Chanda Kochhar: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

Bombay High Court Slams CBI: ಐಸಿಐಸಿಐನ ಮಾಜಿ ಸಿಇಒ ಚಂದಾ ಕೋಚರ್ ಮತ್ತವರ ಪತಿ ದೀಪಕ್ ಕೋಚರ್ ಅವರಿಗೆ ಕಳೆದ ವರ್ಷ ನೀಡಲಾಗಿದ್ದ ಜಾಮೀನು ಕ್ರಮವನ್ನು ಹೈಕೋರ್ಟ್ ಸಮರ್ಥಿಸಿಕೊಂಡಿದೆ. ಕೋಚರ್ ದಂಪತಿಯನ್ನು ಬಂಧಿಸಿರುವ ಸಿಬಿಐನಿಂದ ಅಧಿಕಾರ ದುರುಪಯೋಗ ಆಗಿದೆ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚಂದಾ ಕೋಚರ್ ಸಿಇಒ ಆಗಿದ್ದ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್​ನಿಂದ ವಿಡಿಯೋಕಾನ್ ಗ್ರೂಪ್​ಗೆ ಸಾಲ ನೀಡಲಾಗಿತ್ತು. ಇದರಲ್ಲಿ ಅಕ್ರಮ ಆಗಿದೆ ಎಂಬುದು ಆರೋಪ.

Chanda Kochhar: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ
ಚಂದಾ ಕೋಚರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 3:35 PM

ಮುಂಬೈ, ಫೆಬ್ರುವರಿ 19: ಮಾಜಿ ಐಸಿಐಸಿಐ ಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್ (Chanda Kochhar and Deepak Kochhar) ವಿರುದ್ಧದ ಅವ್ಯವಹಾರ ಪ್ರಕರಣವನ್ನು ಸಿಬಿಐ ನಿರ್ವಹಿಸಿದ ರೀತಿಗೆ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ಈ ಪ್ರಕರಣದಲ್ಲಿ ಚಂದಾ ಮತ್ತು ದೀಪಕ್ ಕೋಚರ್ ಅವರನ್ನು ಬಂಧಿಸಿರುವ ಸಿಬಿಐ ಸರಿಯಾಗಿ ಕಾನೂನು ಪಾಲಿಸದೇ ಅಧಿಕಾರ ದುರುಪಯೋಪಡಿಸಿಕೊಂಡಿದೆ ಎಂದು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ (Bombay high court) 2024ರ ಫೆಬ್ರುವರಿ 6ರಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಈ ತೀರ್ಪನ್ನು ಇವತ್ತು ಸೋಮವಾರ (ಫೆ 19) ಬಹಿರಂಗಪಡಿಸಲಾಗಿದೆ.

ಕೋಚರ್ ಅವರನ್ನು ಬಂಧಿಸಲು ಅಗತ್ಯ ಇರುವ ಸಾಕ್ಷ್ಯವನ್ನು ತೋರಿಸಲು ಸಿಬಿಐ ವಿಫಲವಾಗಿದೆ. ಕೋಚರ್ ದಂಪತಿಯ ಬಂಧನ ಅಕ್ರಮ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. 2023ರ ಜನವರಿ 9ರಂದು ಬಾಂಬೆ ಹೈಕೋರ್ಟ್​ನ ಮತ್ತೊಂದು ಪೀಠವು ಕೋಚರ್ ದಂಪತಿಗೆ ಜಾಮೀನು ನೀಡಿತ್ತು. ಕಳೆದ ವಾರದಂದು ನ್ಯಾಯಾಧೀಶರಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ನೋರ್ಗರ್ ಅವರಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಜಾಮೀನು ಆದೇಶವನ್ನು ಎತ್ತಿಹಿಡಿದು ಸಮರ್ಥಿಸಿಕೊಂಡಿದೆ. ಜೊತೆಗೆ, ಸಿಬಿಐಗೂ ಛೀಮಾರಿ ಹಾಕಿದೆ.

ಚಂದಾ ಕೋಚರ್ ಮತ್ತು ದೀಪಕ್ ಕೋಚರ್ ಅವರನ್ನು 2022ರ ಡಿಸೆಂಬರ್ 23ರಂದು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರಿಬ್ಬರು ತಮ್ಮ ವಕೀಲರ ಮೂಲಕ ಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಸಂದೇಶಖಾಲಿ ಪ್ರಕರಣ: ಅಧಿಕಾರಿಗಳ ವಿರುದ್ಧ ಸಂಸತ್ ಸಮಿತಿ ತನಿಖೆಗೆ ಸುಪ್ರೀಂಕೋರ್ಟ್ ತಡೆ

ಚಂದಾ ಕೋಚರ್ ಬಂಧನ ಯಾಕೆ?

ಚಂದಾ ಕೋಚರ್ 2009ರಿಂದ 2018ರವರೆಗೆ ಐಸಿಐಸಿಐ ಬ್ಯಾಂಕ್​ನ ಸಿಇಒ ಆಗಿದ್ದರು. ಅವರ ಪತಿ ದೀಪಕ್ ಕೋಚರ್ ಹಾಗೂ ಕುಟುಂಬ ಸದಸ್ಯರು ನುಪವರ್ ರಿನಿವಬಲ್ಸ್ ಎಂಬ ಕಂಪನಿ ಹೊಂದಿದ್ದಾರೆ. ಅದರಲ್ಲಿ ವಿಡಿಯೋಕಾನ್ ಛೇರ್ಮನ್ ಹೂಡಿಕೆ ಮಾಡಿದ್ದರು. ಆ ಹೂಡಿಕೆಗೆ ಐಸಿಐಸಿಐ ಬ್ಯಾಂಕ್​ನಿಂದ ಸಾಲ ಒದಗಿಸಲಾಗಿತ್ತು. ಇದು ಹಿತಾಸಕ್ತಿ ಸಂಘರ್ಷವಾಗಿದೆ ಎಂಬ ಆರೋಪ ಕೇಳಿಬಂದಿತ್ತು. 2018ರಲ್ಲಿ ಚಂದಾ ಕೋಚರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

2019ರಲ್ಲಿ ಚಂದಾ ಕೋಚರ್ ವಿರುದ್ಧ ಪ್ರಕರಣ ದಾಖಲಾಯಿತು. 2012ರಲ್ಲಿ ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐನಿಂದ 3,250 ಕೋಟಿ ರೂ ಸಾಲ ನೀಡಲಾಗಿತ್ತು. ಇದು ಮರುಪಾವತಿಯಾಗದೇ ಎನ್​ಪಿಎ ಆಗಿ ಉಳಿದಿದೆ. ಈ ಸಾಲ ನೀಡುವಿಕೆಯ ಹಿಂದೆ ಚಂದಾ ಕೋಚರ್ ಕ್ರಿಮಿನಲ್ ಸಂಚು ಇದೆ ಎಂಬುದು ಸಿಬಿಐ ಆರೋಪ.

ಇದನ್ನೂ ಓದಿ: ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್​ಒ ಘಟಕ; 2,300 ಕೋಟಿ ರೂ ಹೂಡಿಕೆ ಸಾಧ್ಯತೆ

ತಮ್ಮ ಪತಿ ದೀಪಕ್ ಕೋಚರ್ ಮತ್ತು ಕುಟುಂಬ ಸದಸ್ಯರಿಗೆ ನೆರವಾಗುವ ಉದ್ದೇಶದಿಂದ ವಿಡಿಯೋಕಾನ್ ಗ್ರೂಪ್​ಗೆ ಚಂದಾ ಕೋಚರ್ ತಮ್ಮ ಸ್ಥಾನಬಲದಿಂದ ಸಾಲ ಕೊಡಿಸಿದ್ದಾರೆ. ಸಾಲ ಮಂಜೂರು ಮಾಡಿದ ಬೋರ್ಡ್​ಗೆ ಚಂದಾ ಅವರೇ ಮುಖ್ಯಸ್ಥೆಯಾಗಿದ್ದರು ಎಂಬುದು ಸಿಬಿಐನ ವಾದ.

ಆದರೆ, ಈ ಆರೋಪವನ್ನು ಚಂದಾ ಕೋಚರ್ ಅಲ್ಲಗಳೆಯುತ್ತಾ ಬಂದಿದ್ದಾರೆ. ಬ್ಯಾಂಕ್​ನಲ್ಲಿ ಸಾಲ ನೀಡಲು ತೆಗೆದುಕೊಳ್ಳಲಾದ ಯಾವುದೇ ನಿರ್ಣಯವು ಒಬ್ಬರಿಂದ ಆಗಿದ್ದಲ್ಲ. ಅಲ್ಲದೇ ಐಸಿಐಸಿಐ ಬ್ಯಾಂಕ್​ನಲ್ಲಿರುವ ವ್ಯವಸ್ಥೆಯಲ್ಲಿ ಈ ರೀತಿ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ ಎಂದು ಚಂದಾ ಕೋಚರ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ