ರೂಪಾಯಿ ಕುಸಿತವಲ್ಲ, ಡಾಲರ್​​ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

| Updated By: ರಶ್ಮಿ ಕಲ್ಲಕಟ್ಟ

Updated on: Oct 16, 2022 | 6:24 PM

ನಾನು ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಇದು ವಾಸ್ತವದ ಸಂಗತಿ. ಭಾರತದ ರೂಪಾಯಿ ಬಹುಶಃ ಈ ಡಾಲರ್ ದರ ಏರಿಕೆಯನ್ನು ತಡೆದುಕೊಂಡಿದೆ. ಭಾರತೀಯ ರೂಪಾಯಿ ಇತರ ಅನೇಕ ಉದಯೋನ್ಮುಖ ಮಾರುಕಟ್ಟೆ...

ರೂಪಾಯಿ ಕುಸಿತವಲ್ಲ, ಡಾಲರ್​​ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ರೂಪಾಯಿಯ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿದ್ದು ರೂಪಾಯಿ (rupee) ಕುಸಿಯುತ್ತಿದೆ ಎಂದು ನಾನು ನೋಡುವುದಿಲ್ಲ, ಡಾಲರ್ (dollar) ಬಲಗೊಳ್ಳುತ್ತಿದೆ ಎಂದು ಹೇಳಿದರು. ಅಮೆರಿಕಕ್ಕೆ ಅಧಿಕೃತ ಭೇಟಿಯಲ್ಲಿ 24 ದ್ವಿಪಕ್ಷೀಯ ಮಾತುಕತೆ ನಡೆಸಿರುವ ಸೀತಾರಾಮನ್ ಸುದ್ದಿ ಸಂಸ್ಥೆ ಎಎನ್‌ಐ ಪ್ರಶ್ನೆಗೆ ಉತ್ತರಿಸುತ್ತಾ, “ಡಾಲರ್ ನಿರಂತರವಾಗಿ ಬಲಗೊಳ್ಳುತ್ತಿದೆ. ಆದ್ದರಿಂದ ನಿಸ್ಸಂಶಯವಾಗಿ, ಇತರ ಎಲ್ಲಾ ಕರೆನ್ಸಿಗಳು ಬಲಗೊಳ್ಳುತ್ತಿರುವ ಡಾಲರ್ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ನಾನು ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಇದು ವಾಸ್ತವದ ಸಂಗತಿ. ಭಾರತದ ರೂಪಾಯಿ ಬಹುಶಃ ಈ ಡಾಲರ್ ದರ ಏರಿಕೆಯನ್ನು ತಡೆದುಕೊಂಡಿದೆ. ಭಾರತೀಯ ರೂಪಾಯಿ ಇತರ ಅನೇಕ ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವೆ ಹೇಳಿದ್ದಾರೆ. ಈ ವಾರದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ 82.68 ಕ್ಕೆ ಕುಸಿಯಿತು.

G20 ಭಾರತದ ಅಧ್ಯಕ್ಷತೆ ಬಗ್ಗೆ ಮಾತನಾಡಿದ ಅವರು ಸಾಕಷ್ಟು ಸವಾಲುಗಳಿರುವ ಸಮಯದಲ್ಲಿ ನಾವು ಅಧ್ಯಕ್ಷ ಸ್ಥಾನವನ್ನು ತೆಗೆದುಕೊಳ್ಳುತ್ತಿದ್ದೇವೆ, ನಾವು ಇಡೀ ವಿಷಯವನ್ನು ಹೇಗೆ ಉತ್ತಮವಾಗಿ ನ್ಯಾವಿಗೇಟ್ ಮಾಡಬಹುದು ಎಂಬುದನ್ನು ನೋಡಲು ನಾವು ಸದಸ್ಯತ್ವದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.

ನಾವು G20 ಸಭೆಯಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ವಿಷಯಗಳನ್ನು ತರಲು ಬಯಸುತ್ತೇವೆ. ಇದರಿಂದ ಸದಸ್ಯರು ಅದನ್ನು ಚರ್ಚಿಸಬಹುದು ಎಂದು ಸೀತಾರಾಮನ್ ಹೇಳಿದರು. ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಪ್ರಶಂಸೆ ಪಡೆದ ಭಾರತದ ಡಿಜಿಟಲ್ ಸಾಧನೆಗಳ ಬಗ್ಗೆ ಮಾತನಾಡಿದ ಹಣಕಾಸು ಸಚಿವರು, ಅನೇಕ ಜಿ 20 ಸದಸ್ಯರು ಭಾರತವು ಆಧಾರ್ ಮುಂತಾದ ಡಿಜಿಟಲ್ ಯಶಸ್ಸನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.


ಇಂದು ವಿಶ್ವಬ್ಯಾಂಕ್ ಅಧ್ಯಕ್ಷರೊಂದಿಗಿನ ನನ್ನ ಭೇಟಿಯ ಸಂದರ್ಭದಲ್ಲಿಯೂ ಸಹ, ಭಾರತದಲ್ಲಿ ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಸಾಮಾನ್ಯ ಜನರು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ನಾವು ಪ್ರದರ್ಶಿಸಬೇಕು. ಅಲ್ಲದೆ ಅದನ್ನು ವಿಶ್ವದ ಇತರ ಭಾಗಗಳಿಗೆ ಕೊಂಡೊಯ್ಯಲು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಂತೋಷವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಿತ್ತ ಸಚಿವರ ಹೇಳಿಕೆ ಅಸಂಬದ್ಧ:ಎನ್‌ಸಿಪಿ

ರೂಪಾಯಿ ಕುಸಿಯುತ್ತಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು “ಅಸಂಬದ್ಧ” ಎಂದು ಹೇಳಿರುವ ಎನ್‌ಸಿಪಿ, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಪ್ರಯತ್ನಗಳನ್ನು ಮಾಡುವ ಬದಲು ಅವರು ತಮ್ಮ ಸಚಿವಾಲಯದ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದಿದೆ.

ರೂಪಾಯಿ ಕುಸಿಯುತ್ತಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಅಸಂಬದ್ಧ. ಇಂತಹ ಹೇಳಿಕೆಗಳನ್ನು ನೀಡುವುದರಿಂದ ನಮ್ಮ ದೇಶದ ಆರ್ಥಿಕತೆಯನ್ನು ನೋಡಿಕೊಳ್ಳುವಲ್ಲಿ ಅವರ ಸರ್ಕಾರದ ವೈಫಲ್ಯವನ್ನು ಮರೆ ಮಾಚುವುದಕ್ಕೆ ಆಗುವುದಿಲ್ಲ.ಅವರು ತಮ್ಮ ಸಚಿವಾಲಯವನ್ನು ನೋಡಿಕೊಳ್ಳುವಲ್ಲಿ ಹೆಚ್ಚು ಗಮನಹರಿಸಬೇಕು ಮತ್ತು 2024 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಕಡಿಮೆ ಗಮನಹರಿಸಬೇಕು. ಅವರು ಹಣಕಾಸು ಸಚಿವೆ ಮತ್ತು ಭಾರತದ ಆರ್ಥಿಕತೆಯನ್ನು ಮೊದಲು ರಕ್ಷಿಸುವುದು ಅವರ ಕರ್ತವ್ಯ ಎಂಬುದನ್ನು ಅವರು ಮರೆಯಬಾರದು ಎಂದು ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

Published On - 6:23 pm, Sun, 16 October 22