ಎಲ್ಐಸಿ ಇಂಡಿಯಾ ಐಪಿಒ (LIC IPO) ಬಿಡ್ಡಿಂಗ್ ಪೂರ್ತಿಯಾದ ಮೇಲೆ ಎಲ್ಲರ ಕಣ್ಣು ಅದರ ವಿತರಣೆ ದಿನಾಂಕದ ಕಡೆ ಇದ್ದು, ಮೇ 12ರ ಗುರುವಾರ ವಿತರಿಸಬಹುದು ಎಂಬ ನಿರೀಕ್ಷೆ ಇದೆ. ಯಾರು ಈ ಸಾರ್ವಜನಿಕ ಇಶ್ಯೂಗೆ ಅರ್ಜಿ ಹಾಕಿಕೊಂಡಿದ್ದಾರೋ ಅಂಥವರು ಎಲ್ಐಸಿ ಐಪಿಒ ವಿತರಣೆ ಸ್ಥಿತಿಯನ್ನು ಆನ್ಲೈನ್ ಮೂಲಕ ಪರಿಶೀಲಿಸಬಹುದು. ಬಿಎಸ್ಇ ವೆಬ್ಸೈಟ್ ಅಥವಾ ಅದರ ರಿಜಿಸ್ಟ್ರಾರ್ KFin ಟೆಕ್ನಾಲಜೀಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಆದರೆ ಷೇರು ಹಂಚಿಕೆ ಮುಗಿದಿದೆ ಎಂದಾದ ಮೇಲಷ್ಟೇ ಎಲ್ಐಸಿ ಐಪಿಒ ವಿತರಣೆ ಸ್ಥಿತಿಯನ್ನು ಪರಿಶೀಲಿಸಬಹುದು.
ಎಲ್ಐಸಿ ಐಪಿಒ ಹಂಚಿಕೆ ಸ್ಥಿತಿ ಪರಿಶೀಲಿಸಲು ನೇರ ಲಿಂಕ್ಗಳು
ಈ ಮೇಲೆ ತಿಳಿಸಿದಂತೆ ಎಲ್ಐಸಿ ಐಪಿಒ ಷೇರು ಹಂಚಿಕೆ ಬಗ್ಗೆ ಬಿಡ್ಡರ್ಗಳು ತಿಳಿಯುವುದು ಕಷ್ಟದ ವಿಚಾರ ಏನಲ್ಲ. ಬಿಎಸ್ಇ ಅಧಿಕೃತ ವೆಬ್ಸೈಟ್- bseindia.com ಅಥವಾ KFin ಟೆಕ್ನಾಲಜೀಸ್ ಲಿಮಿಟೆಡ್ ಅಧಿಕೃತ ವೆಬ್ಸೈಟ್- karisma.kfintech.comನಲ್ಲಿ ಪರಿಶೀಲಿಸಬಹುದು. ಇನ್ನೂ ಸುಲಭ ಆಗಬೇಕು ಅಂದರೆ, ನೇರ ಲಿಂಕ್ಗಳಾದ bseindia.com/investors/appli_check.aspx ಹಾಗೂ ris.kfintech.com/ipostatus/ipos.aspx ಮೂಲಕ ಇನ್ನೂ ಸಲೀಸಾಗಿ ತಿಳಿಯಬಹುದು.
ಬಿಎಸ್ಇ ವೆಬ್‌ಸೈಟ್‌ನಲ್ಲಿ ಎಲ್ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು
ಮೇಲೆ ತಿಳಿಸಿದಂತೆ, ಬಿಡ್ದಾರರು ನೇರ ಬಿಎಸ್ಇ ಲಿಂಕ್‌ನಲ್ಲಿ ಲಾಗಿನ್ ಮಾಡಬಹುದು ಹಾಹಗೂ ಒಂದಾದ ಮೇಲೆ ಒಂದರಂತೆ ಕೆಳಗೆ ತಿಳಿಸಲಾದ ಹಂತವನ್ನು ಅನುಸರಿಸಬಹುದು:
1] ನೇರ ಬಿಎಸ್ಇ ಲಿಂಕ್‌ನಲ್ಲಿ ಲಾಗಿನ್ ಮಾಡಿ – bseindia.com/investors/appli_check.aspx;
2] LIC IPO ಆಯ್ಕೆ ಮಾಡಿ;
3] ನಿಮ್ಮ LIC IPO ಅರ್ಜಿ ಸಂಖ್ಯೆಯನ್ನು ನಮೂದಿಸಿ;
4] ನಿಮ್ಮ ಪ್ಯಾನ್ ವಿವರಗಳನ್ನು ನಮೂದಿಸಿ;
5] ‘ನಾನು ರೋಬೋಟ್ ಅಲ್ಲ’ ಕ್ಲಿಕ್ ಮಾಡಿ; ಮತ್ತು
6] ‘ಸಲ್ಲಿಸು’ (submit) ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ LIC IPO ಹಂಚಿಕೆ ಸ್ಥಿತಿಯು ಕಂಪ್ಯೂಟರ್ ಮಾನಿಟರ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್ ಪರದೆಯಲ್ಲಿ ಲಭ್ಯವಾಗುತ್ತದೆ.
KFintech ವೆಬ್‌ಸೈಟ್‌ನಲ್ಲಿ ಎಲ್ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?
ಅಧಿಕೃತ ರಿಜಿಸ್ಟ್ರಾರ್‌ನ ವೆಬ್‌ಸೈಟ್‌ನಲ್ಲಿ ಎಲ್ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಲು ಬಯಸುವವರು, ಅವರು ಮೇಲಿನ ನೇರ KFintech ಲಿಂಕ್‌ನಲ್ಲಿ ಲಾಗಿನ್ ಮಾಡಬಹುದು ಮತ್ತು ಕೆಳಗಿನ ಹಂತ ಹಂತದ ಮಾರ್ಗದರ್ಶಿಯನ್ನು ಅನುಸರಿಸಬಹುದು:
1] ನೇರ KFintech ಲಿಂಕ್‌ನಲ್ಲಿ ಲಾಗಿನ್ ಮಾಡಿ — ris.kfintech.com/ipostatus/ipos.aspx;
2] LIC IPOನಲ್ಲಿ ಕ್ಲಿಕ್ ಮಾಡಿ;
3] ಅಪ್ಲಿಕೇಷನ್ ಸಂಖ್ಯೆ ಅಥವಾ ಡಿಪಿಐಡಿ/ಕ್ಲೈಂಟ್ ಐಡಿ ಅಥವಾ ಪ್ಯಾನ್ ಒಂದನ್ನು ಆಯ್ಕೆ ಮಾಡಿ (ಅಪ್ಲಿಕೇಷನ್ ಸಂಖ್ಯೆಯನ್ನು ತೆಗೆದುಕೊಳ್ಳೋಣ);
4] LIC IPO ಅರ್ಜಿ ಸಂಖ್ಯೆಯನ್ನು ನಮೂದಿಸಿ;
5] ಕ್ಯಾಪ್ಚಾವನ್ನು ಭರ್ತಿ ಮಾಡಿ; ಮತ್ತು
6] ‘ಸಲ್ಲಿಸು’ (submit) ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಎಲ್ಐಸಿ ಐಪಿಒ ಹಂಚಿಕೆ ಸ್ಥಿತಿಯು ಕಂಪ್ಯೂಟರ್ ಮಾನಿಟರ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್ ಪರದೆಯಲ್ಲಿ ಲಭ್ಯವಾಗುತ್ತದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒಗೆ ಮೇ 9ರ ಅಂತಿಮ ದಿನಕ್ಕೆ ಒಟ್ಟು 2.95 ಪಟ್ಟು ಬೇಡಿಕೆ
Published On - 11:07 am, Thu, 12 May 22