ನವದೆಹಲಿ, ಅಕ್ಟೋಬರ್ 13: ಭಾರತದಲ್ಲಿ ಕ್ರಿಕೆಟ್ಗೆ ಅಪ್ಪಟ ಪ್ರೀತಿ ಇದೆ. ಕ್ರಿಕೆಟ್ ಹಬ್ಬವಾದ ಐಸಿಸಿ ವಿಶ್ವಕಪ್ಗೆ (ICC Cricket World Cup 2023) ಭಾರತ ಆತಿಥ್ಯ ವಹಿಸಿದೆ. 10 ತಂಡಗಳು ಪಾಲ್ಗೊಂಡಿರುವ ಮತ್ತು ನವೆಂಬರ್ 19ರವರೆಗೂ ನಡೆಯಲಿರುವ 50 ಓವರ್ಗಳ ಈ ಮಹಾ ಟೂರ್ನಿ ಕ್ರಿಕೆಟ್ ಪ್ರೇಮಿಗಳಿಗೆ ಅಕ್ಷರಶಃ ರಸದೌತಣ ನೀಡುತ್ತಿದೆ. ಸ್ಟೇಡಿಯಂ ಟಿಕೆಟ್ಗಳಿಗೆ, ಅದರಲ್ಲೂ ಭಾರತ ಆಡುವ ಪಂದ್ಯಗಳ ಟಿಕೆಟ್ಗಳು ಚಿನ್ನಕ್ಕಿಂತ ದುಬಾರಿ ದರದಲ್ಲಿ ಮಾರಾಟವಾಗುತ್ತಿವೆ. ಪ್ರಾಯೋಜಕತ್ವ, ಮೀಡಿಯಾ ಹಕ್ಕು, ಹೋಟೆಲ್, ವಿಮಾನ ಪ್ರಯಾಣ ಹೀಗೆ ಸಾಕಷ್ಟು ಸೈಡ್ ಎಫೆಕ್ಟ್ಗಳು ಈ ವಿಶ್ವಕಪ್ನಿಂದ ಆಗುತ್ತವೆ. ಇವೆಲ್ಲದರಿಂದ ಸಾಕಷ್ಟು ಲಾಭ ಆಗುತ್ತದೆ ಎಂದು ಸಹಜವಾಗಿ ಭಾವಿಸಬಹುದು. ಬ್ಯಾಂಕ್ ಆಫ್ ಬರೋಡಾದ ತಜ್ಞರು ಅಂದಾಜಿಸಿದ ಪ್ರಕಾರ ಈ ಬಾರಿಯ ವಿಶ್ವಕಪ್ನಿಂದ ಭಾರತದ ಆರ್ಥಿಕತೆಗೆ ಬರೋಬ್ಬರಿ 22,000 ಕೋಟಿ ರೂ ಲಾಭ ಆಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಸಿಎಲ್ ಷೇರಿಗೆ ಬೇಡಿಕೆ, ಇನ್ಫೋಸಿಸ್ ಷೇರುಬೆಲೆ ಕುಸಿತ
ಕ್ರಿಕೆಟ್ ವಿಶ್ವಕಪ್ ಅನ್ನು ಐಸಿಸಿ ಆಯೋಜಿಸುತ್ತದೆ. ಮುಂದಿನ ನಾಲ್ಕು ವರ್ಷದಲ್ಲಿ ಐಸಿಸಿ ಗಳಿಸುವ ಆದಾಯದಲ್ಲಿ ಶೇ. 40ರಷ್ಟು ಪಾಲು ಬಿಸಿಸಿಐಗೆ ಸಿಗುತ್ತದೆ. ಐಸಿಸಿಗೆ ಪ್ರತೀ ವರ್ಷ 600 ಮಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆ ಇದೆ. ಇದರಲ್ಲಿ ಬಿಸಿಸಿಐಗೆ 230 ಮಿಲಿಯನ್ ಡಾಲರ್ ಸಿಗಬಹುದು.
ಐಸಿಸಿ ತನಗೆ ಬರುವ ಆದಾಯವನ್ನು ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತದೆ. ಅದಕ್ಕೆ ನಾಲ್ಕು ಅಂಶಗಳು ಪರಿಗಣನೆಗೆ ಬರುತ್ತವೆ. ಅವು ಈ ಕೆಳಕಂಡಂತಿವೆ:
ಇದನ್ನೂ ಓದಿ: ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್ಗೆ ಪ್ರಯಾಣಿಸುವವರ ಗಮನಕ್ಕೆ
ಐಸಿಸಿಗೆ ಅತಿಹೆಚ್ಚು ಆದಾಯ ತಂದುಕೊಡುವುದು ಭಾರತವೇ. ಹಾಗೆಯೇ, ಕಳೆದ 16 ವರ್ಷದಲ್ಲಿ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ತೋರಿದೆ. ನಾಲ್ಕೂ ಮಾನದಂಡಗಳು ಬಿಸಿಸಿಐಗೆ ಒಗ್ಗುತ್ತವೆ. ಹೀಗಾಗಿ, ಐಸಿಸಿಯ ಆದಾಯದಲ್ಲಿ ಬಿಸಿಸಿಐಗೆ ಸಿಂಹಪಾಲು ಹೋಗುತ್ತದೆ.
2018ರಿಂದ 2022ರವರೆಗೆ ಬಿಸಿಸಿಐ ಬರೋಬ್ಬರಿ 27,411 ಕೋಟಿ ರೂ ಆದಾಯ ಗಳಿಸಿದೆ. ಮುಂದಿನ ನಾಲ್ಕು ವರ್ಷದಲ್ಲಿ ಪ್ರತೀ ವರ್ಷ ಐಸಿಸಿಯಿಂದ ಬಿಸಿಸಿಐ 1,914 ಕೋಟಿ ರೂ ಪಾಲು ಗಳಿಸುತ್ತದೆ. ಅದರ ಜೊತೆಗೆ ಟಿವಿ ಪಂದ್ಯಗಳ ಪ್ರಸಾರ ಹಕ್ಕು ಇತ್ಯಾದಿ ಮೂಲಕ ಬಿಸಿಸಿಐಗೆ ಹೇರಳ ಲಾಭ ಸಿಗುತ್ತದೆ. ಅಂತೆಯೇ, ಬಿಸಿಸಿಐ ವಿಶ್ವದ ಅತಿಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ