AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPI Inflation: ಹೋಲ್​ಸೇಲ್ ಹಣದುಬ್ಬರ ಶೇ. 0.27ರಿಂದ ಶೇ. 0.20ಕ್ಕೆ ಇಳಿಕೆ

Wholesale Price based Inflation: ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ದರ ಜನವರಿಯಲ್ಲಿ ಶೇ. 0.27ರಷ್ಟು ಇದ್ದದ್ದು ಫೆಬ್ರುವರಿಯಲ್ಲಿ ಶೇ. 0.20ಕ್ಕೆ ಇಳಿದಿದೆ. ರೀಟೇಲ್ ಹಣದುಬ್ಬರ ಇಳಿಕೆಗೆ ಅನುಗುಣವಾಗಿ ಇದೂ ಆಗಿದೆ. ಜನವರಿಯಲ್ಲಿ ಶೇ. 5.10ರಷ್ಟಿದ್ದ ರೀಟೇಲ್ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 5.09ಕ್ಕೆ ಇಳಿದಿದೆ. ಈ ಬಾರಿ ಹೋಲ್​ಸೇಲ್ ಮಾರುಕಟ್ಟೆಯಲ್ಲಿ ಆಹಾರವಸ್ತು, ತರಕಾರಿ, ಬೇಳೆಕಾಳುಗಳ ಬೆಲೆ ಸ್ವಲ್ಪ ಹೆಚ್ಚಿದೆ. ಆದರೆ, ಇಂಧನ ಇತ್ಯಾದಿ ಬೆಲೆ ಸ್ವಲ್ಪ ತಗ್ಗಿದೆ.

WPI Inflation: ಹೋಲ್​ಸೇಲ್ ಹಣದುಬ್ಬರ ಶೇ. 0.27ರಿಂದ ಶೇ. 0.20ಕ್ಕೆ ಇಳಿಕೆ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 14, 2024 | 3:29 PM

Share

ನವದೆಹಲಿ, ಮಾರ್ಚ್ 14: ಸಗಟು ಮಾರಾಟ ದರ ಆಧಾರಿತ ಹಣದುಬ್ಬರ (WPI based Inflation) ಫೆಬ್ರುವರಿಯಲ್ಲಿ ಶೇ. 0.2ಕ್ಕೆ ಇಳಿದಿದೆ. ಜನವರಿಯಲ್ಲಿ ಹೋಲ್​ಸೇಲ್ ಇನ್​ಫ್ಲೇಶನ್ ಶೇ. 0.27ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಹಣದುಬ್ಬರ ಅಲ್ಪ ಇಳಿಕೆ ಆಗಿದೆ. ರೀಟೇಲ್ ಹಣದುಬ್ಬರದಲ್ಲೂ (retail inflation) ಈ ಬಾರಿ ಸ್ವಲ್ಪ ಕಡಿಮೆ ಆಗಿದೆ. ಶೇ. 5.10ರಷ್ಟಿದ್ದ ರೀಟೇಲ್ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 5.09ಕ್ಕೆ ಇಳಿದಿದೆ.

ಭಾರತದಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ದರ 2023ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಮೈನಸ್​ನಲ್ಲಿ ಇತ್ತು. ನವೆಂಬರ್​ನಲ್ಲಿ ಸೊನ್ನೆಗಿಂತ ಮೇಲೆ ಏರಿತ್ತು. 2023ರ ನವೆಂಬರ್​ನಲ್ಲಿ ಹೋಲ್​ಸೇಲ್ ಹಣದುಬ್ಬರ ಶೇ. 0.26 ಇತ್ತು. ಫೆಬ್ರುವರಿಯವರೆಗೂ ಈ ದರದಲ್ಲಿ ಹೆಚ್ಚಿನ ವ್ಯತ್ಯಯಗಳಾಗಿಲ್ಲ.

ಆಹಾರ ವಸ್ತು, ತರಕಾರಿ, ಬೇಳೆ ಕಾಳುಗಳ ಬೆಲೆ ಫೆಬ್ರುವರಿಯಲ್ಲಿ ತುಸು ಏರಿಕೆ ಆಗಿದೆ. ಇಂಧನ, ತಯಾರಿಕಾ ಉತ್ಪನ್ನಗಳು ಮೊದಲಾದವರುಗಳ ಬೆಲೆ ತುಸು ಕಡಿಮೆ ಆಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ

ಆಹಾರದ ಹಣದುಬ್ಬರ ಜನವರಿಯಲ್ಲಿ ಶೇ. 6.85ರಷ್ಟು ಇದ್ದದ್ದು ಫೆಬ್ರುವರಿಯಲ್ಲಿ ಶೇ. 6.95ಕ್ಕೆ ಏರಿದೆ. ತರಕಾರಿಯ ಹಣದುಬ್ಬರ ಜನವರಿಯಲ್ಲಿ ಶೇ. 19.71 ಇದ್ದದ್ದು ಫೆಬ್ರುವರಿಯಲ್ಲಿ ಶೇ. 19.78ಕ್ಕೆ ಏರಿದೆ. ಜನವರಿಯಲ್ಲಿ ಶೇ. 16.06 ಬೇಳೆ ಕಾಳುಗಳಲ್ಲಿನ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 18.48ಕ್ಕೆ ಏರಿದೆ.

ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಬೆಲೆ ಏರಿಕೆ ಫೆಬ್ರುವರಿಯಲ್ಲಿ ಮೈನಸ್ ಶೇ. 0.51ರಷ್ಟು ಇತ್ತು. ಫೆಬ್ರುವರಿಯಲ್ಲಿ ಇದು ಮೈನಸ್ ಶೇ. 1.59ರಷ್ಟಾಗಿದೆ.

ಇದನ್ನೂ ಓದಿ: ಸರ್ಕಾರದ ಸಿಡಾಟ್ ಅಭಿವೃದ್ದಿಪಡಿಸಿದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್​ಗೆ ಪೇಟೆಂಟ್; ಇದು ಸ್ವಾವಲಂಬಿ ಭಾರತದ ಫಲಶೃತಿ ಎಂದ ಸಚಿವ ವೈಷ್ಣವ್

ರೀಟೇಲ್ ಮತ್ತು ಹೋಲ್​ಸೇಲ್ ಹಣದುಬ್ಬರಗಳ ವ್ಯತ್ಯಾಸವೇನು?

ರೀಟೇಲ್ ಹಣದುಬ್ಬರವು ಚಿಲ್ಲರೆ ಮಾರುಕಟ್ಟೆಯಲ್ಲಿನ ಬೆಲೆಗಳ ಆಧಾರಿತವಾಗಿರುತ್ತದೆ. ಡಬ್ಲ್ಯುಪಿಐ ಹಣದುಬ್ಬರವು ಸಗಟು ಅಥವಾ ಹೋಲ್​ಸೇಲ್ ಮಾರುಕಟ್ಟೆಯ ಬೆಲೆಯನ್ನು ಆಧರಿಸಿದ್ದಾಗಿದೆ. ಎರಡೂ ಕೂಡ ಹಣದುಬ್ಬರದ ಸೂಚಕಗಳಾಗಿದ್ದರೂ ರೀಟೇಲ್ ಹಣದುಬ್ಬರವನ್ನು ಆರ್​ಬಿಐ ತನ್ನ ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ