AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Payment Bank: ಮಾರ್ಚ್ 15ಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಂತ್ಯ; ಗ್ರಾಹಕರ ಮೇಲೇನು ಪರಿಣಾಮ, ಇಲ್ಲಿದೆ ಡೀಟೇಲ್ಸ್

ನವದೆಹಲಿ, ಮಾರ್ಚ್ 14: ಆರ್​ಬಿಐನಿಂದ ಕಠಿಣ ಕ್ರಮಕ್ಕೆ ತುತ್ತಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ (Paytm Payments Bank) ಬಹುತೇಕ ಚಟುವಟಿಕೆ ಮಾರ್ಚ್ 15ಕ್ಕೆ ಸ್ಥಗಿತಗೊಳ್ಳಲಿದೆ. ಶುಕ್ರವಾರದ ಬಳಿಕ ಪೇಟಿಎಂ ಗ್ರಾಹಕರ ಮೇಲೆ ಆಗುವ ಪರಿಣಾಮಗಳೇನು, ಯಾವ್ಯಾವೆಲ್ಲಾ ಚಟುವಟಿಕೆಗಳಿಗೆ ಅವಕಾಶ ಇದೆ, ಪೇಟಿಎಂನ ಬೇರೆ ವ್ಯವಹಾರಗಳಿಗೆ ಇದರ ಪರಿಣಾಮ ಏನು ಎಂಬಿತ್ಯಾದಿ ವಿವರ ಇಲ್ಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್​ಬಿಐನಿಂದ ಕ್ರಮ ಎದುರಿಸುತ್ತಿರುವುದು ಯಾಕೆ ಎನ್ನುವ ವಿವರವೂ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 14, 2024 | 11:40 AM

Share
ಭಾರತೀಯ ರಿಸರ್ವ್ ಬ್ಯಾಂಕ್ 2023ರ ಜನವರಿ 31ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿತು. ಅದರಂತೆ ಮಾರ್ಚ್ 15ರ ಬಳಿಕ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಠೇವಣಿ ಪಡೆಯುವಂತಿಲ್ಲ ಎಂಬುದು ಒಂದು ಮುಖ್ಯ ನಿರ್ಬಂಧ.

1 / 8
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸರಿಯಾದ ದಾಖಲೆಗಳಿಲ್ಲದೇ ಹಲವು ಖಾತೆಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಇದರಿಂದ ಅಕ್ರಮ ಹಣ ವಹಿವಾಟು ನಡೆಯುವ ಅಪಾಯ ಇರುತ್ತದೆ. ಈ ಬಗ್ಗೆ ಆರ್​ಬಿಐ ಬಾರಿ ಬಾರಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಎಚ್ಚರಿಸುತ್ತಲೇ ಬಂದಿತ್ತು. ಆದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಅಂತಿಮವಾಗಿ ಬ್ಯಾಂಕ್ ಅನ್ನು ನಿರ್ಬಂಧಿಸುವುದು ಆರ್​ಬಿಐಗೆ ಅನಿವಾರ್ಯವಾಗಿತ್ತೆನ್ನಲಾಗಿದೆ.

2 / 8
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್​ಬಿಐನ ಪರವಾನಿಗೆ ಪಡೆದ ಬ್ಯಾಂಕ್ ಆದ್ದರಿಂದ ಅದರ ನಿಯಮ, ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ. ಆದರೆ, ಹಲವು ನಿಯಮಗಳನ್ನು ಪೇಮೆಂಟ್ಸ್ ಬ್ಯಾಂಕ್ ಗಾಳಿಗೆ ತೂರಿದೆ.

3 / 8
ಬ್ಯಾಂಕಿಂಗ್ ಲೈಸೆನ್ಸ್ ಪಡೆದ ಸಂಸ್ಥೆ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಹೆಚ್ಚಿನ ವ್ಯವಹಾರ ಪೇಟಿಎಂಗೆ ಸೀಮಿತವಾಗಿದೆ. ಎರಡಕ್ಕೂ ಒಬ್ಬರೇ ಮುಖ್ಯಸ್ಥರಾಗಿದ್ದಾರೆ. ಇದು ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ಕಣ್ಣು ಬೀಳಲು ಮತ್ತೊಂದು ಕಾರಣವಾಯಿತು.

4 / 8
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಹಲವು ಖಾತೆಗಳಿಗೆ ಕೆವೈಸಿ ದಾಖಲೆಗಳನ್ನು ಪಡೆಯಲಾಗಿಲ್ಲ. ಹಲವು ಖಾತೆಗಳಿಗೆ ಅಸಮರ್ಪಕ ದಾಖಲೆಗಳಿವೆ. ಒಂದು ಕೆವೈಸಿ ದಾಖಲೆಯನ್ನೇ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಉಪಯೋಗಿಸಲಾಗಿದೆ. ಬಹಳ ಹೆಚ್ಚಿನ ಸಂಖ್ಯೆಯ ಖಾತೆಗಳು ಸ್ಥಗಿತಗೊಂಡಿವೆ.

5 / 8
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಗಳು ಮತ್ತಿತರ ಅಂಶಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಹೀಗಾಗಿ, ಮಾರ್ಚ್ 15ರೊಳಗೆ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

6 / 8
ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವವರು ಹಣ ಡೆಪಾಸಿಟ್ ಮಾಡಲಾಗುವುದಿಲ್ಲ. ಪೇಟಿಎಂ ಫಾಸ್​ಟ್ಯಾಗ್​ಗೆ ರೀಚಾರ್ಜ್ ಮಾಡಲಾಗುವುದಿಲ್ಲ. ಪೇಟಿಎಂ ವ್ಯಾಲಟ್​​ಗೂ ಹಣ ಹಾಕಲು ಸಾಧ್ಯವಾಗುವುದಿಲ್ಲ.

7 / 8
ಆದರೆ, ಈಗಾಗಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಯಲ್ಲಿ ಹಣ ಇದ್ದರೆ ಅದನ್ನು ಬಳಸಬಹುದು. ಪೇಟಿಎಂ ವ್ಯಾಲಟ್​ ಮತ್ತು ಫಾಸ್​ಟ್ಯಾಗ್​ನಲ್ಲಿ ಹಣ ಇದ್ದರೆ ಅದನ್ನೂ ಬಳಕೆ ಮಾಡಬಹುದು. ಆ ಹಣ ಎಲ್ಲಿಯೂ ಹೋಗುವುದಿಲ್ಲ.

8 / 8
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ