
ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ವಹಿವಾಟುಗಳು ಹೆಚ್ಚಾಗಿವೆ. ಹೆಚ್ಚಿನವರು ಫೋನ್ ಪೇ ಅಥವಾ ಗೂಗಲ್ ಪೇ ಹೀಗೆ ಯುಪಿಐ ಆ್ಯಪ್ (UPI App) ಬಳಸಿ ಹಣ ವರ್ಗಾವಣೆ ಮಾಡುತ್ತಾರೆ. ಆದರೆ ನೀವೇನಾದ್ರೂ ಯುಪಿಐ ಪಿನ್ ಮರೆತು ಹೋಗಿದ್ದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಸುಲಭವಾಗಿ ಯುಪಿಐ ಪಿನ್ ರೀಸೆಟ್ ಮಾಡಿ ಟ್ರಾನ್ಸಾಕ್ಷನ್ ಮಾಡಬಹುದು. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಹಂತ 1: ಮೊದಲಿಗೆ ನೀವು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೇ , ಫೋನ್ ಪೇ ಅಥವಾ ಯಾವುದೇ ಯುಪಿಐ ಆ್ಯಪ್ ತೆರೆಯಿರಿ.
ಹಂತ 2: ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, ಬ್ಯಾಂಕ್ ಅಕೌಂಟ್ ವಿಭಾಗಕ್ಕೆ ಹೋಗಿ, ನೀವು ಪಿನ್ ಬದಲಾಯಿಸಬೇಕಾದ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 3: ಇಲ್ಲಿ ನಿಮಗೆ ಕಾಣಿಸುವ ಫಾರ್ ಗೆಟ್ ಯುಪಿಐ ಪಿನ್ ಅಥವಾ ರಿಸೆಟ್ ಯುಪಿಐ ಪಿನ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ.
ಹಂತ 4: ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ 6 ಅಂಕಿಗಳು ಮತ್ತು ಕಾರ್ಡ್‌ನ ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸಿ.
ಹಂತ 5: ಮೇಲೆ ತಿಳಿಸಿದ ಮಾಹಿತಿ ನಮೂದಿಸಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ಇಲ್ಲಿ ನಮೂದಿಸಿಕೊಳ್ಳಿ.
ಹಂತ 6: ಕೊನೆಗೆ ನೀವು ಹೊಸ 4 ಅಥವಾ 6 ಅಂಕಿಯ ಯುಪಿಐ ಪಿನ್ ಸೆಟ್ ಮಾಡಿ, ನಂತರ ಆ ಪಿನ್ ನ್ನು ಮತ್ತೊಮ್ಮೆ ಟೈಪ್ ಮಾಡಿ ದೃಢೀಕರಿಸಿಕೊಳ್ಳಿ.
ಇದನ್ನೂ ಓದಿ: ಅಕ್ಟೋಬರ್ 2ರಂದು ‘ನೋ ಯುಪಿಐ ಡೇ’; ಅಂಗಡಿಗಳಿಂದ ಒಂದು ದಿನ ಯುಪಿಐ ಪೇಮೆಂಟ್ ಬಹಿಷ್ಕಾರ
ಯುಪಿಐ ಪಿನ್ ಸೆಟ್ ಮಾಡುವಾಗ ಭದ್ರತೆಯ ದೃಷ್ಟಿಯಿಂದ ಈ ಕೆಲವು ವಿಷಯಗಳ ಬಗ್ಗೆ ಗಮನ ಕೊಡಬೇಕು. 1234 ಇಂತಹ ಸರಣಿ ಸಂಖ್ಯೆಗಳನ್ನು ಇಡಬೇಡಿ. ಈ ಪಿನ್‌ನಲ್ಲಿ ನಿಮ್ಮ ಹುಟ್ಟಿದ ವರ್ಷ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆಗಳು, ವಾಹನದ ನಂಬರ್‌ನ್ನು ಪಿನ್ ಆಗಿ ಬಳಸದಿರುವುದು ಸುರಕ್ಷತೆಯಿಂದ ದೃಷ್ಟಿಯಿಂದ ಒಳ್ಳೆಯದು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 30 September 26