ದೇಶದ ಅತಿ ದೊಡ್ದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಶುಕ್ರವಾರ ಘೋಷಣೆ ಮಾಡಿದಂತೆ, ರೈತ ಗ್ರಾಹಕರಿಗೆ ಎಸ್ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಇದ್ದು, ಅಂಥವರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡದೆಯೂ ಪರಿಶೀಲನೆ ಮಾಡಬಹುದು. ಬ್ಯಾಂಕ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿರುವಂತೆ, “ನೀವು ಇರುವ ಸ್ಥಳದ ಆರಾಮಕ್ಕೆ ತಕ್ಕಂತೆ ಕೆಸಿಸಿ ಪರಿಶೀಲನೆ. ಎಸ್ಬಿಐನ ರೈತ ಗ್ರಾಹಕರು ಶಾಖೆಗೆ ಭೇಟಿ ನೀಡದೆಯೂ ಈಗ ಕೆಸಿಸಿ ಪರಿಶೀಲನೆಗೆ ಅಪ್ಲೈ ಮಾಡಬಹುದು.” ಇನ್ನೂ ಮುಂದುವರಿದು ಬ್ಯಾಂಕ್ ಹೇಳಿದ್ದು, “ಎಸ್ಬಿಐ ಬಳಿ ಇರುವ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಯಾವುದೇ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲದೆ ಆನ್ಲೈನ್ YONO ಮೂಲಕ ಪರಿಶೀಲಿಸಬಹುದು,” ಎನ್ನಲಾಗಿದೆ.
YONO ಪರಿಶೀಲನೆಯ ಅನುಕೂಲಗಳೇನು?
ಎಸ್ಬಿಐ ವೆಬ್ಸೈಟ್ ಪ್ರಕಾರವಾಗಿ ಕ್ರಮವಗಳ ಪ್ರಮುಖ ಲಕ್ಷಣಗಳಿವು:
– YONO ಆ್ಯಪ್ ಅಥವಾ YONO ಬ್ರ್ಯಾಂಚ್ ಮೂಲಕ ಯಾವುದೇ ತಡೆ ಇಲ್ಲದ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಶೀಲನೆ.
– ಕಾಂಟ್ಯಾಕ್ಟ್ಲೆಸ್ ಅಥವಾ ಕಾಗದರಹಿತ ಪಯಣಕ್ಕೆ YONO ಆ್ಯಪ್ ಮೂಲಕ ಅರ್ಜಿ
– YONO ಬ್ರ್ಯಾಂಚ್ ಪೋರ್ಟಲ್ನಲ್ಲಿ E2E ಪ್ರಕ್ರಿಯೆ
– ಕೆಸಿಸಿ ಪರಿಶೀಲನೆ ಪ್ರಕ್ರಿಯೆ ಸ್ಟ್ಯಾಂಡರ್ಡೈಸೇಷನ್
– ರೈತರು ಮತ್ತು ಶಾಖೆಯಿಂದ ಕನಿಷ್ಠ ಪ್ರಮಾಣದ ಡೇಟಾ ಎಂಟ್ರಿ
ಅರ್ಜಿ ಸಲ್ಲಿಕೆ ಹಂತಗಳು
– ಮೊಬೈಲ್ ಫೋನ್ನಲ್ಲಿ YONO ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಮತ್ತು ಅಗತ್ಯ ಕ್ರೆಡೆನ್ಷಿಯಲ್ ಜತೆಗೆ ಖಾತೆಗೆ ಸೈನ್ ಇನ್ ಆಗಬೇಕು.
– YONO Krishi ವಿಭಾಗಕ್ಕೆ ತೆರಳಿ, Khata ಮೇಲೆ ಒತ್ತಬೇಕು.
– KCC Review ಮೇಲೆ ಒತ್ತಬೇಕು ಹಾಗೂ ನಂತರ Apply ಎಂಬುದರ ಮೇಲೆ ಒತ್ತಬೇಕು.
ಏನಿದು ಎಸ್ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ
ರೈತರ ಅನುಕೂಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕಿಸಾನ್ ಕ್ರೆಡಿಟ್ ಅಕೌಂಟ್ ನೀಡಲಾಗುತ್ತದೆ. 5 ವರ್ಷದ ಅವಧಿಗೆ ಮತ್ತು ವಾರ್ಷಿಕವಾಗಿ ಶೇ 10ರ ದರದಲ್ಲಿ ಕ್ರೆಡಿಟ್ ಮೊತ್ತ ಏರಿಕೆ ಆಗುತ್ತಾ ಸಾಗುತ್ತದೆ. ಅದೂ ವಾರ್ಷಿಕ ಪರಿಶೀಲನೆ ಆಧಾರದಲ್ಲಿ ಆಗುತ್ತದೆ. ಬ್ಯಾಂಕ್ನ ಮಾಹಿತಿಯಂತೆ, ಸಮಯಕ್ಕೆ ಸರಿಯಾಗಿ ಹಣ ಹಿಂತಿರುಗಿಸುವವರಿಗೆ 3 ಲಕ್ಷ ರೂಪಾಯಿ ತನಕದ ಮೊತ್ತಕ್ಕೆ ಶೇ 3ರಷ್ಟು ಬಡ್ಡಿ ಸಬ್ಸಿಡಿ ಒಳಗೊಂಡಿರುತ್ತದೆ. ಖಾತೆ ಮರುಪಾವತಿ ಅವಧಿ ಬೆಳೆಯ ಅವಧಿ ಮೇಲೆ (ಅಲ್ಪ ಮತ್ತು ದೀರ್ಘ) ಹಾಗೂ ಬೆಳೆ ಮಾರ್ಕೆಟಿಂಗ್ ಮೇಲೆ ಬದಲಾಗುತ್ತದೆ. 70 ವರ್ಷದೊಳಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಾರರಿಗೆ ವಯಕ್ತಿಕ ಅಪಘಾತ ವಿಮೆ (PAS) ದೊರೆಯುತ್ತದೆ. ಅರ್ಹ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ (PMFBY) ಕವರ್ ಆಗುತ್ತದೆ. ಎಸ್ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯು 3 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ಶೇ 7ರ ಬಡ್ಡಿ ದೊರೆಯುತ್ತದೆ. ಕೆಸಿಸಿಯ ಎಲ್ಲ ಖಾತೆದಾರರಿಗೆ ರುಪೇ ಕಾರ್ಡ್ ಸಿಗುತ್ತದೆ. ಆ ಕಾರ್ಡ್ ಅನ್ನು 45 ದಿನಗಳಿಗೆ ಒಮ್ಮೆ ಬಳಸಿದರೆ 1 ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯುತ್ತದೆ.
ಇದನ್ನೂ ಓದಿ: SBI Customer Alert: ಎಸ್ಬಿಐ ಡಿಜಿಟಲ್ ಸೇವೆಗಳಲ್ಲಿ ಆಗಸ್ಟ್ 6-7ರಂದು ಈ ಅವಧಿಯಲ್ಲಿ ವ್ಯತ್ಯಯ
(How SBI Farmer Customers Can Apply For Review Kisan Credit Card Online On YONO Here Is The Details)