Income Tax Gold Sale: ಮನೆ ಖರೀದಿಗೋ ನಿರ್ಮಾಣಕ್ಕಾಗಿಯೋ ಚಿನ್ನ ಮಾರಾಟ ಮಾಡಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

| Updated By: Srinivas Mata

Updated on: Jun 11, 2022 | 11:16 AM

ಮನೆ ನಿರ್ಮಾಣಕ್ಕೋ ಅಥವಾ ಖರೀದಿಗೋ ಚಿನ್ನ ಮತ್ತಿತರ ಆಸ್ತಿಯನ್ನು ಮಾರಾಟ ಮಾಡಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ ಎಂಬ ಮಾಹಿತಿ ಇಲ್ಲಿದೆ.

Income Tax Gold Sale: ಮನೆ ಖರೀದಿಗೋ ನಿರ್ಮಾಣಕ್ಕಾಗಿಯೋ ಚಿನ್ನ ಮಾರಾಟ ಮಾಡಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಮನೆ ಖರೀದಿ ಎಂಬುದು ಬಹಳ ಮುಖ್ಯವಾದ ತೀರ್ಮಾನ. ಕೆಲವು ಸಲ ಏನಾಗುತ್ತದೆ ಅಂದರೆ, ಬೇರೆ ಆಸ್ತಿಗಳನ್ನು ಮಾರಿ, ಉದಾಹರಣೆಗೆ ಸ್ಟಾಕ್​ಗಳು, ಚಿನ್ನ, ಮ್ಯೂಚುವಲ್ ಫಂಡ್​ಗಳು ಇವುಗಳನ್ನು ಮಾರಾಟ ಮಾಡಿ ಮನೆಯನ್ನು ಖರೀದಿಸುತ್ತಾರೆ. ಹೀಗೆ ಲಾಭದ ನಗದು ಮಾಡುವಾಗ ಅಥವಾ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ದೀರ್ಘಾವಧಿಯ ಬಂಡವಾಳ ಲಾಭದ (LTCG) ತೆರಿಗೆ ಬೀಳುಯತ್ತದೆ. ಆದರೆ ಕೆಲವು ಸನ್ನಿವೇಶದಲ್ಲಿ ಆದಾಯ ತೆರಿಗೆ ಇಲಾಖೆಯು ವಿನಾಯಿತಿಯನ್ನು ನೀಡುತ್ತದೆ. ಉದಾಹರಣೆಗೆ, ಮನೆಯ ನಿರ್ಮಾಣಕ್ಕೋ ಅಥವಾ ಮನೆ ಖರೀದಿಗಾಗಿಯೋ ಚಿನ್ನವನ್ನು ಮಾರಾಟ ಮಾಡಿದರು ಅಂತಿಟ್ಟುಕೊಳ್ಳಿ.

ಇಂಥ ಸನ್ನಿವೇಶದ ಬಗ್ಗೆ ತಜ್ಞರು ಹೇಳುವುದೇನೆಂದರೆ, ಒಬ್ಬ ವ್ಯಕ್ತಿ 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಇಟ್ಟುಕೊಂಡ ನಂತರ ಚಿನ್ನವನ್ನು ಮಾರಾಟ ಮಾಡಿದಲ್ಲಿ ಶೇ 20ರಷ್ಟು LTCG ತೆರಿಗೆ ಇಂಡೆಕ್ಸೇಷನ್ ಜತೆಗೆ ಪಾವತಿಸಬೇಕು. ಆದರೆ ಮಾರಾಟ ಮಾಡಿದ ಪೂರ್ತಿ ಮೊತ್ತವನ್ನು ಹೊಸ ಮನೆಯ ನಿರ್ಮಾಣಕ್ಕೋ ಅಥವಾ ಖರೀದಿಗೋ ಬಳಸಿದಲ್ಲಿ ಆಗ ಚಿನ್ನ ಮಾರಾಟ ಮಾಡಿದ ಆ ವ್ಯಕ್ತಿ ಎಲ್​ಟಿಸಿಜಿ ತೆರಿಗೆಯಿಂದ ವಿನಾಯಿತಿಯನ್ನು ಕ್ಲೇಮ್​ ಮಾಡಬಹುದು.

ಇಲ್ಲಿ ಇನ್ನೂ ಒಂದು ವಿಚಾರ ಇದೆ. ಹಾಗೆ ವಿನಾಯಿತಿ ಕ್ಲೇಮ್ ಮಾಡಬೇಕಿದ್ದಲ್ಲಿ ಚಿನ್ನವನ್ನು ಮಾರಾಟ ಮಾಡಿದ 2 ವರ್ಷದೊಳಗಾಗಿ ಹೊಸ ಮನೆಯ ಖರೀದಿ ಮಾಡಿರಬೇಕು ಅಥವಾ ಚಿನ್ನ ಮಾರಾಟ ಮಾಡಿದ 3 ವರ್ಷದೊಳಗೆ ವಸತಿ ಆಸ್ತಿ ನಿರ್ಮಿಸಬೇಕು. ಹಾಗಿದ್ದರೆ ಚಿನ್ನ ಮಾರಾಟದ ಮೇಲೆ ಎಲ್​ಟಿಸಿಜಿ ತೆರಿಗೆ ಬೀಳದಂತೆ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ಕೆಲವು ಸಲಹೆಗಳಿವೆ.

1) ಬಂಡವಾಳ ಆಸ್ತಿಗಳ ಮಾರಾಟದ ಒಂದು ವರ್ಷದ ಮುನ್ನ ಹೊಸದಾದ ವಸತಿ ಆಸ್ತಿಯನ್ನು ಖರೀದಿ ಮಾಡಿರಬೇಕು; ಅಥವಾ

2) ಬಂಡವಾಳ ಆಸ್ತಿ ಮಾರಾಟ ಮಾಡಿದ ಎರಡು ವರ್ಷದೊಳಗಾಗಿ ವಸತಿ ಆಸ್ತಿಯನ್ನು ಖರೀದಿಸಬೇಕು; ಅಥವಾ

3) ಬಂಡವಾಳ ಆಸ್ತಿಯನ್ನು ಮಾರಾಟ ಮಾಡಿದ ಮೂರು ವರ್ಷದೊಳಗಾಗಿ ವಸತಿ ಆಸ್ತಿಯನ್ನು ನಿರ್ಮಾಣ ಮಾಡಬೇಕು.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 54F ಅಡಿಯಲ್ಲಿ ಒಬ್ಬ ವ್ಯಕ್ತಿಯು ಬಂಡವಾಳ ಆಸ್ತಿಗಳು ಎನಿಸಿಕೊಳ್ಳುವ ಸ್ಟಾಕ್ಸ್, ಬಾಂಡ್ಸ್, ಚಿನ್ನ ಮುಂತಾದವುಗಳ ಮಾರಾಟದಿಂದ ದೊರೆಯುವ ನಿವ್ವಳ ಆಸ್ತಿ ಲಾಭಕ್ಕೆ ಆದಾಯ ತೆರಿಗೆ ವಿನಾಯಿತಿ ಕ್ಲೇಮ್​ ಮಾಡುವುದಕ್ಕೆ ಅವಕಾಶ ಇದೆ. ಆದರೆ ಮನೆಯ ಆಸ್ತಿಯನ್ನು ಹೊರತುಪಡಿಸಿ. ಚಿನ್ನ ಮಾರಿದ್ದರಿಂದ ಬರುವ ಹಣವನ್ನು ಸಂಪೂರ್ಣವಾಗಿ ಹೊಸ ವಸತಿ ಆಸ್ತಿಯನ್ನು ಖರೀದಿಗೆ ಅಂತಲೇ ಬಳಸಿರಬೇಕು, ಆಗಷ್ಟೇ ಕ್ಲೇಮ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿಗೆ ಕ್ಲಿಕ್ ಮಾಡಿ

ಇದನ್ನೂ ಓದಿ: Income Tax Notice: ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಏಕೆ ಬರುತ್ತದೆ? ಆಗ ತೆರಿಗೆ ಪಾವತಿದಾರರು ಏನು ಮಾಡಬೇಕು?

Published On - 11:16 am, Sat, 11 June 22