Aadhaar Card: ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ

| Updated By: Digi Tech Desk

Updated on: Jun 07, 2021 | 8:35 AM

How to Update Photo on Aadhaar Card: ಆಧಾರ್ ಕಾರ್ಡ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಾವಳಿಗಳೇನು? ಹಂತಹಂತವಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

Aadhaar Card: ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಬ್ಯಾಂಕ್​ನಲ್ಲಿ ಖಾತೆ ತೆರೆಯುವುದರಿಂದ ಆರಂಭಗೊಂಡು, ಹೊಸ ಫೋನ್ ಸಂಪರ್ಕದ ತನಕ ಎಲ್ಲಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಈ 12 ಅಂಕಿಯ ಗುರುತಿನ ಚೀಟಿಯಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಅದೇ ಪ್ರಶ್ನೆ ನಿಮಗೂ ಇದ್ದಲ್ಲಿ ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ. ಕೆಲವೇ ಹಂತಗಳನ್ನು ಅನುಸರಿಸಿ, ಆಧಾರ್ ಕಾರ್ಡ್​ನಲ್ಲಿ ಫೋಟೋ ಬದಲಿಸುವುದಕ್ಕೆ ಮಾಹಿತಿ ಇಲ್ಲಿದೆ. ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಅಥವಾ ಬದಲಾವಣೆ ಮಾಡುವುದರ ಹಂತ ಹಂತವಾದ ವಿವರಣೆ ಹೀಗಿದೆ:

ಹಂತ 1: ಸಮೀಪದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
ಹಂತ 2: UIDAI ವೆಬ್​ಸೈಟ್​ನಿಂದ ಆಧಾರ್​ ನೋಂದಣಿ/ತಿದ್ದುಪಡಿ/ಅಪ್​ಡೇಟ್ ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಅದಕ್ಕೆ ಪೋರ್ಟಲ್ ಲಿಂಕ್: https://ssup.uidai.gov.in/ssup/
ಹಂತ 3: ಅಪ್​ಡೇಟ್ ಮಾಡಬೇಕಾದ ಫೀಲ್ಡ್​ಗಳನ್ನು ಆಯ್ಕೆ ಮಾಡಿರಿ. ಫೋಟೋಗ್ರಾಫ್ ಜತೆಗೆ ತಮ್ಮ ಹೆಸರು, ವಿಳಾಸ ಅಥವಾ ಬೇರೆ ಯಾವುದಾದರೂ ಮಾಹಿತಿ ಅಪ್​ಡೇಟ್ ಮಾಡಿ.
ಹಂತ 4: ಆಯ್ದ ಫೀಲ್ಡ್​ಗಳಲ್ಲಿ ಡೇಟಾ ಭರ್ತಿ ಮಾಡಿ ಮತ್ತು ಕೇಂದ್ರದಲ್ಲಿ ಇರುವ ಅಧಿಕಾರಿಗೆ ಸಲ್ಲಿಸಿ.
ಹಂತ 5: ಬಯೋಮೆಟ್ರಿಕ್ ಮಾಹಿತಿಗಳಾದ ಐರಿಸ್, ಬೆರಳಚ್ಚು, ಫೇಷಿಯಲ್ ಫೋಟೋಗ್ರಾಫ್ ಇಂಥದ್ದನ್ನು ಕೇಳಲಾಗುತ್ತದೆ.
ಹಂತ 6: ಮಾಹಿತಿಯನ್ನು ಅಪ್​ಡೇಟ್ ಮಾಡಿ, ಕೇಂದ್ರದಲ್ಲಿ 100 ರೂಪಾಯಿ ಶುಲ್ಕ ಪಾವತಿಸಿ
ಹಂತ 7: ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಅಕ್​ನಾಲೆಡ್ಜ್​ಮೆಂಟ್ ಸ್ಲಿಪ್ ನೀಡಲಾಗುತ್ತದೆ. ಅದರಲ್ಲಿ ಅಪ್​ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ.
ಹಂತ 8: ಆ ನಂತರ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಆ URN ಬಳಸಬಹುದು. ಒಂದು ವಾರದೊಳಗೆ ಹೊಸ ಆಧಾರ್ ಕಾರ್ಡ್ ಮನೆಗೆ ಬರುತ್ತದೆ.
ಹಂತ 9: UIDAI ಪೋರ್ಟಲ್ ಮೂಲಕ ಕೂಡ ಡೌನ್​ಲೋಡ್ ಮಾಡಬಹುದು. ಲಿಂಕ್: https://uidai.gov.in/my-aadhaar/get-aadhaar.html

ಆಧಾರ್​ ಕಾರ್ಡ್​ನಲ್ಲಿ ಫೋಟೋಗ್ರಾಫ್ ಅಪ್​ಡೇಟ್ ಮಾಡಬೇಕಾದ ಗಮನಿಸಬೇಕಾದ ಅಂಶಗಳಿವು:
1) ಆಧಾರ್ ಕಾರ್ಡ್​ನಲ್ಲಿ ಫೋಟೋ ಬದಲಿಸುವುದಕ್ಕೆ ಯಾವುದೇ ದಾಖಲಾತಿ ಬೇಡ
2) ನೀವು ಯಾವುದೇ ಫೋಟೋಗ್ರಾಫ್ ಸಲ್ಲಿಸುವ ಅಗತ್ಯ ಇಲ್ಲ. ಸ್ಥಳದಲ್ಲೇ ಅಧಿಕಾರಿಗಳು ವೆಬ್​ಕ್ಯಾಮ್ ಬಳಸಿ ಫೋಟೋ ತೆಗೆಯುತ್ತಾರೆ.
3) ಆಧಾರ್​ನಲ್ಲಿ ಮಾಹಿತಿ ಅಪ್​ಡೇಟ್ ಆಗುವುದಕ್ಕೆ 90 ದಿನದ ತನಕ ಸಮಯ ಬೇಕಾಗುತ್ತದೆ.
4) ಅರ್ಜಿ ಸಲ್ಲಿಸಿದ ಮೇಲೆ ನೀಡುವ URN ಮೂಲಕ ಆಧಾರ್ ಅಪ್​ಡೇಟ್​ ಸ್ಥಿತಿ ತಿಳಿಯಬಹುದು.

ಇದನ್ನೂ ಓದಿ: How to check PAN- Aadhaar linking: ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30 ಕೊನೆ ದಿನ; ಇಲ್ಲಿದೆ ಹಂತಹಂತ ವಿವರಣೆ

(How to update photo on Aadhaar card here is the step by step details to follow)

Published On - 1:15 pm, Sat, 5 June 21