Digital EPF, EPS Nomination: ಇಪಿಎಫ್​, ಇಪಿಎಸ್​ ನಾಮನಿರ್ದೇಶನ ಡಿಜಿಟಲಿ ಮಾಡುವುದು ಹೇಗೆ?

| Updated By: Srinivas Mata

Updated on: Oct 16, 2021 | 11:28 AM

ಇಪಿಎಫ್, ಇಪಿಎಸ್​ಗಾಗಿ ಡಿಜಿಟಲಿ ನಾಮ ನಿರ್ದೇಶನ (ನಾಮಿನೇಷನ್) ಮಾಡುವುದು ಹೇಗೆ ಎಂಬ ಬಗ್ಗೆ ಹಂತ ಹಂತವಾದ ವಿವರಣೆ ಈ ಲೇಖನದಲ್ಲಿದೆ.

Digital EPF, EPS Nomination: ಇಪಿಎಫ್​, ಇಪಿಎಸ್​ ನಾಮನಿರ್ದೇಶನ ಡಿಜಿಟಲಿ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (EPFO)ಯು ಪ್ರಾವಿಡೆಂಟ್​ ಫಂಡ್ ಚಂದಾದಾರರಿಗೆ ಇ-ನಾಮಿನೇಷನ್ ಭರ್ತಿ ಮಾಡುವುದಕ್ಕೆ ಕೇಳಿಕೊಂಡಿದೆ. ಹೀಗೆ ಮಾಡುವ ಮೂಲಕ ಸಾಮಾಜಿಕ ಭದ್ರತೆಯು ಚಂದಾದಾರರ ಕುಟುಂಬಕ್ಕೆ ಖಾತ್ರಿ ಆಗುತ್ತದೆ. ಈ ಸಂಬಂಧವಾಗಿ ಇಪಿಎಫ್​ಒ ಟ್ವೀಟ್ ಮಾಡಿದೆ. ಚಂದಾದಾರರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದಕ್ಕೆ ಸದಸ್ಯರು ಕಡ್ಡಾಯವಾಗಿ ಇ-ನಾಮಿನೇಷನ್ ಅನ್ನು ಇಂದೇ ಫೈಲ್ ಮಾಡಬೇಕು. ಡಿಜಿಟಲಿ ಇಪಿಎಫ್/ಇಪಿಎಸ್​ ನಾಮಿನೇಷನ್ ಫೈಲ್ ಮಾಡುವುದಕ್ಕೆ ಇಲ್ಲಿರುವ ಸರಳ ಹಂತಗಳನ್ನು ಅನುಸರಿಸಿ ಎಂದು ತಿಳಿಸಿದೆ. ಇಪಿಎಫ್ ಮತ್ತು ಇಪಿಎಸ್​ ನಾಮಿನೇಷನ್​ ಆನ್​ಲೈನ್​ ಮೂಲಕ ಸಲ್ಲಿಕೆ ಮಾಡುವುದಕ್ಕೆ ಹಂತಹಂತವಾದ ಮಾರ್ಗದರ್ಶನವನ್ನು ವಿವರಿಸುವ ವಿಡಿಯೋ ಹಂಚಿಕೊಳ್ಳಲಾಗಿದೆ.

ಇಪಿಎಫ್, ಇಪಿಎಸ್ ನಾಮಿನೇಷನ್​ ಆನ್​ಲೈನ್ ಮೂಲಕ ಸಲ್ಲಿಸುವುದಕ್ಕೆ ಮಾರ್ಗದರ್ಶನ ಹೀಗಿದೆ:
– EPFO ವೆಬ್‌ಸೈಟ್‌ ಕ್ಲಿಕ್ ಮಾಡಿ – epfindia.gov.in;
– ‘Service’ಗೆ ತೆರಳಿ ಮತ್ತು ಡ್ರಾಪ್‌ಡೌನ್‌ನಲ್ಲಿ ‘For Employees’ ಎಂಬುದನ್ನು ಆಯ್ಕೆ ಮಾಡಿ;
– ‘Member UAN/ಆನ್ಲೈನ್ Services (OCS/OTCP)’ ಕ್ಲಿಕ್ ಮಾಡಿ;
– UAN ಮತ್ತು ಪಾಸ್‌ವರ್ಡ್ ಲಾಗಿನ್ ಮಾಡಿ;
– ‘Manage’ ಟ್ಯಾಬ್ ಅಡಿಯಲ್ಲಿ ‘ಇ-ನಾಮಿನೇಷನ್’ ಆಯ್ಕೆ ಮಾಡಿ;
– ಕುಟುಂಬ ಘೋಷಣೆಯನ್ನು ನವೀಕರಿಸಲು ‘Yes’ ಮೇಲೆ ಕ್ಲಿಕ್ ಮಾಡಿ;
– ಒಟ್ಟು ಕುಟುಂಬದಲ್ಲಿ ಯಾರಿಗೆ ಎಷ್ಟು ಮೊತ್ತ ಎಂಬುದನ್ನು ಘೋಷಿಸಲು ‘ಕುಟುಂಬದ ವಿವರಗಳನ್ನು ಸೇರಿಸಿ’ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘ನಾಮನಿರ್ದೇಶನ ವಿವರಗಳು’ ಮೇಲೆ ಕ್ಲಿಕ್ ಮಾಡಿ;
– ಘೋಷಣೆಯ ನಂತರ, ‘ಸೇವ್ ಇಪಿಎಫ್ ನಾಮಿನೇಷನ್’ ಮೇಲೆ ಕ್ಲಿಕ್ ಮಾಡಿ;
– ಒಟಿಪಿ ಜನರೇಟ್ ಮಾಡುವುದಕ್ಕೆ ‘ಇ-ಸೈನ್’ ಮೇಲೆ ಕ್ಲಿಕ್ ಮಾಡಿ;
– ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ;
– OTP ಸಲ್ಲಿಸಿ ಮತ್ತು ಈಗ ಇ- ನಾಮಿನೇಷನ್ EPFOದಲ್ಲಿ ನೋಂದಾಯಿಸಿರುತ್ತದೆ

ಇಪಿಎಫ್‌ಒ ಚಂದಾದಾರರು ತಮ್ಮ ಇ-ನಾಮಿನೇಷನ್‌ನಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಯನ್ನು ಸೇರಿಸಬಹುದು. ಇಪಿಎಫ್, ಇಪಿಎಸ್ ನಾಮನಿರ್ದೇಶನವನ್ನು ಡಿಜಿಟಲ್ ಆಗಿ ಸಲ್ಲಿಸಿದ ನಂತರ ಯಾವುದೇ ಭೌತಿಕ (Physical) ದಾಖಲೆಗಳ ಅಗತ್ಯವಿಲ್ಲ. ಈ ಇ-ನಾಮಿನೇಷನ್ ಸೇವೆಯನ್ನು ಪಿಎಫ್ ಚಂದಾದಾರರಿಗಾಗಿ ಇಪಿಎಫ್ಒ ಆರಂಭಿಸಿದೆ. ಈ ಪ್ರಕ್ರಿಯೆಯು ಸರಿಯಾಗಿ ಪೂರ್ಣಗೊಂಡ ನಂತರ, ನಾಮಿನಿಯ ಹೆಸರು, ಹುಟ್ಟಿದ ದಿನಾಂಕದಂತಹ ಇತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ.

ಇದನ್ನೂ ಓದಿ: PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್​ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?