PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ 1 ಕೋಟಿ ರೂಪಾಯಿ ಉಳಿಸಲು ತಿಂಗಳಿಗೆ ಎಷ್ಟು ಉಳಿಸಬೇಕು?

| Updated By: Srinivas Mata

Updated on: Oct 23, 2021 | 3:05 PM

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೂಲಕವಾಗಿ 1 ಕೋಟಿ ರೂಪಾಯಿಯನ್ನು ಉಳಿತಾಯ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ 1 ಕೋಟಿ ರೂಪಾಯಿ ಉಳಿಸಲು ತಿಂಗಳಿಗೆ ಎಷ್ಟು ಉಳಿಸಬೇಕು?
ಸಾಂದರ್ಭಿಕ ಚಿತ್ರ
Follow us on

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಸರ್ಕಾರದ ಬೆಂಬಲ ಇರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ಇದು ಮೆಚ್ಯೂರಿಟಿ ಸಮಯದಲ್ಲಿ ಖಚಿತವಾದ ಆದಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಪಿಪಿಎಫ್ ಖಾತೆದಾರರು ಒಂದು ಹಣಕಾಸು ವರ್ಷದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ರೂ. 1.50 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಇದರ ಹೊರತಾಗಿ ಇದು ಶೇ 100ರಷ್ಟು ಅಪಾಯರಹಿತವಾಗಿದೆ ಮತ್ತು ಪಿಪಿಎಫ್ ಬಡ್ಡಿದರ ಪ್ರಸ್ತುತ ಶೇ 7.10 ಇದ್ದು, ಶೇಕಡಾ 100 ರಷ್ಟು ತೆರಿಗೆ ವಿನಾಯಿತಿ ಹೊಂದಿದೆ. ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ, ಪಿಪಿಎಫ್ ಖಾತೆ ತೆರೆದ 15 ವರ್ಷಗಳ ನಂತರ ಮೆಚ್ಯೂರ್ ಆಗುತ್ತದೆ. ಆದರೆ ಪಿಪಿಎಫ್ ಖಾತೆದಾರರು ತಮ್ಮ ಖಾತೆಯನ್ನು 5 ವರ್ಷಗಳ ಬ್ಲಾಕ್‌ನಂತೆ 15 ವರ್ಷಗಳ ನಂತರ ವಿಸ್ತರಿಸಬಹುದು. ಪಿಪಿಎಫ್ ಖಾತೆ ವಿಸ್ತರಣೆ ಸೌಲಭ್ಯವನ್ನು ಎಷ್ಟು ಬಾರಿ ಬೇಕಾದರೂ ಬಳಸಿಕೊಳ್ಳಬಹುದು. ಆದ್ದರಿಂದ ಒಬ್ಬರ ಪಿಪಿಎಫ್ ಖಾತೆಯಲ್ಲಿ ಸರಿಯಾಗಿ ಹೂಡಿಕೆ ಮಾಡಿದರೆ ಹಿಂತೆಗೆದುಕೊಳ್ಳುವ ಸಮಯದಲ್ಲಿ ಕೋಟ್ಯಧಿಪತಿಯಾಗಬಹುದು.

ಒಬ್ಬರ ಪಿಪಿಎಫ್ ಖಾತೆಯಲ್ಲಿ 1 ಕೋಟಿ ರೂಪಾಯಿ ಸಂಗ್ರಹಿಸುವುದು ಹೇಗೆ? ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞರು ಹೇಳುವಂತೆ, “ಒಬ್ಬರ ಪಿಪಿಎಫ್ ಖಾತೆಯಲ್ಲಿ 1 ಕೋಟಿ ಸಂಗ್ರಹಿಸಲು ಖಾತೆದಾರರು ಒಂದು ಹಣಕಾಸು ವರ್ಷದಲ್ಲಿ 1.50 ಲಕ್ಷ ರೂಪಾಯಿ ಮಿತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಪಿಪಿಎಫ್ ಖಾತೆಯಲ್ಲಿ ಒಬ್ಬರು 25 ರಿಂದ 30 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿಯು 25 ರಿಂದ 30 ವರ್ಷಗಳ ಅವಧಿಯಲ್ಲಿ ದುಡಿಮೆ ಮಾಡುತ್ತಿರುತ್ತಾರೆ. ಹಾಗೆ ಗಳಿಸುವ ವ್ಯಕ್ತಿಯು ಉಳಿತಾಯದ ಬಗ್ಗೆ ಜಾಗರೂಕರಾಗಿರಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, 30 ರಿಂದ 35 ವರ್ಷಗಳು ತೆರಿಗೆ ಆಧಾರಿತ-ಉಳಿತಾಯದ ಬಗ್ಗೆ ಸಕ್ರಿಯ ಆಗಿರುವ ಹಂತವಾಗಿದೆ.

ಒಬ್ಬರ ಪಿಪಿಎಫ್ ಖಾತೆಯಲ್ಲಿ ಇಷ್ಟು ದೀರ್ಘಾವಧಿಯವರೆಗೆ ಹೂಡಿಕೆಯನ್ನು ಹೇಗೆ ಮುಂದುವರಿಸುವುದು ಎಂಬುದರ ಕುರಿತು ತಜ್ಞರು ಹೇಳುವಂತೆ, “ಖಾತೆದಾರರು ತಮ್ಮ ಪಿಪಿಎಫ್ ಖಾತೆ ಮೆಚ್ಯೂರಿಟಿಯನ್ನು ಮೀರಿ ವಿಸ್ತರಿಸಲು ನಿಯಮಗಳು ಅವಕಾಶ ನೀಡುತ್ತವೆ. ಆದರೆ ಒಬ್ಬರ ಪಿಪಿಎಫ್ ಖಾತೆಯನ್ನು ವಿಸ್ತರಿಸಲು ಪಿಪಿಎಫ್ ಖಾತೆ ವಿಸ್ತರಣೆಯ ಫಾರ್ಮ್ ಅನ್ನು ಬ್ಯಾಂಕ್​ನಲ್ಲಿ ಅಥವಾ ಖಾತೆ ಇರುವ ಅಂಚೆ ಕಚೇರಿಯಲ್ಲಿ ಮುಕ್ತಾಯದ ಕೊನೆಯ ವರ್ಷದಲ್ಲಿ ಸಲ್ಲಿಸಬೇಕು.” ಪಿಪಿಎಫ್ ಖಾತೆಯನ್ನು 5 ವರ್ಷಗಳ ಬ್ಲಾಕ್‌ನಲ್ಲಿ ವಿಸ್ತರಿಸಬಹುದು. ಒಬ್ಬರ ಪಿಪಿಎಫ್ ಖಾತೆ ಮೆಚ್ಯೂರಿಟಿಯನ್ನು ಎಷ್ಟು ಬಾರಿ ವಿಸ್ತರಿಸಬಹುದು ಎಂಬುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಮೊದಲ ಬಾರಿಗೆ ಹೂಡಿಕೆದಾರರು ಪಿಪಿಎಫ್ ಖಾತೆ ತೆರೆದ 15ನೇ ವರ್ಷದಲ್ಲಿ ಮತ್ತು ನಂತರ ಪಿಪಿಎಫ್ ಖಾತೆ ವಿಸ್ತರಣೆಯ 5ನೇ ವರ್ಷದಲ್ಲಿ ವಿಸ್ತರಣೆ ಫಾರ್ಮ್ ಅನ್ನು ಸಲ್ಲಿಸಬೇಕು.

30 ವರ್ಷಗಳವರೆಗೆ ಪ್ರಸ್ತುತ ಪಿಪಿಎಫ್ ಬಡ್ಡಿ ದರ ಶೇ 7.10 ಅನ್ನು ಅಂದಾಜು ಮಾಡಿಟ್ಟುಕೊಂಡರೆ ಪಿಪಿಎಫ್ ಬಡ್ಡಿ ಕ್ಯಾಲ್ಕುಲೇಟರ್ ಪ್ರಕಾರವಾಗಿ ಒಬ್ಬರ ಪಿಪಿಎಫ್ ಖಾತೆಯಲ್ಲಿ 1,08,000 ರೂಪಾಯಿ ವಾರ್ಷಿಕ ಹೂಡಿಕೆಯ ಮಾಡಬೇಕಾಗುತ್ತದೆ ಪಿಪಿಎಫ್ ಹೂಡಿಕೆದಾರರು ಒಂದು ವರ್ಷದಲ್ಲಿ 12 ಠೇವಣಿಗಳನ್ನು ಮಾಡುವುದಕ್ಕೆ ಅವಕಾಶ ಇದೆ. ಪಿಪಿಎಫ್ ಖಾತೆದಾರರು ಈ 1,08,000 ರೂಪಾಯಿಯನ್ನು 12 ಮಾಸಿಕ ಕಂತುಗಳಲ್ಲಿ 9,000 ರೂಪಾಯಿಯಂತೆ ಹೂಡಿಕೆ ಮಾಡಬಹುದು. ಆದ್ದರಿಂದ ಮ್ಯೂಚುವಲ್ ಫಂಡ್ SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್)​ಯಂತೆ PPF ಖಾತೆದಾರರು 15, 20 ಮತ್ತು 25ನೇ ವರ್ಷದಲ್ಲಿ ವಿಸ್ತರಣೆ ಸೌಲಭ್ಯವನ್ನು ಬಳಸಿಕೊಂಡು 30 ವರ್ಷಗಳವರೆಗೆ ಒಬ್ಬರ ಪಿಪಿಎಫ್ ಖಾತೆಯಲ್ಲಿ ತಿಂಗಳಿಗೆ ರೂ. 9,000 ಹೂಡಿಕೆ ಮಾಡುವ ಮೂಲಕ 1 ಕೋಟಿ ರೂಪಾಯಿಯನ್ನು ಸಂಗ್ರಹಿಸಬಹುದು.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?