China: ಬಡ್ಡಿದರ ಇನ್ನಷ್ಟು ಕಡಿಮೆ ಮಾಡಿದ ಚೀನಾ; ವಿಶ್ವದಲ್ಲಿ ಅತ್ಯಂತ ಕಡಿಮೆ ಬಡ್ಡಿ ಇರುವ ದೇಶಗಳ ಪಟ್ಟಿ ಇದು

List of Countries With Lowest interest Rates: ಚೀನಾದ ಕೇಂದ್ರೀಯ ಬ್ಯಾಂಕು ತನ್ನ ಐದು ವರ್ಷದ ಎಲ್​ಪಿಆರ್ ಬಡ್ಡಿದರವನ್ನು ಶೇ. 4.2ರಿಂದ ಶೇ. 3.95ಕ್ಕೆ ಇಳಿಸಲಿದೆ. ಒಂದು ವರ್ಷದ ಎಲ್​ಪಿಆರ್​ನಲ್ಲಿ ಬದಲಾವಣೆ ಮಾಡಲಾಗಿಲ್ಲ. ಜೂನ್ ತಿಂಗಳ ಬಳಿಕ ಮೊದಲ ಬಾರಿಗೆ ಚೀನಾದ ಐದು ವರ್ಷದ ಎಲ್​ಪಿಆರ್ ದರ ಇಳಿಸಲಾಗಿದೆ. ಜಿ20 ದೇಶಗಳ ಪೈಕಿ ಅತ್ಯಂತ ಕಡಿಮೆ ಬಡ್ಡಿದರ ಹೊಂದಿರುವ ದೇಶಗಳ ಸಾಲಿನಲ್ಲಿ ಚೀನಾ ಮೂರನೇ ಸ್ಥಾನದಲ್ಲಿದೆ.

China: ಬಡ್ಡಿದರ ಇನ್ನಷ್ಟು ಕಡಿಮೆ ಮಾಡಿದ ಚೀನಾ; ವಿಶ್ವದಲ್ಲಿ ಅತ್ಯಂತ ಕಡಿಮೆ ಬಡ್ಡಿ ಇರುವ ದೇಶಗಳ ಪಟ್ಟಿ ಇದು
ಚೀನಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2024 | 12:11 PM

ನವದೆಹಲಿ, ಫೆಬ್ರುವರಿ 20: ಮಂದಗೊಳ್ಳುತ್ತಿರುವ ಆರ್ಥಿಕತೆಗೆ ಚುರುಕಿನ ಸ್ಪರ್ಶ ನೀಡಲು ಚೀನಾದಲ್ಲಿ ಬಡ್ಡಿದರ (loan interest rates) ಇಳಿಕೆ ಮಾಡಲಾಗಿದೆ. ಐದು ವರ್ಷಗಳ ಲೋನ್ ಪ್ರೈಮ್ ರೇಟ್ ಅಥವಾ ಎಲ್​ಪಿಆರ್ ದರವನ್ನು ಶೇ. 4.2ರಿಂದ ಶೇ. 3.95ಕ್ಕೆ ಇಳಿಸಲಾಗಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (People’s bank of China) ಈ ಕ್ರಮವನ್ನು ಘೋಷಿಸಿದೆ. ಜೂನ್ ಬಳಿಕ ಮೊದಲ ಬಾರಿಗೆ ಚೀನಾದಲ್ಲಿ ಐದು ವರ್ಷದ ಎಲ್​ಪಿಆರ್ (5-year LPR) ಬಡ್ಡಿದರ ಇಳಿಕೆಯಾಗಿರುವುದು. ಆದರೆ, ಕಾರ್ಪೊರೇಟ್ ಸಾಲಗಳಿಗೆ ಬೆಂಚ್​ಮಾರ್ಕ್ ಆಗಿರುವ ಒಂದು ವರ್ಷದ ಎಲ್​ಪಿಆರ್ ದರ ಶೇ. 3.45ರಲ್ಲಿ ಮುಂದುವರಿದಿದೆ. ಆಗಸ್ಟ್​ನಲ್ಲಿ ಇದರ ಇಳಿಕೆ ಆಗಿತ್ತು.

ಚೀನಾಗೆ ಡೀಫ್ಲೇಶನ್ ಸಮಸ್ಯೆ

ಚೀನಾದಲ್ಲಿ ಬಡ್ಡಿದರ ಕಡಿಮೆಗೊಳಿಸಲು ಎರಡು ಪ್ರಮುಖ ಕಾರಣ. ಒಂದು ಅದರ ಡೀಫ್ಲೇಶನ್ (Deflation) ಸಮಸ್ಯೆ. ಇನ್ನೊಂದು ಮಂದಗೊಳ್ಳುತ್ತಿರುವ ಅರ್ಥಿಕತೆಯನ್ನು ಚುರುಕುಗೊಳಿಸುವುದು. ಹೆಚ್ಚಿನ ದೇಶಗಳಲ್ಲಿ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿದ್ದರೆ, ಚೀನಾದಲ್ಲಿ ನೆಗಟಿವ್ ಹಂತದಲ್ಲಿದೆ. ಅಂದರೆ ಹಣದುಬ್ಬರವಲ್ಲ, ಹಣಕುಸಿತ ಸ್ಥಿತಿ. ಜನವರಿಯಲ್ಲಿ ಅದರ ಹಣದುಬ್ಬರ ಮೈನಸ್ 0.8 ಪ್ರತಿಶತ ಇದೆ.

ಇದನ್ನೂ ಓದಿ: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ

ಚೀನಾದ ಆರ್ಥಿಕತೆ ಬೆಳವಣಿಗೆಗೆ ಪ್ರಮುಖ ಎಂಜಿನ್​ನಂತೆ ಶಕ್ತಿ ನೀಡಿದ್ದ, ಹಾಗೂ ಚೀನಾದ ಆರ್ಥಿಕತೆಯ ಕಾಲುಭಾಗದಷ್ಟಿದ್ದ ರಿಯಲ್ ಎಸ್ಟೇಟ್ ವಲಯ ಅತೀವ ಬಿಕ್ಕಟ್ಟಿಗೆ ಸಿಲುಕಿದೆ. ಬೆಲೆಗಳು ನಿರಂತರವಾಗಿ ಇಳಿಯುತ್ತಿವೆ.

ಅತಿಕಡಿಮೆ ಬಡ್ಡಿದರ ಇರುವ ದೇಶಗಳು

ಜಪಾನ್ ದೇಶದಲ್ಲಿ ಬ್ಯಾಂಕ್ ಸಾಲ ಉಚಿತವಾಗಿ ಸಿಗುತ್ತದೆ. ಬಡ್ಡಿದರ ಅಲ್ಲಿ ಮೈನಸ್ ಶೇ. 0.1 ಇದೆ. ಫಿಜಿ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಬಡ್ಡಿದರ ಶೇ. 1 ಕೂಡ ಇಲ್ಲ. 18 ದೇಶಗಳಲ್ಲಿ ವಾರ್ಷಿಕ ಬಡ್ಡಿದರ ಶೇ. 3 ಹಾಗೂ ಅದಕ್ಕಿಂತಲೂ ಕಡಿಮೆ ಇದೆ. ಜಪಾನ್, ಸ್ವಿಟ್ಜರ್​ಲೆಂಡ್, ಥಾಯ್ಲೆಂಡ್, ಮಲೇಷ್ಯಾ ದೇಶಗಳು ಈ ಪಟ್ಟಿಯಲ್ಲಿವೆ. ಸ್ವಿಟರ್​ಲ್ಯಾಂಡ್​ನಲ್ಲಿ ಬ್ಯಾಂಕ್ ಬಡ್ಡಿದರ ಶೇ 1.75 ಮಾತ್ರವೇ ಇದೆ. ಜಿ20 ದೇಶಗಳ ಪೈಕಿ ಕಡಿಮೆ ಬಡ್ಡಿದರ ಹೊಂದಿದ ಶ್ರೇಣಿಯಲ್ಲಿ ಚೀನಾ ಮೂರನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

ಕಡಿಮೆ ಬಡ್ಡಿದರ ಇರುವ ದೇಶಗಳ ಪಟ್ಟಿ

  1. ಜಪಾನ್: ಮೈನಸ್ ಶೇ. 0.1ರಷ್ಟು ಬಡ್ಡಿ
  2. ಫಿಜಿ: ಶೇ. 0.25
  3. ಕಾಂಬೋಡಿಯಾ: ಶೇ. 0.89
  4. ಕೇಪ್ ವೆರ್ಡೆ: ಶೇ. 1.25
  5. ಸ್ವಿಟ್ಜರ್​ಲ್ಯಾಂಡ್: ಶೇ. 1.75
  6. ತೈವಾನ್: ಶೇ. 1.88
  7. ಬಾರ್ಬಡಾಸ್: ಶೇ. 2
  8. ಪಪುವಾ ನ್ಯೂ ಗಿನಿಯಾ: ಶೇ. 2
  9. ಸೇಶೆಲೆಸ್: ಶೇ. 2
  10. ಬೆಲಿಜೆ: ಶೇ. 2.25

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ