ಮಾಡುವುದು ಎಷ್ಟು ಮಂದಿಗೆ ಸಾಧ್ಯ ಅಥವಾ ಅದಕ್ಕಾಗಿ ಎಷ್ಟು ಸಮಯ ದುಡಿಯಬೇಕಾಗುತ್ತದೆ ಅನ್ನೋದರ ಬಗ್ಗೆ ಬ್ರಿಟಿಷ್ ಬೆಲೆ ಹೋಲಿಕೆಯ ಸೈಟ್ ಆದ Moneysupermarket.com ಒಂದೊಳ್ಳೆ ಲೆಕ್ಕಾಚಾರವನ್ನು ಮುಂದಿಟ್ಟಿದೆ. ವಿವಿಧ ದೇಶಗಳಲ್ಲಿ ಆಪಲ್ ಫೋನ್ 13ರ ಬೆಲೆ ಎಷ್ಟಿದೆ ಹಾಗೂ ಆ ದೇಶಗಳಲ್ಲಿನ ವಾರ್ಷಿಕ ವೇತನದ ಮೀಡಿಯನ್ ಬಳಸಿಕೊಂಡು, ಒಂದು ಐಫೋನ್ 13ರ ಖರೀದಿಗೆ ಯಾವ ದೇಶದವರು ಎಷ್ಟು ಗಂಟೆ ದುಡಿಯಬೇಕು ಎಂಬುದನ್ನು ಲೆಕ್ಕ ಹಾಕಲಾಗಿದೆ. ಈ ಸೈಟ್ನಿಂದ ಲೆಕ್ಕ ಹಾಕಿರುವುದು 8 ಗಂಟೆಯನ್ನು ಒಂದು ದಿನ ಎಂಬ ಆಧಾರದಲ್ಲಿ.
– ಭಾರತದಲ್ಲಿ ಐಫೋನ್ 13 ಖರೀದಿ ಮಾಡಬೇಕು ಅಂದರೆ 3 ತಿಂಗಳು ದುಡಿಮೆ ಮಾಡಬೇಕು.
– ಮೇಲಿನ ಉದಾಹರಣೆಗೆ ತದ್ವಿರುದ್ಧವಾಗಿ ಸ್ವಿಟ್ಜರ್ಲೆಂಡ್ನಲ್ಲಿ ಕೇವಲ 4 ದಿನ ಅಥವಾ ಒಂದು ವಾರಕ್ಕಿಂತ ಕಡಿಮೆ ದುಡಿದರೂ ಸಾಕು
– ಅಮೆರಿಕದಲ್ಲಿ 6 ದಿನದ ವೇತನದಲ್ಲಿ ಐಫೋನ್ 13 ಬರುತ್ತದೆ. ಒಂದು ವೇಳೆ ಜರ್ಮನಿಯಲ್ಲಿ ಇದ್ದಲ್ಲಿ ಎರಡು ವಾರಗಳ ಕಾಲ ದುಡಿಮೆ ಮಾಡಬೇಕಾಗುತ್ತದೆ.
– ಭಾರತಕ್ಕೆ ಹೋಲಿಕೆ ಮಾಡಿದಲ್ಲಿ ಐಫೋನ್ 13ರ ಖರೀದಿಗೆ ಹೆಚ್ಚು ಕಾಲ ದುಡಿಯಬೇಕಾಗುವುದು ಫಿಲಿಪ್ಪೈನ್ಸ್ನಲ್ಲಿ. ಅಲ್ಲಿ 3 ತಿಂಗಳಿಗೂ ಹೆಚ್ಚು ಸಮಯ ದುಡಿದರಷ್ಟೇ ಐಫೋನ್ ಖರೀದಿ ಮಾಡುವುದಕ್ಕೆ ಸಾಧ್ಯ.
ಈ ವೆಬ್ಸೈಟ್ನಿಂದ ಸಂಬಳ ಮತ್ತು ಗ್ಯಾಜೆಟ್ನ ವೆಚ್ಚವನ್ನು ಲೆಕ್ಕ ಹಾಕಲಾಗಿದೆ. ಐಫೋನ್ 13ರ ಬೆಲೆ ಅತಿ ಹೆಚ್ಚು ಅಂದರೆ, ಬ್ರೆಜಿಲ್ನಲ್ಲಿ. 1,449 ಅಮೆರಿಕನ್ ಡಾಲರ್ ಇದೆ. ವಿಶ್ವದಲ್ಲೇ ದುಬಾರಿ ಇದು. ಅಮೆರಿಕದಲ್ಲಿ ಇರುವವರಿಗಿಂತ 572 ಯುಎಸ್ಡಿ ಅಥವಾ ಶೇ 65.2ರಷ್ಟು ಪ್ರೀಮಿಯಂ ಅನ್ನು ಬ್ರೆಜಿಲಿಯನ್ನರು ಪಾವತಿಸುತ್ತಾರೆ. ಹಾಂಕಾಂಗ್ನಲ್ಲಿ ಆಪಲ್ ಐಫೋನ್ 13ರ ಬೆಲೆ ಅತ್ಯಂತ ಕಡಿಮೆ. ಅಂದರೆ 128GBಯದು 874 ಅಮೆರಿಕನ್ ಡಾಲರ್ ಮಾತ್ರ. ಅಮೆರಿಕದಲ್ಲಿ ನೋಡುವುದಾದರೆ, ಕೆಲವರು ಸ್ಥಳೀಯವಾಗಿ ಕಡಿಮೆ ತೆರಿಗೆಯ ಲಾಭ ಪಡೆದುಕೊಂಡು ಅಗ್ಗದ ಬೆಲೆಗೆ (829 ಯುಎಸ್ಡಿ) ಪಡೆಯುತ್ತಾರೆ. ಆದರೆ ಇಡೀ ದೇಶ ಅಂತ ನೋಡಿದಾಗ ಸ್ವಲ್ಪ ದುಬಾರಿ ಆಗಲಿದ್ದು, 877 ಯುಎಸ್ಡಿ ಆಗುತ್ತದೆ.
ಆಪಲ್ ಐಫೋನ್ 13 ಖರೀದಿಸಲು ಯಾವ ದೇಶದಲ್ಲಿ ಎಷ್ಟು ಗಂಟೆ ದುಡಿಯಬೇಕು? ಇಲ್ಲಿದೆ ಮಾಹಿತಿ
ಫಿಲಿಪ್ಪೈನ್ಸ್- 775.3, ಭಾರತ- 724.2, ಬ್ರೆಜಿಲ್- 690.5, ಟರ್ಕಿ- 639.1, ರಷ್ಯಾ- 428.5, ಮೆಕ್ಸಿಕೋ- 417.8, ಥಾಯ್ಲೆಂಡ್-348.4, ಹಂಗೇರಿ- 265.0, ಪೋಲೆಂಡ್- 254.7, ಮಲೇಷಿಯಾ- 249.8, ಚೀನಾ- 227.1, ಪೋರ್ಚುಗಲ್- 195.1, ತೈವಾನ್- 156.5, ಜೆಕ್ ರಿಪಬ್ಲಿಕ್- 138.9, ಸ್ಪೇನ್- 133.3, ಇಟಲಿ- 124.3, ಫ್ರಾನ್ಸ್- 90.5, ಯುನೈಟೆಡ್ ಕಿಂಗ್ಡಮ್- 89.3, ಬೆಲ್ಜಿಯಂ- 86.0.
ದಕ್ಷಿಣ ಕೊರಿಯಾ- 85.6, ಆಸ್ಟ್ರಿಯಾ- 81.5, ನ್ಯೂಜಿಲ್ಯಾಂಡ್- 78.5, ಫಿನ್ಲ್ಯಾಂಡ್- 78.5, ಜರ್ಮನಿ- 77.3, ಸ್ವೀಡನ್- 77.0, ಕೆನಡಾ- 75.8, ಯುಎಇ- 74, ನೆದರ್ಲೆಂಡ್ಸ್- 73.1, ಜಪಾನ್- 72.2, ಐರ್ಲೆಂಡ್- 71.5, ಡೆನ್ಮಾರ್ಕ್- 62.0, ಹಾಂಕಾಂಗ್- 61.9, ಆಸ್ಟ್ರೇಲಿಯಾ- 59.9, ನಾರ್ವೆ- 59.6, ಸಿಂಗಾಪೂರ್- 54.8, ಅಮೆರಿಕ- 49.5, ಲಕ್ಸೆಂಬರ್ಗ್- 40.0, ಸ್ವಿಟ್ಜರ್ಲೆಂಡ್- 34.3.
ಇದನ್ನೂ ಓದಿ: Apple iPhone: ಆಪಲ್ ಐಫೋನ್ 13ರ ಸರಣಿಯ ನಾಲ್ಕು ಫೋನ್ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ