EPFO: ಯುಎಎನ್​ ಮರೆತು ಹೋದರೆ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

| Updated By: Srinivas Mata

Updated on: Oct 04, 2021 | 12:56 PM

ಇಪಿಎಫ್​ಒ ಪೋರ್ಟಲ್​ ಸದಸ್ಯರು ಮರೆತುಹೋದ ಅಥವಾ ಕಳೆದುಕೊಂಡ ಯುಎಎನ್​ ಹೇಗೆ ಮರಳಿ ಪಡೆಯಬಹುದು ಹಾಗೂ ಅದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬಿತ್ಯಾದಿ ವಿವರಗಳ ಹಂತಹಂತವಾದ ವಿವರಣೆ ಇಲ್ಲಿದೆ.

EPFO: ಯುಎಎನ್​ ಮರೆತು ಹೋದರೆ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ
ಸಾಂದರ್ಭಿಕ ಚಿತ್ರ
Follow us on

ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದಿಂದ (EPFO) ವಿತರಿಸುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯ ಕೋಡ್ ಅನ್ನು ಖಾತೆದಾರರು ಬಳಸಿಕೊಂಡು, ತಮ್ಮ ಪಿಎಫ್​ ಖಾತೆಯಲ್ಲಿ ಇರುವ ಬಾಕಿಯನ್ನು ಮತ್ತು ಇತರ ಇಪಿಎಫ್​ ಮಾಹಿತಿಯನ್ನು ಪರಿಶೀಲಿಸಬಹುದು. ಒಬ್ಬರಿಂದ ಮತ್ತೊಬ್ಬ ಉದ್ಯೋಗದಾತರಿಗೆ ಪಿಎಫ್​ ಖಾತೆಯನ್ನು ಯಾವುದೇ ಉದ್ಯೋಗದಾತರ ಅವಲಂಬನೆ ಇಲ್ಲದೆ ವಿಥ್​ಡ್ರಾಗಾಗಿ ಪೋರ್ಟಬಿಲಿಟಿ ಮಾಡುವುದಕ್ಕೆ ಈ ಸಂಖ್ಯೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದೇ ಸಂಖ್ಯೆಯನ್ನು ಬಳಸಿಕೊಂಡು ಹಳೆ ಖಾತೆಯನ್ನು ಕ್ಲೋಸ್​ ಮಾಡಬಹುದು ಮತ್ತು ಬಾಕಿ ಮೊತ್ತವನ್ನು ವರ್ಗಾವಣೆ ಮಾಡಬಹುದು. ಇಪಿಎಫ್​ಒ ಆನ್​ಲೈನ್​ ಸೇವೆಯ ಅನುಕೂಲಗಳು ಪಡೆಯುವುದಕ್ಕೆ ಯುಎಎನ್​ ಅನ್ನು ಉದ್ಯೋಗಿಯ ಕೆವೈಸಿ ಮಾಹಿತಿ ಜತೆಗೆ ಜೋಡಣೆ ಮಾಡಿರಬೇಕು. ಆದರೆ ಒಂದು ವೇಳೆ ಯುಎಎನ್​ ಮರೆತುಹೋದಲ್ಲಿ ಅಥವಾ ಅದನ್ನು ಟ್ರ್ಯಾಕ್​ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದಲ್ಲಿ ಏನು ಮಾಡೋದು? ಅಂಥ ಸಂದರ್ಭದಲ್ಲಿ ಸಿಬ್ಬಂದಿಯು ಈ ಕೆಳಗಿನ ಸರಳ ಹಂತಗಳ ಮೂಲಕ ಆನ್​ಲೈನ್​ನಲ್ಲೇ ಮರಳಿ ಪಡೆಯಬಹುದು.

EPFO UAN ಮರಳಿ ಪಡೆಯುವುದು ಹೇಗೆ?
– ಇಪಿಎಫ್​ಒ ಪೋರ್ಟಲ್ https://unifiedportal-mem.epfindia.gov.in ಲಾಗ್​ ಇನ್ ಆಗಬೇಕು. ಮತ್ತು ಹೋಮ್​ ಪೇಜ್​ನಲ್ಲಿ ಸಿಗುವ ‘Know You UAN’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
– ಇಪಿಎಫ್ ಖಾತೆಗೆ ಜೋಡಣೆ ಮಾಡಿರುವ 10 ಅಂಕಿಯ ಮೊಬೈಲ್ ನಂಬರ್ ನಮೂದಿಸಬೇಕು. ಮತ್ತು ದೃಢೀಕರಣಕ್ಕಾಗಿ Captch Code ಭರ್ತಿ ಮಾಡಬೇಕು.
– ಮೊಬೈಲ್​ಗೆ ಬರುವ ಒಟಿಪಿಯನ್ನು ದೃಢೀಕರಣಕ್ಕಾಗಿ ನಮೂದಿಸಬೇಕು.
– ಆ ನಂತರ ಹೆಸರು, ಜನ್ಮದಿನಾಂಕ ಮುಂತಾದ ವಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ.
– ಆಧಾರ್, ಪ್ಯಾನ್ ಅಥವಾ ಸದಸ್ಯ ಐಡಿಗಳನ್ನು ದೃಢೀಕರಣದ ಕೊನೆ ಭಾಗವಾಗಿ ನಮೂದಿಸಬೇಕಾಗುತ್ತದೆ.
– ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ‘Show My UAN’ ಮೇಲೆ ಕ್ಲಿಕ್ ಮಾಡಿ
– ಮತ್ತು ಇಲ್ಲಿಂದ ಮುಂದುವರಿಯಿರಿ. ಯುಎಎನ್​ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು ಅಥವಾ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬಹುದು.

ಒಂದು ವೇಳೆ ಯುಎಎನ್​ಇನ್ನೂ ಸಕ್ರಿಯವಾಗಿಲ್ಲ ಅಂತಾದರೆ, ಇಲ್ಲಿಂದ ಕೆಳಗೆ ಇರುವ ನಿಯಮಾವಳಿಗಳನ್ನು ಅನುಸರಿಸಿ ಸಕ್ರಿಯಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬಹುದು.
– ಇಪಿಎಫ್​ಒ ಸದಸ್ಯರ ಅಧಿಕೃತ ಪೋರ್ಟಲ್​ಗೆ ಲಾಗ್​ ಇನ್ ಆಗಬೇಕು.
– ಹೋಮ್​ಪೇಜ್​ನಲ್ಲಿ ಸಿಗುವ “Activate UAN” ಲಿಂಕ್​ ಮೇಲೆ ಕ್ಲಿಕ್ ಮಾಡಬೇಕು.
– ಯುಎಎನ್​, ಸದಸ್ಯತ್ವ ಐಡಿ, ಆಧಾರ್ ಅಥವಾ PAN ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
– ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ (ಐಚ್ಛಿಕ)​ ನಮೂದಿಸಬೇಕು.
– ದೃಢೀಕರಣಕ್ಕಾಗಿ ಬಾಕ್ಸ್​ನಲ್ಲಿ ತೋರಿಸಲಾದ Captch Code ಭರ್ತಿ ಮಾಡಬೇಕು.
– ಒಟಿಪಿಯನ್ನು ನೋಂದಾಯಿತ ಮೊಬೈಲ್​ ಸಂಖ್ಯೆಯನ್ನು ದೃಢೀಕರಣಕ್ಕಾಗಿ ಕಳುಹಿಸಲಾಗುತ್ತದೆ.
– ಒಟಿಪಿಯನ್ನು ನಮೂದಿಸಿ ಹಾಗೂ “Validate OTP and Activate UAN” ಎಂಬುದರ ಮೇಲೆ ಕ್ಲಿಕ್ ಮಾಡಿ.
– ಯುಎಎನ್​ ಸಕ್ರಿಯಗೊಳ್ಳುತ್ತದೆ. ಪಾಸ್​ವರ್ಡ್​ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಒಂದು ಸಲ ಸಕ್ರಿಯವಾದ ಮೇಲೆ ಇಪಿಎಫ್​ಒ ಸದಸ್ಯರ ಪೋರ್ಟಲ್​ನಲ್ಲಿ ಯುಎಎನ್​ ಜತೆಗೆ ಪಾಸ್​ವರ್ಡ್ ಬಳಸಬಹುದು.

ಇದನ್ನೂ ಓದಿ: EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ