AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rental Rules: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ

Landlord and Tenant Rent Agreement: ಮನೆ ಬಾಡಿಗೆ ನೀಡುವಾಗ ಸಾಮಾನ್ಯವಾಗಿ 11 ತಿಂಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಷ್ಟರಲ್ಲಿ ಮನೆ ಬಾಡಿಗೆ ಇತ್ಯಾದಿ ಹೆಚ್ಚಿಸುವಂತಿಲ್ಲ. ಬಾಡಿಗೆದಾರರನ್ನು ಖಾಲಿ ಮಾಡಿಸಬೇಕೆಂದರೆ ಮೂರು ತಿಂಗಳು ಮುಂಚಿತವಾಗಿ ನೋಟೀಸ್ ನೀಡಬೇಕು. ಏಕಾಏಕಿ ಖಾಲಿ ಮಾಡಿಸುವಂತಿಲ್ಲ. ಬಾಡಿಗೆದಾರರು ಮನೆ ಅಥವಾ ಅದರೊಳಗಿನ ವಸ್ತುವನ್ನು ಹಾಳು ಮಾಡಬಾರದು. ಕೆಟ್ಟುಹೋದರೆ ದುರಸ್ತಿ ಮಾಡಿಸಬೇಕು ಎನ್ನುತ್ತದೆ ನಿಯಮ.

Rental Rules: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ
ಮನೆ ಬಾಡಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2024 | 2:57 PM

Share

ಬೆಂಗಳೂರಿನಂಥ ನಗರಗಳಲ್ಲಿ ಮನೆ ಅಥವಾ ಅಂಗಡಿಗಳನ್ನು ಬಾಡಿಗೆ ನೀಡುವಾಗ ಕರಾರನ್ನು (rental deed) ಕಡ್ಡಾಯವಾಗಿ ಮಾಡಿಕೊಳ್ಳಲಾಗುತ್ತದೆ. ಈ ಬಾಡಿಗೆ ಕರಾರು ಮಾಲೀಕರಿಗೂ ಕ್ಷೇಮ, ಬಾಡಿಗೆದಾರರಿಗೂ ಕ್ಷೇಮಕರ. ಸಾಮಾನ್ಯವಾಗಿ ರೆಂಟಲ್ ಅಗ್ರೀಮೆಂಟ್ 11 ತಿಂಗಳಿಗೆ ಮಾಡಿಸಲಾಗುತ್ತದೆ. 11 ತಿಂಗಳ ಬಳಿಕ ಅಗ್ರೀಮೆಂಟ್ ನವೀಕರಿಸಲಾಗುತ್ತದೆ. ಮಾಲೀಕರು ಮತ್ತು ಬಾಡಿಗೆದಾರರ ಇಬ್ಬರಿಗೂ ಒಂದಷ್ಟು ಬಾಧ್ಯತೆಗಳಿರುತ್ತವೆ. ಭಾರತದಲ್ಲಿ ಬಾಡಿಗೆಯ ನಿಯಮಗಳು ಸಮಗ್ರವಾಗಿಲ್ಲವಾದರೂ ಒಂದಷ್ಟು ಮೂಲಭೂತ ನಿಯಮಗಳನ್ನು ರೂಪಿಸಲಾಗಿದೆ. ಕರ್ನಾಟಕದ ಬಾಡಿಗೆ ನಿಯಮ ಕಾಯ್ದೆಯಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಸ್ಪಷ್ಟ ಕಾನೂನು ಇದೆ. ಬಾಡಿಗೆದಾರರನ್ನು ಖಾಲಿ ಮಾಡಿಸುವ ವಿಚಾರ, ಅಥವಾ ಬಾಡಿಗೆದಾರ ಮನೆ ಖಾಲಿ ಮಾಡುವ ವಿಚಾರದಲ್ಲಿ ಕಾಯ್ದೆಯಲ್ಲಿ ನಿರ್ದಿಷ್ಟ ನಿಯಮಗಳಿವೆ.

ಮನೆ ಮಾಲೀಕರು ಬಾಡಿಗೆದಾರರನ್ನು ಏಕಾಏಕಿ ಖಾಲಿ ಮಾಡಿಸಲು ಆಗುವುದಿಲ್ಲ. ಖಾಲಿ ಮಾಡಿಸುವ ಮುನ್ನ ಬಾಡಿಗೆದಾರರಿಗೆ ಮೂರು ತಿಂಗಳು ಮುಂಚೆ ನೋಟೀಸ್ ಕೊಡಬೇಕು ಎಂದು ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ ಹೇಳುತ್ತದೆ. ಹಾಗೆಯೇ, ಬಾಡಿಗೆದಾರರು ಕೂಡ ಖಾಲಿ ಮಾಡಬೇಕೆಂದರೆ ಮೂರು ತಿಂಗಳು ಮುನ್ನ ಮಾಲೀಕರ ಗಮನಕ್ಕೆ ತರಬೇಕು ಎನ್ನುತ್ತದೆ ನಿಯಮ. ಬಾಡಿಗೆ ವಿಚಾರದಲ್ಲಿ ಇನ್ನೂ ಕೆಲ ಪ್ರಮುಖ ನಿಯಮಗಳನ್ನು ಎಲ್ಲರೂ ತಿಳಿದಿರಬೇಕು. ಅದರ ವಿವರ ಇಲ್ಲಿದೆ…

ಇದನ್ನೂ ಓದಿ: ಎಸ್​ಬಿಎಂನಲ್ಲಿ ಕೇವಲ 2,000 ರೂಗೆ ಎಫ್​ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ

ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1999: ಮಾಲೀಕರ ಜವಾಬ್ದಾರಿಗಳು

  • ಮಾಲೀಕರು ತಮ್ಮ ಮನೆ ಅಥವಾ ಅಂಗಡಿಗಳನ್ನು ರೆಂಟ್ ಅಥಾರಿಟಿ ಬಳಿ ನೊಂದಾಯಿಸಬೇಕು.
  • ಬಾಡಿಗೆ ಕರಾರು ಅಥವಾ ರೆಂಟಲ್ ಡೀಡ್ ಅನ್ನು ಲಿಖಿತ ಸ್ವರೂಪದಲ್ಲಿ ಮಾಡಿಸಿ, ಸರಿಯಾಗಿ ನೊಂದಣಿ ಮಾಡಿಸಿರಬೇಕು.
  • ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬೇಕಿದ್ದರೆ 3 ತಿಂಗಳು ಮುಂಚಿತವಾಗಿ ನೋಟೀಸ್ ಕೊಡಬೇಕು.
  • ಮನೆ ಕಟ್ಟುವಾಗ ಅದರ ಆಸ್ತಿ ಮೌಲ್ಯ ಎಷ್ಟಿತ್ತು, ಮನೆ ಕಟ್ಟಲು ಎಷ್ಟು ಖರ್ಚಾಯಿತು ಅದರ ಆಧಾರದ ಮೇಲೆ ಬಾಡಿಗೆ ಮೊತ್ತ ನಿಗದಿ ಆಗಬೇಕು.
  • ಬಾಡಿಗೆ ನೀಡುವ ಮನೆ ವಾಸಯೋಗ್ಯವಾಗಿರುವಂತಿರಬೇಕು. ಬಾಡಿಗೆ ಜೊತೆಗೆ ಇತರ ಪೂರಕ ಸೌಲಭ್ಯಗಳನ್ನು ಒದಗಿಸಬಹುದಾದರೂ ಅದಕ್ಕೆ ವಿಧಿಸುವ ಶುಲ್ಕ ಬಾಡಿಗೆಯ ಮೊತ್ತದ ಶೇ. 15ಕ್ಕಿಂತ ಹೆಚ್ಚಿರಬಾರದು.
  • ಬಾಡಿಗೆದಾರರಿಗೆ ಅವರ ಜಾತಿ, ಧರ್ಮ, ಲಿಂಗ ಮತ್ತಿತರ ಯಾವುದೇ ವಿಚಾರದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
  • ಬಾಡಿಗೆದಾರರ ಖಾಸಗಿತನದ ಹಕ್ಕಿಗೆ ಚ್ಯುತಿ ಆಗಬಾರದು. ಬಾಡಿಗೆದಾರರ ಅನುಮತಿ ಇಲ್ಲದೇ ಅವರ ಸ್ಥಳಕ್ಕೆ ಹೋಗುವ ಸ್ವಾತಂತ್ರ್ಯ ಮಾಲೀಕರಿಗೆ ಇರುವುದಿಲ್ಲ.
  • ಒಪ್ಪಂದದ 11 ತಿಂಗಳ ಅವಧಿಯಲ್ಲಿ ಬಾಡಿಗೆ ಏರಿಕೆ ಮಾಡುವಂತಿಲ್ಲ.

ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1999: ಬಾಡಿಗೆದಾರರ ಜವಾಬ್ದಾರಿಗಳು

  • ಬಾಡಿಗೆದಾರರು ಒಪ್ಪಂದದಲ್ಲಿ ತಿಳಿಸಿರುವ ಪ್ರಕಾರ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸಬೇಕು.
  • ಬಾಡಿಗೆ ಪಡೆದಿರುವ ಮನೆಯನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗುವುದು ಬಾಡಿಗೆದಾರರ ಕರ್ತವ್ಯ. ಮನೆಯೊಳಗಿನ ಯಾವುದಾದರೂ ವಸ್ತು ರಿಪೇರಿಗೆ ಬಂದರೆ ಅದನ್ನು ತಮ್ಮ ವೆಚ್ಚದಲ್ಲೇ ದುರಸ್ತಿ ಮಾಡಿಸಬೇಕು.
  • ಬಾಡಿಗೆ ಒಪ್ಪಂದದಲ್ಲಿ ತಿಳಿಸಲಾಗಿರುವ ಉದ್ದೇಶಕ್ಕೆ ಮಾತ್ರ ಮನೆ ಬಳಕೆ ಆಗಬೇಕು. ಅಂದರೆ ವಾಸಕ್ಕೆಂದು ಒಪ್ಪಂದವಾಗಿದ್ದರೆ ವಾಸಕ್ಕಷ್ಟೇ ಬಳಕೆಯಾಗಬೇಕು.
  • ಮನೆಯನ್ನು ಬಾಡಿಗೆಗೆ ಪಡೆದು ಅದನ್ನು ಬೇರೆಯವರಿಗೆ ಮರುಬಾಡಿಗೆ ನೀಡಲು ಆಗುವುದಿಲ್ಲ. ಹಾಗೆ ಮಾಡಬೇಕೆಂದಿದ್ದರೆ ಮಾಲೀಕರಿಂದ ಪೂರ್ವಾನುಮತಿ ಪಡೆಯಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ