ಊಟಕ್ಕೆ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಆ ದಿನಗಳು; ಹಳೆಯ ಕಷ್ಟಗಳನ್ನು ನೆನೆವ ಶ್ರೀಮಂತ ಯುವಕ ಅನುಪಮ್ ಮಿತ್ತಲ್

Inspiring Story of Anupam Mittal: ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಮೂಲಕ ಪ್ರಸಿದ್ಧಿಯಾಗಿರುವ ಯುವ ಉದ್ಯಮಿ ಅನುಪಮ್ ಮಿತ್ತಲ್ ಬಹಳ ಕಷ್ಟದಲ್ಲಿ ಬೆಳೆದು ಬಂದವರು. ದೂರದ ಅಮೆರಿಕದಲ್ಲಿ ಕೈಯಲ್ಲಿ ಕಾಸಿಲ್ಲದೇ ಅದೆಷ್ಟೋ ದಿನ ಹಸಿವಿನಿಂದ ಇದ್ದವರು ಅವರು. ಹಸಿವು ಬಹಳಷ್ಟು ಪಾಠ ಕಲಿಸುತ್ತದೆ ಎಂದು ಹೇಳುವ ಅನುಪಮ್ ಮಿತ್ತಲ್, ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ವಿಯಾಗಿ ಇವತ್ತು ಐಷಾರಾಮಿ ಬದುಕು ತನ್ನದಾಗಿಸಿಕೊಂಡಿದ್ದಾರೆ.

ಊಟಕ್ಕೆ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಆ ದಿನಗಳು; ಹಳೆಯ ಕಷ್ಟಗಳನ್ನು ನೆನೆವ ಶ್ರೀಮಂತ ಯುವಕ ಅನುಪಮ್ ಮಿತ್ತಲ್
ಅನುಪಮ್ ಮಿತ್ತಲ್ ಮತ್ತು ಪತ್ನಿ ಆಂಚಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2024 | 6:37 PM

ಕಷ್ಟಗಳು ಮನುಷ್ಯ ವ್ಯಕ್ತಿತ್ವವನ್ನು ಕಡೆದು ಆತನ ನಿಜ ಸ್ವರೂಪ ನಿರ್ಮಿಸುತ್ತವೆ. ಇವತ್ತು ಜೀವನದಲ್ಲಿ ಬಹಳ ಉನ್ನತ ಮಟ್ಟಕ್ಕೆ ಹೋಗಿರುವ ಅನೇಕ ಜನರು ಆ ಹಾದಿಯಲ್ಲಿ ಅದೆಷ್ಟೋ ಕಷ್ಟಗಳನ್ನು ಎದುರಿಸಿ, ಅವುಗಳಿಂದ ಕುಗ್ಗದೇ ಈಜಿ ಜೈಸಿ ದಡ ಮುಟ್ಟಿದ್ದಾರೆ. ಮುಂದೆ ದಡ ಇದೆ ಎಂಬ ಸತ್ಯ ಅರಿಯದ ಜನರು ಈಜುವ ಶ್ರಮ ಬಿಟ್ಟು ಕಷ್ಟಗಳ ಸಾಗರದಲ್ಲಿ ಮುಳುಗಿ ಹೋಗುತ್ತಾರೆ. ಕಷ್ಟಗಳಿಂದ ಪಾಠ ಕಲಿತು ಬೆಳೆದವರಲ್ಲಿ ಅನುಪಮ್ ಮಿತ್ತಲ್ (Anupam Mittal) ಒಬ್ಬರು. ಐಷಾರಾಮಿ ಪಾರ್ಟಿಗಳನ್ನು ಮಾಡುವ, ಕೋಟಿಗಟ್ಟಲೆ ಮೌಲ್ಯದ ಲಕ್ಷುರಿ ಸ್ಪೋರ್ಟ್ಸ್ ಕಾರುಗಳನ್ನು ಖರೀದಿಸುವ ಹಾಗೂ ಬಹಳ ಚಿಕ್ಕವಯಸ್ಸಿನಲ್ಲೇ ಕೋಟ್ಯಾಧಿಪತಿ ಆಗಿರುವ ಅನುಪಮ್ ಮಿತ್ತಲ್ ಅವರಿಗೆ ಇಂಥದ್ದೊಂದು ಕಷ್ಟದ ಪರಿಸ್ಥಿತಿ ಹಿಂದೆ ಇತ್ತಾ ಎಂದರೆ ಯಾರಿಗಾದರೂ ಅಚ್ಚರಿ ಎನಿಸಬಹುದು.

ಒಂದೇ ಮನೆಯಲ್ಲಿ 20 ಮಂದಿ ಸಂಸಾರ..?

ಅನುಪಮ್ ಮಿತ್ತಲ್ ಕಡುಬಡತನದ ಕುಟುಂಬದವರಲ್ಲ. ಆದರೆ, ಸಾಧಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಮುಂಬೈನಲ್ಲಿ ಅವರ ಕುಟುಂಬ ಒಂದು ಚಿಕ್ಕ ಅಪಾರ್ಟ್ಮೆಂಟ್​ನಲ್ಲಿ ವಾಸವಿತ್ತು. ಹಣಕ್ಕೆ ಬರ ಇದ್ದರೂ ಪ್ರೀತಿಗೆ ಇರಲಿಲ್ಲ ಬರ. 20 ಜನರು ಈ ಸಣ್ಣ ಅಪಾರ್ಟ್ಮೆಂಟ್​ನಲ್ಲಿ ವಾಸಿಸುತ್ತಿದ್ದರು. ಒಂದು ಸಾವಿರ ಚದರಡಿ ವಿಸ್ತೀರ್ಣದ ಮನೆಯಲ್ಲಿ 20 ಮಂದಿ ವಾಸವಿರಬೇಕೆಂದರೆ ಅಡುಗೆ ಕೋಣೆಯೂ ಸೇರಿ ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲಾ ಮಲಗುವುದು ಅನಿವಾರ್ಯ. ಈ ಕಿಷ್ಕಿಂದೆ ಜಾಗದಲ್ಲಿ ವಾಸವಿದ್ದರೂ ಆಟವಾಡಲು ಸದಾ ಜೊತೆ ಇರುವ ಅಣ್ಣ ತಮ್ಮಂದಿರು, ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳ ಮಧ್ಯೆ ಅನುಪಮ್ ಬೆಳೆದರು.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

ಅಮೆರಿಕದಲ್ಲಿ ಹಸಿವಿನ ಅನುಭವ ಕಂಡ ಮಿತ್ತಲ್

ಮುಂಬೈನಲ್ಲಿ ಅಪ್ಪನ ಬಟ್ಟೆ ವ್ಯಾಪಾರ ಒಂದು ಹಂತದ ಬಳಿಕ ಕೈ ಹಿಡಿಯತೊಡಗಿತು. ಅನುಪಮ್ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವ ಭಾಗ್ಯ ಸಿಕ್ಕಿತು. ಆದರೆ, ಓದಿನ ಬಳಿಕ ಅವರಿಗೆ ಸರಿಯಾಗಿ ಕೆಲಸ ಸಿಗಲಿಲ್ಲ. ತಮ್ಮದೇ ಸ್ವಂತವಾಗಿ ಬಿಸಿನೆಸ್ ಮಾಡಬೇಕೆಂದಿದ್ದ ಮಿತ್ತಲ್​ಗೆ ಹಣ ಹೊಂದಿಸುವುದು ಹೇಗೆ ಎಂದ ಪ್ರಶ್ನೆಯಾಗತೊಡಗಿತು. ಕೆಲಸ ಇಲ್ಲ, ಖರ್ಚಿಗೂ ಹಣ ಇಲ್ಲ. ಭಾರತದಲ್ಲಿರುವ ಕುಟುಂಬಕ್ಕೆ ಈ ಸ್ಥಿತಿ ಗೊತ್ತಿಲ್ಲ. ಅವರಲ್ಲಿ ಹಣ ಕೇಳೋಣ ಎಂದರೆ ಅಮೆರಿಕದಲ್ಲಿ ಕೆಲಸ ಮಾಡುತ್ತಿಲ್ಲವಾ ಎಂದು ಕೇಳಿಯಾರು ಎಂಬ ಭಯ. ಹಣ ಇಲ್ಲದ ಕಾರಣ ಅನುಪತ್ ಮಿತ್ತಲ್ ಸಾಕಷ್ಟು ದಿನ ಊಟವಿಲ್ಲದೇ ಹಸಿವಿನಿಂದ ಇದ್ದದ್ದು ಉಂಟು.

‘ನನಗೆ ಮೊದಲ ಬಾರಿಗೆ ಹಸಿವಿನ ಅನುಭವ ಆಯಿತು. ಈ ಅನುಭವ ನಿಮಗೆ ಬಹಳಷ್ಟು ಪಾಠ ಕಲಿಸುತ್ತದೆ,’ ಎಂದು ಹೇಳುತ್ತಾರೆ ಮಿತ್ತಲ್.

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ

ಆದರೆ, ಅಷ್ಟಕ್ಕೆ ಕುಗ್ಗಿ ಅವರು ಭಾರತಕ್ಕೆ ವಾಪಸ್ ಹೋಗಿ ಅಪ್ಪನ ಜವಳಿ ಬಿಸಿನೆಸ್​ನಲ್ಲಿ ಕೈ ಜೋಡಿಸಬಹುದಿತ್ತು. ಆದರೆ, ಅನುಪಮ್ ಮಿತ್ತಲ್ ಛಲದ ಹಾದಿ ಆಯ್ಕೆ ಮಾಡಿಕೊಂಡರು. ಬುದ್ಧಿ ಮತ್ತು ಪರಿಶ್ರಮ ಬಳಸಿ ತಮ್ಮದೇ ದಾರಿ ಕಂಡುಕೊಂಡರು. 25 ವರ್ಷದ ವಯಸ್ಸಿನಲ್ಲೇ ಮಿಲಿಯನೇರ್ ಎನಿಸಿದ್ದಾರೆ. ಇವತ್ತು ಅವರ ಐಷಾರಾಮಿ ಜೀವನ ನೋಡಿದರೆ ಇಂಥದ್ದೊಂದು ಕಷ್ಟದ ದಿನಗಳು ಅವರಿಗೆ ಇದ್ದವಾ ಎನಿಸಬಹುದು. ಕೈ ಕೆಸರಾದರೆ ಬಾಯಿ ಮೊಸರು ಎನ್ನುವುದು ಇದಕ್ಕೆಯೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ