Inspiring: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

NVidia CEO Jensen Huang's Inspiring Story: ಅಡ್ವಾನ್ಸ್ಡ್ ಚಿಪ್ ತಯಾರಿಸುವ ಕಂಪನಿಯಾದ ಎನ್​ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ವಿಶ್ವದ 23ನೇ ಅತಿಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಾಲೇಜು ಓದಿನ ಬಳಿಕ ಹೋಟೆಲ್​ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗಲೇ ಸ್ನೇಹಿತರ ಜೊತೆ ಎನ್​ವಿಡಿಯಾ ಕಂಪನಿ ಸ್ಥಾಪಿಸಿದ್ದರು. ತೈವಾನ್ ಸಂಜಾತರಾದ ಜೆನ್ಸೆನ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಕಿಂಗ್ ಎನಿಸಿದ್ದಾರೆ. ಎನ್​ವಿಡಿಯಾ ತಯಾರಿಸುವ ಚಿಪ್ ಎಐ ಕ್ಷೇತ್ರದ ಬೆಳವಣಿಗೆಗೆ ಸಹಾಯಕವಾಗಿದೆ.

Inspiring: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ
ಜೆನ್ಸೆನ್ ಹುವಾಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 6:17 PM

ಮನಸು ಮರ್ಕಟ ಎನ್ನುವವರು ಇದ್ದಾರೆ. ಹಾಗೆಯೇ, ಮನಸ್ಸಿದ್ದರೆ ಮಾರ್ಗ, ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವವರೂ ಇದ್ದಾರೆ. ಈ ಎರಡನೇ ಗುಂಪಿಗೆ ಸೇರಿದವರು ಎನ್​ವಿಡಿಯಾ (NVidia) ಸಿಇಒ ಜೆನ್ಸೆನ್ ಹುವಾಂಗ್. ಹೋಟೆಲ್​ನಲ್ಲಿ ಸಾಧಾರಣ ವೈಟರ್ ಕೆಲಸ ಮಾಡುತ್ತಿದ್ದ ಇವರು ಇವತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ರೆಕ್ಕೆಪುಕ್ಕ ಕೊಡುವ ಅತ್ಯಾಧುನಿಕ ಚಿಪ್​ಗಳ ತಯಾರಿಕೆಯಲ್ಲಿ ಕಿಂಗ್ ಎನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇವರು ಸ್ಥಾಪಿಸಿರುವ ಎನ್​​ವಿಡಿಯಾದ ಮಾರುಕಟ್ಟೆ ಬಂಡವಾಳ (Market capital) ರಿಲಾಯನ್ಸ್ ಇಂಡಸ್ಟ್ರೀಸ್​ಗಿಂತ ಎಂಟು ಪಟ್ಟು ದೊಡ್ಡದು. ವೈಯಕ್ತಿಕವಾಗಿ ಜೆನ್ಸೆನ್ ಹುವಾಂಗ್ (Jensen Huang) 64 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದು, ವಿಶ್ವದಲ್ಲೇ 23ನೇ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ.

ಹೋಟೆಲ್​ನಲ್ಲಿ ವೈಟರ್ ಕೆಲಸದಿಂದ…

ಜೆನ್ಸೆನ್ ಹುವಾಂಗ್ ಅವರದ್ದು ತೀರಾ ಬಡತನ ಇದ್ದ ಕುಟುಂಬವಲ್ಲ. ತೈವಾನ್​ನಲ್ಲಿ 1963ರಲ್ಲಿ ಜನಿಸಿದ ಹುವಾಂಗ್ ಐದು ವರ್ಷ ವಯಸ್ಸಿದ್ದಾಗ ಕುಟುಂಬದ ಜೊತೆ ಥಾಯ್ಲೆಂಡ್​ಗೆ ವಲಸೆ ಹೋದರು. ಒಂಬತ್ತನೇ ವಯಸ್ಸಿನಲ್ಲಿ ತನ್ನ ಸಹೋದರನ ಜೊತೆ ಅಮೆರಿಕದ ವಾಷಿಂಗ್ಟನ್​ನಲ್ಲಿದ್ದ ನಂಟರ ಮನೆಗೆ ಹೋದರು. ಕೆಂಟುಕಿ, ಪೋರ್ಟ್​ಲ್ಯಾಂಡ್​ನಲ್ಲಿ ಓದಿದ ಬಳಿಕ ಅವರು ಡೆನಿಸ್ ರೆಸ್ಟೋರೆಂಟ್​ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದರು.

ಅಮೆರಿಕದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಾಲ ತೀರಿಸಲು ಈ ರೀತಿ ಸಣ್ಣ ಪುಟ್ಟ ಕೆಲಸ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಜೆನ್ಸೆನ್ ಹುವಾಂಗ್ ಕೂಡ ಹೋಟೆಲ್​ನಲ್ಲಿ ಕೆಲಸ ಮಾಡಿದ್ದಿರಬಹುದು. ಕುತೂಹಲವೆಂದರೆ ಇಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದಾಗಲೇ ಹುವಾಂಗ್ ಅವರು ಎನ್​​ವಿಡಿಯಾ ಕಂಪನಿಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ

ಎನ್​ವಿಡಿಯಾ ಹೆಸರಿನ ಹಿಂದಿನ ಕುತೂಹಲದ ವಿಚಾರ…

1993ರಲ್ಲಿ ಜೆನ್ಸೆನ್ ಹುವಾಂಗ್, ಕ್ರಿಸ್ ಮಲಾಚೋವಸ್ಕಿ ಮತ್ತು ಕರ್ಟಿಸ್ ಪ್ರಿಯೆಮ್ ಅವರು ಎನ್​ವಿಡಿಯಾ ಕಂಪನಿಯನ್ನು ಸ್ಥಾಪಿಸಿದರು. ಜೆನ್ಸೆನ್ ಕೆಲಸ ಮಾಡುತ್ತಿದ್ದ ಡೆನಿಸ್​ನ ರಸ್ತೆಬದಿ ರೆಸ್ಟೋರೆಂಟ್​ನಲ್ಲೇ ಕೂತು ಈ ಮೂವರು ಸ್ನೇಹಿತರು ಹೊಸ ಕಂಪನಿ ಹುಟ್ಟುಹಾಕಿದ್ದರು.

ಮೊದಲಿಗೆ ಇದಕ್ಕೆ ಹೆಸರೇ ಇರಲಿಲ್ಲ. ಮೂರು ಮಂದಿ ಸೇರಿಕೊಂಡು ಚರ್ಚಿಸಿ ಎನ್​ವಿ ಎಂಬ ಆರಂಭಿಕ ಪದಗಳನ್ನು ನಿರ್ಧರಿಸಿದರು. ಎನ್​ವಿ ಎಂದರೆ ನೆಕ್ಸ್ಟ್​ ವರ್ಶನ್ ಎಂಬುದರ ಸಂಕ್ಷಿಪ್ತ ರೂಪ. ಬಳಿಕ ಎನ್​ವಿ ಅಕ್ಷರಳಿರುವ ಎಲ್ಲಾ ಪದಗಳನ್ನೂ ಡಿಕ್ಷನರಿಯಲ್ಲಿ ಜಾಲಾಡಿದರು. ಆಗ ಅವರ ಕಣ್ಣಿಗೆ ಬಿದ್ದದ್ದು invidia ಎಂಬ ಲ್ಯಾಟಿನ್ ಪದ. ಅದರ ಅರ್ಥ ಅಸೂಯೆ. ಬೇರೆಯವರು ಅಸೂಯೆ ಪಡುವಂಥ ಕಂಪನಿ ತಮ್ಮದಾಗಬೇಕೆಂದು ಬಯಸ್ಸಿದ್ದರು ಹುವಾಂಗ್ ಅಂಡ್ ಫ್ರೆಂಡ್ಸ್.

ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

ಆಗಿನ ಕಾಲಕ್ಕೆ ಈ ಮೂವರು ಬ್ಯಾಂಕಿನಲ್ಲಿ 40,000 ಡಾಲರ್ ಸಾಲ ಪಡೆದು ಕಂಪನಿಗೆ ಹಾಕಿದ್ದರು. ಆ ಬಳಿಕ ಒಂದಷ್ಟು ಹೂಡಿಕೆಗಳು ಹರಿದುಬಂದವು. ಚಿಪ್​ಗಳ ತಯಾರಿಕೆಯಲ್ಲಿ ಬಹಳ ದೊಡ್ಡ ಕಂಪನಿಯಾಗಿ ಬೆಳೆದಿದೆ. ಅಡ್ವಾನ್ಸ್ಡ್ ಚಿಪ್ಸ್ ತಯಾರಿಸುತ್ತದೆ. ಎಐ ಕಂಪ್ಯೂಟಿಂಗ್​ಗೆ ಈ ಚಿಪ್​ಗಳನ್ನು ಬಳಸಲಾಗುತ್ತದೆ. ಈ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬೆಳವಣಿಗೆಗೆ ಎನ್​ವಿಡಿಯಾ ಪಾತ್ರ ಬಹಳ ಗಮನಾರ್ಹವಾದುದು.

ಎನ್​ವಿಡಿಯಾದ ಮಾರುಕಟ್ಟೆ ಬಂಡವಾಳ ಫೇಸ್ಬುಕ್, ಗೂಗಲ್, ಅಮೇಜಾನ್​ಗಿಂತಲೂ ದೊಡ್ಡದಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಕಂಪನಿ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್