AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಖರೀದಿಸುವ ಮುನ್ನ ಹಾಲ್ಮಾರ್ಕ್ ಗಮನಿಸಿದರೆ ಸಾಕಾ? ಬಂಗಾರದ ಶುದ್ಧತೆ ಪತ್ತೆ ಮಾಡುವ ವಿಧಾನ ತಿಳಿದಿರಿ

ಚಿನ್ನದಲ್ಲಿ 24 ಕ್ಯಾರಟ್, 22 ಕ್ಯಾರಟ್, 18 ಕ್ಯಾರಟ್, 16 ಕ್ಯಾರಟ್, ಹೀಗೆ ವಿವಿಧ ಶುದ್ಧತೆಯ ಪ್ರಾಕಾರಗಳಿವೆ. ಕೆಲವೊಮ್ಮೆ 18 ಕ್ಯಾರಟ್ ಚಿನ್ನವನ್ನು 22 ಕ್ಯಾರಟ್ ಚಿನ್ನವೆಂದು ನಂಬಿಸಿ ಮಾರುವವರಿರುತ್ತಾರೆ. ಹೀಗಾಗಿ, ಸರ್ಕಾರವು ಎಲ್ಲಾ ಚಿನ್ನಕ್ಕೂ ಹಾಲ್ಮಾರ್ಕ್ ಗುರುತು ಕಡ್ಡಾಯಗೊಳಿಸಿದೆ. ಈ ಹಾಲ್ಮಾರ್ಕ್ ಕೂಡ ನಕಲಿಯಾಗುವ ಅವಕಾಶ ಇರುವುದರಿಂದ ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ಕೆಲ ಮಾರ್ಗೋಪಾಯಗಳು.

ಚಿನ್ನ ಖರೀದಿಸುವ ಮುನ್ನ ಹಾಲ್ಮಾರ್ಕ್ ಗಮನಿಸಿದರೆ ಸಾಕಾ? ಬಂಗಾರದ ಶುದ್ಧತೆ ಪತ್ತೆ ಮಾಡುವ ವಿಧಾನ ತಿಳಿದಿರಿ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2026 | 3:26 PM

Share

ಬಂಗಾರ ಯಾವ ಖರೀದಿಸಿದರೂ ಲಾಭವೇ. ಆದರೂ ದೀಪಾವಳಿ, ಅಕ್ಷಯ ತೃತೀಯ, ಧನತ್ರಯೋದಶಿ (ಧನ್​ತೇರಾಸ್) ಇತ್ಯಾದಿ ಕೆಲ ಶುಭ ದಿನಗಳಂದು ಚಿನ್ನವನ್ನು ಖರೀದಿಸುವುದು ಬಹಳ ಶುಭಕರ ಎನ್ನುವ ನಂಬಿಕೆ ಇದೆ. ಈ ಬಾರಿ ಧನತ್ರಯೋದಶಿಯು ನವೆಂಬರ್ 6ರಂದು ಇದೆ. ಅಂದು ನೀವು ಚಿನ್ನವನ್ನು ಖರೀದಿಸುತ್ತಿದ್ದರೆ ಕೆಲ ಉಪಯುಕ್ತ ಮಾಹಿತಿ ತಿಳಿದಿರಿ. ಆವತ್ತಿನ ಖರೀದಿಗೆ ಮಾತ್ರವಲ್ಲ, ಯಾವತ್ತೇ ಚಿನ್ನ ಖರೀದಿಸಿದರೂ ಈ ಕೆಳಕಂಡ ಮಾಹಿತಿ ನೆನಪಲ್ಲಿರಬೇಕು.

ಚಿನ್ನದ ಮೇಲೆ ಹಾಲ್ಮಾರ್ಕ್ ಗುರುತಿದ್ದರೆ ಸಾಲದು…

ಈಗ ಹಾಲ್ಮಾರ್ಕ್ ಇರುವ ಚಿನ್ನ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಆದರೆ, ನಕಲಿ ನೋಟುಗಳು ಬರುವ ಹಾಕಿ ನಕಲಿ ಹಾಲ್ಮಾರ್ಕ್ ಗುರುತು ಹಾಕಿರಲೂಬಹುದು. ಆ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೀಗಾಗಿ, ಹಾಲ್ಮಾರ್ಕ್ ಗುರುತಿನ ಜೊತೆಗೆ ಅದರ ಐಡಿ (ಎಚ್​ಯುಐಡಿ) ಕೋಡ್ ಅನ್ನೂ ಪರಿಶೀಲಿಸುವುದು ಅಗತ್ಯ ಎನಿಸಬಹುದು.

ಏನಿದು ಹೆಚ್​ಯುಐಡಿ ಕೋಡ್?

ಹೆಚ್​ಯುಐಡಿ ಎಂದರೆ ಹಾಲ್ಮಾರ್ಕ್ ಯೂನಿಕ್ ಐಡಿ. ಇದು ಆರು ಅಂಕಿಗಳ ಅಕ್ಷರಸಂಖ್ಯೆ ಸಂಯೋಜನೆಯ ಒಂದು ಕೋಡ್. ಹಾಲ್ಮಾರ್ಕ್ ಗುರುತು ಹಾಕಲಾಗಿರುವ ಚಿನ್ನದ ವಸ್ತುವಿನಲ್ಲಿ ಈ ಕೋಡ್ ಇರುತ್ತದೆ. ಈ ಕೋಡ್ ಮೂಲಕ ಒಡವೆಯ ಶುದ್ಧತೆಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ: ಮಹಾಕುಸಿತದ ಹಾದಿಯಲ್ಲಿ ಚಿನ್ನ; ಇಷ್ಟೊಂದು ತೀವ್ರವಾಗಿ ಬೆಲೆ ಇಳಿಯುತ್ತಿರುವುದ್ಯಾಕೆ? ಇಲ್ಲಿವೆ ಕೆಲ ಕಾರಣಗಳು

ಎಚ್​ಯುಐಡಿ ಕೋಡ್ ಬಳಸಿ ಒಡವೆಯ ಶುದ್ಧತೆ ಹೇಗೆ ಪರಿಶೀಲಿಸುವುದು?

  1. ಮೊದಲು ಬಿಐಎಸ್ ಕೇರ್ ಆ್ಯಪ್ ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಿಕೊಳ್ಳಿ.
  2. ಈಗ ಒಡವೆಯಲ್ಲಿ ನೀವು ಬಿಐಎಸ್ ಚಿಹ್ನೆ ಗಮನಿಸಿ. ಅಲ್ಲೇ ಪಕ್ಕದಲ್ಲೇ 6 ಅಂಕಿಗಳ ಎಚ್​ಯುಐಡಿ ಕೋಡ್ ಇರುತ್ತದೆ.
  3. ಬಿಐಎಸ್ ಕೇರ್ ಆ್ಯಪ್ ಅನ್ನು ತೆರೆದು, ಅದರಲ್ಲಿ ‘ವೆರಿಫೈ ಎಚ್​ಯುಐಡಿ’ ಆಯ್ಕೆ ಮಾಡಿ. ನಂತರ, ಆರು ಅಂಕಿಗಳ ಕೋಡ್ ಅನ್ನು ನಮೂದಿಸಿ.
  4. ಈಗ ಆಭರಣ ಮಾರಾಟಗಾರರ ರಿಜಿಸ್ಟ್ರೇಶನ್ ವಿವರ, ಹಾಲ್ಮಾರ್ಕ್ ಗುರುತಾದ ದಿನಾಂಕ, ಹಾಲ್ಮಾರ್ಕಿಂಗ್ ಸೆಂಟರ್, ಚಿನ್ನದ ಶುದ್ಧತೆ ಇವೆಲ್ಲಾ ವಿವರವೂ ಕಾಣಿಸುತ್ತದೆ.
  5. ಇದಾದ ಬಳಿಕ ಆಭರಣದಂಗಡಿಯವರು ನಿಮಗೆ ನೀಡಿದ ಬಿಲ್​ನಲ್ಲಿ ಒಡವೆಯ ವಿವರ ಏನು ಕೊಟ್ಟಿದ್ದಾರೆ ಹೋಲಿಕೆ ಮಾಡಿ ನೋಡಿ. ಯಾವುದಾದರೂ ವ್ಯತ್ಯಾಸ ಕಂಡು ಬಂದರೆ ಅಲರ್ಟ್ ಆಗಿ.

ಇದನ್ನೂ ಓದಿ: Gold Rates 27 October: ಚಿನ್ನದ ಬೆಲೆ ಮತ್ತೆ ಏರಿಕೆ; ಮೂರು ದಿನದಲ್ಲಿ 75 ರೂ ಹೆಚ್ಚಳ

ಹಾಲ್ಮಾರ್ಕ್ ಗುರುತಿದ್ದೂ ಶುದ್ಧತೆ ಕಡಿಮೆ ಇದ್ದರೆ ಏನು ಮಾಡುವುದು?

ಒಂದು ವೇಳೆ, ಹಾಲ್ಮಾರ್ಕ್ ಇರುವ ಚಿನ್ನದ ಶುದ್ಧತೆಯು ಘೋಷಿಸಿರುವುದಕ್ಕಿಂತ ಕಡಿಮೆ ಶುದ್ಧತೆ ಹೊಂದಿದ್ದರೆ ಅದಕ್ಕೆ ಪರಿಹಾರ ಪಡೆಯಲು ಅವಕಾಶ ಇದೆ. ಬಿಐಎಸ್ ನಿಯಮಗಳ ಪ್ರಕಾರ, ಘೋಷಿತವಾಗಿರುವುದಕ್ಕಿಂತ ಎಷ್ಟು ಕಡಿಮೆ ಶುದ್ಧತೆ ಇದೆಯೋ ಆ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಶುದ್ಧತೆಯ ಪರೀಕ್ಷೆಗೆ ತಗುಲಿದ ವೆಚ್ಚವನ್ನೂ ಮರಳಿ ಪಡೆಯಬಹುದು.

ಹಾಲ್ಮಾರ್ಕ್ ಇಲ್ಲದ ಚಿನ್ನದ ಶುದ್ಧತೆ ಪರೀಕ್ಷೆ ಹೇಗೆ?

ಹಳೆಯ ಒಡವೆಗಳಿಗೆ ಹಾಲ್ಮಾರ್ಕ್ ಗುರುತಿರುವುದಿಲ್ಲ. ಅಂಥ ಚಿನ್ನದ ಶುದ್ಧತೆ ಪರೀಕ್ಷಿಸಲು ಮಾರ್ಗೋಪಾಯಗಳಿವೆ. ಬಿಐಎಸ್​ನಲ್ಲಿ ನೊಂದಾಯಿತವಾದ ಹಾಲ್ಮಾರ್ಕಿಂಗ್ ಸೆಂಟರ್​ಗಳಲ್ಲಿ ಇವುಗಳನ್ನು ಪರೀಕ್ಷಿಸಬಹುದು. ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಇಂಥ ಅಧಿಕೃತ ಸೆಂಟರ್​ಗಳಿರುತ್ತವೆ. ಹಾಲ್ಮಾರ್ಕ್ ಇರುವ ಚಿನ್ನದ ಬಗ್ಗೆ ಅನುಮಾನ ಇದ್ದರೂ ಈ ಕೇಂದ್ರಗಳಲ್ಲಿ ಶುದ್ಧತೆಯ ಪರೀಕ್ಷೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು