ಐಬಿಎಂನಲ್ಲಿ ಲೇ ಆಫ್; ಏಳು ನಿಮಿಷದ ಸಭೆಯಲ್ಲಿ ಪ್ರಕಟವಾದ ನಿರ್ಧಾರಕ್ಕೆ ಬೆಚ್ಚಿಬಿದ್ದ ಉದ್ಯೋಗಿಗಳು

|

Updated on: Mar 14, 2024 | 2:26 PM

IBM layoffs: ಅಮೆರಿಕ ಮೂಲದ ಐಬಿಎಂ ಸಂಸ್ಥೆ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದಲ್ಲಿ ಲೇ ಆಫ್ ನಡೆಸಲು ನಿರ್ಧರಿಸಿದೆ. ಕಮ್ಯೂನಿಕೇನ್ಸ್ ವಿಭಾಗದ ಪ್ರಮುಖರು ನಡೆಸಿದ ಏಳು ನಿಮಿಷದ ಸಭೆಯಲ್ಲಿ ಉದ್ಯೋಗಿಗಳಿಗೆ ಈ ನಿರ್ಧಾರ ತಿಳಿಸಲಾಗಿದೆ. ಆದರೆ ಎಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಜನವರಿಯಲ್ಲಿ ಸಿಕ್ಕ ಸುಳಿವು ಪ್ರಕಾರ, 3,900 ಮಂದಿಯನ್ನು ಲೇ ಆಫ್ ಮಾಡುವ ಪ್ಲಾನ್ ಐಬಿಎಂನಲ್ಲಿ ಇತ್ತೆನ್ನಲಾಗಿದೆ.

ಐಬಿಎಂನಲ್ಲಿ ಲೇ ಆಫ್; ಏಳು ನಿಮಿಷದ ಸಭೆಯಲ್ಲಿ ಪ್ರಕಟವಾದ ನಿರ್ಧಾರಕ್ಕೆ ಬೆಚ್ಚಿಬಿದ್ದ ಉದ್ಯೋಗಿಗಳು
ಐಬಿಎಂ
Follow us on

ನವದೆಹಲಿ, ಮಾರ್ಚ್ 14: ಐಟಿ ಸಂಸ್ಥೆ ಐಬಿಎಂ ಮತ್ತೊಮ್ಮೆ ಲೇ ಆಫ್ (layoffs) ಕ್ರಮ ಕೈಗೊಂಡಿದೆ. ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದಲ್ಲಿನ ಉದ್ಯೋಗಿಗಳ ಲೇ ಆಫ್ ಆಗಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಐಬಿಎಂನ ಚೀಫ್ ಕಮ್ಯೂನಿಕೇಶನ್ಸ್ ಆಫೀಸರ್ ಜೋನಾಥನ್ ಅಡಾಶೆಕ್ ಅವರು ತಮ್ಮ ವಿಭಾಗದ ಉದ್ಯೋಗಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತಿಳಿಸಿದರೆನ್ನಲಾಗಿದೆ. ಕೇವಲ ಏಳು ನಿಮಿಷ ನಡೆದ ಈ ಚುಟುಕು ಸಭೆಯಲ್ಲಿ ಲೇ ಆಫ್ ನಿರ್ಧಾರ ತಿಳಿದು ಉದ್ಯೋಗಿಗಳಿಗೆ ಶಾಕ್ ಆಗಿತ್ತು.

ಆದರೆ, ಐಬಿಎಂನಿಂದ ಈ ಲೇ ಆಫ್ ನಿರ್ಧಾರ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ, ಐಬಿಎಂನಲ್ಲಿ ಉದ್ಯೋಗಕಡಿತ ಅಗಬಹುದು ಎಂಬ ಸುಳಿವು ಇತ್ತೀಚೆಗೆ ಸಿಕ್ಕಿತ್ತು. ಸಿಇಒ ಅರವಿಂದ್ ಕೃಷ್ಣ ಅವರು ಮುಂಬರುವ ವರ್ಷಗಳಲ್ಲಿ ಹೊಸ ನೇಮಕಾತಿ ಬದಲು ವಿವಿಧ ಹುದ್ದೆಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ನಿಭಾಯಿಸುವ ಪ್ರಯತ್ನ ಆಗಲಿದೆ ಎಂದು ಡಿಸೆಂಬರ್​ನಲ್ಲಿ ಹೇಳಿದ್ದರು.

ಇದನ್ನೂ ಓದಿ: ಸರ್ಕಾರದ ಸಿಡಾಟ್ ಅಭಿವೃದ್ದಿಪಡಿಸಿದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್​ಗೆ ಪೇಟೆಂಟ್; ಇದು ಸ್ವಾವಲಂಬಿ ಭಾರತದ ಫಲಶೃತಿ ಎಂದ ಸಚಿವ ವೈಷ್ಣವ್

ಅವರ ಪ್ರಕಾರ ಐದು ವರ್ಷದಲ್ಲಿ ಶೇ. 30ರಷ್ಟು ಉದ್ಯೋಗಗಳ ಕೆಲಸವನ್ನು ಎಐ ಮತ್ತು ಆಟೊಮೇಶನ್​ ಮಾಡಲಿವೆಯಂತೆ. ಅದರ ಭಾಗವಾಗಿ ಲೇ ಆಫ್ ಆಗಿದೆಯಾ ತಿಳಿದುಬಂದಿಲ್ಲ.

ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಲೇ ಆಫ್​ನಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ ಹಣ ಉಳಿತಾಯವಾಗಬಹುದು. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ಹೇಳಿದ್ದರು.

ಇದನ್ನೂ ಓದಿ: ವಯಾಕಾಮ್18ನಲ್ಲಿ ಶೇ. 13ರಷ್ಟು ಷೇರುಪಾಲು ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

2022ರಿಂದ ಈಚೆ ವಿವಿಧ ಟೆಕ್ ಕಂಪನಿಗಳು ಬಹಳಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿವೆ. ಈ ವರ್ಷ ಎರಡು ತಿಂಗಳಲ್ಲಿ 204 ಟೆಕ್ ಕಂಪನಿಗಳು ಉದ್ಯೋಗಕಡಿತ ಕೈಗೊಂಡಿವೆ. ಅಂದಾಜು 50,000 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ