Sugar Production: ಸಕ್ಕರೆ ಬೆಲೆ ಏರಲಿದೆಯಾ? ಭಾರತದಲ್ಲಿ ಕಡಿಮೆ ಆಗಿದೆ ಸಕ್ಕರೆ ಉತ್ಪಾದನೆ

ಭಾರತದಲ್ಲಿ ಸಕ್ಕರೆ ಉತ್ಪಾದನೆ ಈ ಮಾರುಕಟ್ಟೆ ವರ್ಷದಲ್ಲಿ ಶೇ. 10ರಷ್ಟು ಇಳಿಕೆ ಆಗಬಹುದು ಎಂದು ಸಕ್ಕರೆ ಕಾರ್ಖಾನೆಗಳ ಸಂಘಟನೆ ಹೇಳಿದೆ. ಮಾರುಕಟ್ಟೆ ವರ್ಷ ಅರಂಭವಾಗುವ ಅಕ್ಟೋಬರ್ 1ರಿಂದ ಇದೇ ಫೆಬ್ರುವರಿ 15ರವರೆಗೆ ಸಕ್ಕರೆ ಉತ್ಪಾದನೆ 22.36 ಮಿಲಿಯನ್ ಟನ್​ನಷ್ಟಿದೆ. ಶೇ. 2.48ರಷ್ಟು ಉತ್ಪಾದನೆ ಕಡಿಮೆ ಆಗಿದೆ. ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ 4.6 ಮಿಲಿಯನ್ ಟನ್​ನಿಂದ 4.32 ಮಿಲಿಯನ್ ಟನ್​ಗೆ ಇಳಿಕೆ. ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ ಕರ್ನಾಟಕ.

Sugar Production: ಸಕ್ಕರೆ ಬೆಲೆ ಏರಲಿದೆಯಾ? ಭಾರತದಲ್ಲಿ ಕಡಿಮೆ ಆಗಿದೆ ಸಕ್ಕರೆ ಉತ್ಪಾದನೆ
ಕಬ್ಬಿನ ಇಳುವರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 5:27 PM

ನವದೆಹಲಿ, ಫೆಬ್ರುವರಿ 19: ಭಾರತದ ಸಕ್ಕರೆ ಉತ್ಪಾದನೆ (sugar production) ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಭಾರತೀಯ ಸಕ್ಕರೆ ಕಾರ್ಖಾನೆ ಸಂಘಟನೆಯಾದ ಇಸ್ಮಾ ಪ್ರಕಾರ 2023-24ರ ಮಾರುಕಟ್ಟೆ ವರ್ಷದಲ್ಲಿ (Marketing year) ಭಾರತದಲ್ಲಿ ಸಕ್ಕರೆ ಉತ್ಪಾದನೆ 33.05 ಮಿಲಿಯನ್ ಟನ್​ನಷ್ಟು ಆಗಬಹುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10ರಷ್ಟು ಕಡಿಮೆ ಸಕ್ಕರೆ ಉತ್ಪಾದನೆ ಈ ವರ್ಷದ್ದಿರಲಿದೆ. ಅಕ್ಟೋಬರ್ 31ರಿಂದ ಸೆಪ್ಟೆಂಬರ್ 30ರವರೆಗೆ ಮಾರುಕಟ್ಟೆ ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ಬಾರಿಯ ಮಾರ್ಕೆಟಿಂಗ್ ವರ್ಷದಲ್ಲಿ ಫೆಬ್ರುವರಿ 15ರವರೆಗೂ ಸಕ್ಕರೆ ಉತ್ಪಾದನೆ 22.36 ಮಿಲಿಯನ್ ಟನ್​ನಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 22.93 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಅಂದರೆ ಶೇ. 2.48ರಷ್ಟು ಉತ್ಪಾದನೆ ಕುಂಠಿತವಾಗಿದೆ. ಆದರೆ, ಇಡೀ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಶೇ. 10ರಷ್ಟು ಕಡಿಮೆ ಆಗಬಹುದು ಎಂಬುದು ಇಸ್ಮಾ ಅಂದಾಜು.

ಉತ್ತರಪ್ರದೇಶ ಹೊರತುಪಡಿಸಿದರೆ ಸಕ್ಕರೆ ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಇಳುವರಿ ಬಹಳ ಕಡಿಮೆ ಆಗಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಸಕ್ಕರೆ ಉತ್ಪಾದನೆ ಸದ್ಯ ಕಡಿಮೆಗೊಂಡಿದೆ. ಆದರೆ, ಉತ್ತರಪ್ರದೇಶದಲ್ಲಿ ಇದು ಹೆಚ್ಚಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ

ಮಹಾರಾಷ್ಟ್ರ ಅತಿಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ರಾಜ್ಯವಾಗಿದೆ. ಅದು ಬಿಟ್ಟರೆ ಉತ್ತರಪ್ರದೇಶದಲ್ಲಿ ಹೆಚ್ಚು ಸಕ್ಕರೆ ಉತ್ಪಾದನೆ ಆಗುತ್ತದೆ. ಕರ್ನಾಟಕದ್ದು ಮೂರನೇ ಸ್ಥಾನ. ದೇಶಾದ್ಯಂತ 505 ಸಕ್ಕರೆ ಕಾರ್ಖಾನೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.

ಪ್ರಮುಖ ರಾಜ್ಯಗಳಲ್ಲಿ ಅಕ್ಟೋಬರ್ 1ರಿಂದ ಫೆಬ್ರುವರಿ 15ರವರೆಗೆ ಸಕ್ಕರೆ ಉತ್ಪಾದನೆ

  1. ಮಹಾರಾಷ್ಟ್ರ: ಸಕ್ಕರೆ ಉತ್ಪಾದನೆ 8.59 ಮಿಲಿಯನ್ ಟನ್​ನಿಂದ 7.94 ಮಿಲಿಯನ್ ಟನ್​ಗೆ ಇಳಿಕೆ.
  2. ಉತ್ತರಪ್ರದೇಶ: 6.12 ಮಿಲಿಯನ್ ಟನ್​ನಿಂದ 6.77 ಮಿಲಿಯನ್ ಟನ್​ಗೆ ಏರಿಕೆ.
  3. ಕರ್ನಾಟಕ: 4.6 ಮಿಲಿಯನ್ ಟನ್​ನಿಂದ 4.32 ಮಿಲಿಯನ್ ಟನ್​ಗೆ ಇಳಿಕೆ.
  4. ಗುಜರಾತ್: 6.85 ಲಕ್ಷ ಟನ್ ಸಕ್ಕರೆ ಉತ್ಪಾದನೆ
  5. ತಮಿಳುನಾಡು: 4.50 ಲಕ್ಷ ಟನ್

ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

ಇಡೀ ವಿಶ್ವದಲ್ಲಿ 150ರಿಂದ 180 ಮಿಲಿಯನ್ ಟನ್​ನಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ. ಬ್ರೆಜಿಲ್​ನಲ್ಲಿ ಅತಿಹೆಚ್ಚು ಸಕ್ಕರೆ ತಯಾರಾಗುತ್ತದೆ. ಬ್ರೆಜಿಲ್ ಮತ್ತು ಭಾರತದಲ್ಲಿ ಈ ವಿಶ್ವದ ಅರ್ಧದಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!